ಕೊರೋನ ಲಾಕ್ಡೌನ್ ವೇಳೆ ಚತುರತೆಯಿಂದ ಉಪಾಯ ಮಾಡಿದ ಅತ್ತೆ-ಸೊಸೆ|ಕೇವಲ ಅಡುಗೆ ಮಾಡಿ ಇವರು ಕಂಡುಕೊಂಡ ಲಾಭ ಎಷ್ಟು ಗೊತ್ತಾ!?

ಕೋವಿಡ್-19 ವೈರಸ್ ಹಾವಳಿಯಿಂದಾಗಿ ಎಷ್ಟೋ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ಹೋಗಿ ಇರುವಂತಾಯಿತು. ಅನೇಕರು ವ್ಯವಸಾಯ ಕೈಗೆತ್ತಿಕೊಳ್ಳಲು ಪ್ರಾರಂಭಿಸಿದರು. ನಗರದಲ್ಲಿಯೇ ಉಳಿದುಕೊಂಡ ಜನರು ಮನೆಯಲ್ಲಿಯೇ ತಾವು ಅನೇಕ ಕೆಲಸಗಳನ್ನು ಪ್ರಾರಂಭಿಸಿದರು ಎಂದರೆ ತಪ್ಪಾಗುವುದಿಲ್ಲ.

ಅನೇಕ ಜನರು ವಿಭಿನ್ನವಾದ ಕೆಲಸಗಳನ್ನು ಶುರು ಮಾಡಿ ತಮ್ಮ ಹೊಟ್ಟೆಪಾಡಿಗಾಗಿ ಸಂಪಾದನೆ ಕಂಡುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಲಾಕ್‌ಡೌನ್ ಜನರಿಗೆ ಎಷ್ಟು ತೊಂದರೆ ನೀಡಿದೆಯೋ ಅಷ್ಟೇ ಹೊಸ ಹೊಸ ಕೆಲಸಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದೆ ಎಂದರೆ ಸುಳ್ಳಲ್ಲ. ಇಲ್ಲಿಯೂ ನಿಮಗೆ ಅಂತಹದೇ ಒಂದು ನೈಜ ಕಥೆಯನ್ನು ನೀವೂ ಕೇಳ್ಳೇ ಬೇಕು.

ಹಿರಣ್ಯಮಯಿ ಶಿವಾನಿ ಎಂಬುವವರು ಮೂಲತಃ ಬಿಹಾರದವರಾಗಿದ್ದು, ಅವರ ಸೊಸೆ ಮಂಜರಿ ಸಿಂಗ್ ಜೊತೆಗೆ 2011ರಿಂದ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರಿಗೂ ಬಿಹಾರಿ ಪಾಕ ಪದ್ಧತಿಯ ಬಗ್ಗೆ ತುಂಬಾ ಪ್ರೀತಿ ಇದ್ದು, ಕೋವಿಡ್ ಎರಡನೆಯ ಅಲೆಯ ಸಮಯದಲ್ಲಿ, ಲಾಕ್‌ಡೌನ್ ನಿರ್ಬಂಧಗಳು ಸ್ಥಳೀಯರು ಮನೆಗೆ ಭೇಟಿ ನೀಡಲು ಮತ್ತು ದೆಹಲಿಯಲ್ಲಿ ಸುಲಭವಾಗಿ ಹೊರಗಡೆ ಹೋಗಿ ಬಿಹಾರಿ ಅಡುಗೆಗಳನ್ನು ಆನಂದಿಸಲು ಸಾಧ್ಯವಾಗಲಿಲ್ಲ.

“ನಾನು ಅಡುಗೆ ಮಾಡುವುದು ಎಂದರೆ ತುಂಬಾನೇ ಇಷ್ಟಪಡುತ್ತೇನೆ ಮತ್ತು ಆದ್ದರಿಂದ ಜನರು ನಮ್ಮ ಮನೆಗೆ ಹತ್ತಿರವಾಗುತ್ತಾರೆ ಎಂದು ಭಾವಿಸಿ, ಮನೆಯಲ್ಲಿ ಅಡುಗೆ ತಯಾರಿಸಿ ಚಿಕ್ಕ ಸ್ವಂತ ಕೆಲಸವನ್ನು ಸಾಂಪ್ರದಾಯಿಕ ಬಿಹಾರಿ ಪಾಕ ಪದ್ಧತಿ ಅನುಸರಿಸಿ ಮಾಡಲು ನಿರ್ಧರಿಸಿದೆ. ನಾನು ಈ ಪರಿಕಲ್ಪನೆಯನ್ನು ನನ್ನ ಸೊಸೆ ಮಂಜರಿಯೊಂದಿಗೆ ಹಂಚಿಕೊಂಡಿದ್ದೇನೆ. ಅವಳು ತಕ್ಷಣವೇ ಸರಿ ಎಂದು ಹೇಳಿದರು” ಎಂದು 58 ವರ್ಷದ ಅತ್ತೆ ಹೇಳುತ್ತಾರೆ.

ಬಿಹಾರಿ ಪಾಕ ಪದ್ಧತಿಯು ವಿಶ್ವದ ಅತ್ಯಂತ ವೈವಿಧ್ಯಮಯ ಪಾಕ ಪದ್ಧತಿಗಳಲ್ಲಿ ಒಂದಾಗಿದೆ. “ದೆಹಲಿಯಲ್ಲಿ ವಾಸಿಸುವ ಬಿಹಾರಿ ಸಮುದಾಯದ ಜನರು ನಾವು ತಯಾರಿಸಿದ ಅಡುಗೆಯನ್ನು ಇಷ್ಟಪಡಲು ಪ್ರಾರಂಭಿಸಿದರು” ಎಂದು ಹೇಳುತ್ತಾರೆ.ಆದ್ದರಿಂದ ಜುಲೈ 2021ರಲ್ಲಿ, ಹಿರಣ್ಯಮಯಿ ತನ್ನ ಮನೆಯಲ್ಲಿಯೇ ಕ್ಲೌಡ್ ಕಿಚನ್ ಎಂಬ ಪರಿಕಲ್ಪನೆಯೊಂದಿಗೆ ‘ದಿ ಚೌಂಕ್’ ಎಂಬ ಹೆಸರಿನಲ್ಲಿ ಆಹಾರ ತಯಾರಿಸಿ ನೀಡಲು ಪ್ರಾರಂಭಿಸಿದರು.

“ನಾನು ನನ್ನ ತಾಯಿಯಿಂದ ಬಳುವಳಿಯಾಗಿ ಬಂದ ಆಹಾರ ಪಾಕ ವಿಧಾನಗಳನ್ನು ಬಳಸುತ್ತೇನೆ ಮತ್ತು ತಲೆಮಾರುಗಳಿಂದ ಉಪಯೋಗಿಸುತ್ತಾ ಬಂದಂತಹ ಮಸಾಲೆ ಪದಾರ್ಥಗಳನ್ನು ಮತ್ತು ಪಾಕ ವಿಧಾನಗಳನ್ನು ಅನುಸರಿಸುತ್ತೇನೆ” ಎಂದು ವಿವರಿಸುತ್ತಾರೆ.ಇವರಿಬ್ಬರು ಬೇಳೆ, ತರಕಾರಿ, ರೋಟಿ, ಕಿಚಡಿ ಮತ್ತು ಆಚಾರ್‌ನಂತಹ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ವಾರಾಂತ್ಯದಲ್ಲಿ ಮಧ್ಯಾಹ್ನದ ಊಟವನ್ನು ನಾವು ಮಾಡಿಕೊಡುತ್ತೇವೆ ಮತ್ತು ವಿವಿಧ ರೀತಿಯ ಭಕ್ಷ್ಯಗಳನ್ನು ಮಾಡಿ ನಮ್ಮ ಗ್ರಾಹಕರಿಗೆ ನೀಡುತ್ತೇವೆ ಎಂದು ಮಂಜರಿ ಹೇಳುತ್ತಾರೆ.

ಇವರು ‘ಲಿಟಿ ಚೋಖಾ’ ದಂತಹ ಜನಪ್ರಿಯ ಭಕ್ಷ್ಯಗಳನ್ನು ಸಹ ಮಾಡಿಕೊಡುತ್ತಾರೆ. ಝಲ್ಮುರಿ, ಚುರಾ ಮಾತಾರ್, ಬಜ್ಕಾ, ಚುರಾ ಬಾದಮ್, ದಾಲ್ ಪುರಿಯಂತಹ ತಿಂಡಿ ಪದಾರ್ಥಗಳನ್ನು ಖೀರ್, ಸಟ್ಟು ಕಿ ಕಚೋರಿ ಮತ್ತು ಪುಲಾವ್‌ನೊಂದಿಗೆ ಬಡಿಸುತ್ತಾರೆ.ಎಲ್ಲಾ ಆಹಾರ ಪದಾರ್ಥಗಳು 110 ರಿಂದ 445 ರೂಪಾಯಿಗಳ ನಡುವೆ ಬೆಲೆಯಲ್ಲಿಯೇ ಇರುತ್ತವೆ ಎಂದು ಹೇಳುತ್ತಾರೆ.

ಆರಂಭದಲ್ಲಿ, ದಿನಕ್ಕೆ 40 ಆರ್ಡರ್‌ಗಳನ್ನು ಪಡೆದರು, ಅದು ಈಗ 450ಕ್ಕೆ ಏರಿದೆ ಎಂದು ಮಂಜರಿ ಹೇಳುತ್ತಾರೆ. ಇವರ ಸ್ಟಾರ್ಟ್ ಅಪ್ ತಿಂಗಳಿಗೆ 4 ಲಕ್ಷ ರೂಪಾಯಿ ಗಳಿಸುತ್ತದೆ. “ಲಿಟಿ ಚೋಖಾ ಅತ್ಯಂತ ಜನಪ್ರಿಯ ಆಹಾರ ಪದಾರ್ಥವಾಗಿದ್ದು, ಹಾಟ್ ಕೇಕ್‌ಗಳಂತೆ ಮಾರಾಟವಾಗುತ್ತದೆ” ಎಂದು ಮಂಜರಿ ಹೇಳಿಕೊಂಡಿದ್ದಾರೆ.”ನಮ್ಮ ಆಹಾರವನ್ನು ಸಾಂಪ್ರದಾಯಿಕ ಬಿಹಾರಿ ಮನೆಯಲ್ಲಿ ಕಂಡುಬರುವಷ್ಟೇ ಸರಳತೆಯಿಂದ ಮಾಡಲಾಗುತ್ತದೆ” ಎಂದೂ ಹೇಳುತ್ತಾರೆ.

ತಮ್ಮ ವ್ಯವಹಾರದ ಮತ್ತೊಂದು ವಿಶಿಷ್ಟತೆ ಎಂದರೆ ಪ್ಯಾಕೇಜಿಂಗ್‌ಗಾಗಿ ಯಾವುದೇ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಬಳಸುವುದಿಲ್ಲ ಎಂದು ಮಂಜರಿ ಹೇಳುತ್ತಾರೆ. “ನಾವು ಪರಿಸರ ಸ್ನೇಹಿ ಕಂಪನಿಯಾಗಲು ಬದ್ಧರಾಗಿದ್ದೇವೆ. ಆದ್ದರಿಂದ ನಾವು ಗಾಳಿಯಾಡದ ಗಾಜಿನ ಪಾತ್ರೆಗಳಲ್ಲಿ ಆಹಾರ ತಲುಪಿಸುತ್ತೇವೆ. ನಮ್ಮ ಗ್ರಾಹಕರು ಕಂಟೇನರ್ ಅನ್ನು ಮರುಬಳಕೆಗಾಗಿ ಇಟ್ಟುಕೊಳ್ಳುತ್ತಾರೆ” ಎಂದು ಹೇಳುತ್ತಾರೆ.”ನಾವು ಜೊಮ್ಯಾಟೊ, ಸ್ವಿಗ್ಗಿ ಮತ್ತು ಇತರ ಆಹಾರ ವಿತರಣಾ ವೇದಿಕೆಗಳಲ್ಲಿ ನಮ್ಮ ಚಿಕ್ಕ ಕ್ಲೌಡ್ ಕಿಚನ್ ಅನ್ನು ನೋಂದಾಯಿಸಿದ್ದೇವೆ” ಎಂದು ಮಂಜರಿ ಹೇಳುತ್ತಾರೆ.

ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ, ಬೆಂಗಳೂರು ಮತ್ತು ಜೈಪುರದಲ್ಲಿ ಸಹ ನಮ್ಮ ಮಳಿಗೆಗಳನ್ನು ತೆರೆಯುವ ಬಗ್ಗೆ ಈಗಾಗಲೇ ಕೆಲಸ ಮಾಡುತ್ತಿದ್ದೇವೆ ಎಂದು ಮಂಜರಿ ಹೇಳುತ್ತಾರೆ. “ನಾವು ಬಿಹಾರಿ ಪಾಕ ಪದ್ಧತಿಯನ್ನು ಪ್ರಪಂಚದಾದ್ಯಂತದ ಪ್ರತಿಯೊಬ್ಬ ಆಹಾರ ಪ್ರೇಮಿಗೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ” ಎಂದೂ ಇವರು ಹೇಳುತ್ತಾರೆ.

Leave A Reply

Your email address will not be published.