ಪತಿಯ ಮೇಲಿನ ಪ್ರೀತಿಗೆ ಕಳೆದ 31 ವರ್ಷಗಳಿಂದ ಕೇವಲ ಚಹಾ ಕುಡಿದೇ ಬದುಕಿದ ಪತ್ನಿ!! ಏನೀ ಪ್ರೇಮ್ ಕಹಾನಿ ??

ಭಾರತೀಯರು ಚಹಾ ಮತ್ತು ಕಾಫಿ ಪ್ರಿಯರು ಎಂದು ಹೇಳುವುದರಲ್ಲಿ ಅನುಮಾನವೇ ಇಲ್ಲ ಬಿಡಿ.ಬಿಡುವು ಸಿಕ್ಕರೆ ಸಾಕು 1 ಕಪ್ ಚಹಾ ಸವಿಯದೆ ಇರಲಾರರು. ಸಂಜೆ ವೇಳೆ ಮತ್ತು ಬೆಳಗ್ಗಿನ ಜಾವ ಒಂದು ಕಪ್ ಚಹಾ ಸೇವಿಸಿದರೆ ದೇಹಕ್ಕೆ ಮತ್ತಷ್ಟು ಬಿಸಿ ನೀಡುವುದಲ್ಲದೆ ಅಂದಿನ ದಿನವನ್ನು ಸಂತೋಷದಿಂದ ಕಳೆಯಲು ಸಾಧ್ಯವಾಗುತ್ತದೆ.

ಹಾಗಂದ ಮಾತ್ರಕ್ಕೆ ಇಡೀ ದಿನ ಚಹಾ ಸವಿದು ಬದುಕಲಾಗುತ್ತದೆಯೇ? ಆಗಲ್ಲ ಎಂಬುದು ಬಹುತೇಕ ಉತ್ತರವಾದರು ಇಲ್ಲೊಬ್ಬಳು ಮಹಿಳೆ ದಿನವಲ್ಲ, ವರ್ಷಾನುಗಟ್ಟೆಲೇ ಚಹಾ ಸೇವಿಸಿಯೇ ಬದುಕುತ್ತಿದ್ದಾಳೆ !

Ad Widget
Ad Widget

Ad Widget

Ad Widget

ಹೌದು. ಇದೊಂದು ನಿಜವಾದ ಸಾಕ್ಷಿಯಾಗಿದ್ದು,ಇಲ್ಲೊಬ್ಬಳು ಮಹಿಳೆ 31 ವರ್ಷಗಳಿಂದ ಕೇವಲ ಚಹಾ ಕುಡಿದು ಬದುಕಿದ್ದಾಳಂತೆ! ಆದರೆ ಚಹಾ ಕುಡಿದು ಜೀವಿಸುತ್ತಿರುವ ಹಿಂದೆ ಒಂದು ದುರಂತ ಕತೆಯಿದೆ. ಬರೋಬ್ಬರಿ 31 ವರ್ಷದಿಂದ ಮಹಿಳೆ ಆಹಾರ ಸೇವಿಸದೆ, ಚಹಾ ಸೇವಿಸಿ ಬದುಕುತ್ತಿದ್ದಾಳೆ ಎಂದರೆ ಅಚ್ಚರಿಯಲ್ಲದೆ ಮತ್ತೇನು..!

ಅಂದಹಾಗೆಯೇ ಬಿಹಾರದ ಹಾಜಿಪುರದ ನಿವಾಸಿ ಕಿರಣ್ ದೇವಿ ಎಂಬಾಕೆ 31 ವರ್ಷದಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾರೆ. ಹಾಗಾಗಿ ಮಹಿಳೆಯ ಈ ವಿಚಿತ್ರ ಅಭ್ಯಾಸದಿಂದಾಗಿ ಆಕೆಯನ್ನು ಚಾಯ್​ವಾಲಿ ದಾದಿ ಎಂದು ಊರಿನವರು ಕರೆಯುತ್ತಿದ್ದಾರಂತೆ.

ಮೊದಲೇ ಹೇಳಿದಂತೆ ಕಿರಣ್ ದೇವಿ ಅನೇಕ ವರ್ಷದಿಂದ ಚಹಾ ಸೇವಿಸಿಕೊಂಡು ಬಂದ ಹಿಂದೆ ದುರಂತ ಕತೆಯೊಂದು ಇದೆ. ಪತಿಯಿಂದಾಗಿ ಕಿರಣ್​ ದೇವಿ ಚಹಾ ಸೇವಿಸುತ್ತಾ ಬಂದಿದ್ದಾರೆ. ಅಂದಹಾಗೆಯೇ ಪತಿ ಏನಾದರು ಬಲವಂತವಾಗಿ ಚಹಾ ಕುಡಿಸಿದರೆ ಎಂಬ ಕಲ್ಪನೆ ನಿಮ್ಮಲ್ಲಿ ಬಂದಿರಬಹುದು? ಆದರೆ ಅದು ತಪ್ಪು..

ಪತಿಯ ಮರಣದ ನಂತರ ಕಿರಣ್ ದೇವಿ ತಾನು ಚಹಾ ಸೇವಿಸಿ ಬದುಕುವುದಾಗಿ ದೃಢಸಂಕಲ್ಪ ಮಾಡುತ್ತಾರೆ. ಅನ್ನ , ನೀರು ಸೇವಿಸದೆ ಚಹಾ ಮಾತ್ರ ಸೇವಿಸಿ ಬದುಕುತ್ತಾ ಬಂದಿದ್ದಾರೆ. 31 ವರ್ಷಗಳ ಹಿಂದೆ ಆಕೆಯ ಗಂಡ ಸಾವನ್ನಪ್ಪಿದ್ದರು.

ಗಂಡ ಸತ್ತ ನಂತರ ಆತನ ನೆನಪಿಗಾಗಿ ಕಿರಣ್ ದೇವಿ ಚಹಾ ಕುಡಿಯುತ್ತಾ ಬಂದಿದ್ದಾರೆ. ಆಹಾರ, ನೀರು ಯಾವುದನ್ನು ಸೇವಿಸುದಿಲ್ಲ ಈಕೆ. ಇದೊಂದು ವಿಚಿತ್ರ ಘಟನೆಯಾಗಿದ್ದು, ಪತಿಯ ಮೇಲಿನ ಪ್ರೀತಿ ಎಷ್ಟಿತ್ತು ಎಂಬುದನ್ನು ಕಿರಣ್ ದೇವಿ 31 ವರ್ಷಗಳಿಂದ ಚಹಾ ಮಾತ್ರ ಸೇವಿಸಿರುವ ಘಟನೆಯೇ ಹೇಳುತ್ತದೆ.

Leave a Reply

error: Content is protected !!
Scroll to Top
%d bloggers like this: