Day: October 6, 2021

ಎಡಮಂಗಲ : ರಿಕ್ಷಾ ಬೈಕ್ ಡಿಕ್ಕಿ – ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು

ಕಡಬ : ಎಡಮಂಗಲ ಗ್ರಾಮದ ಮರ್ದೂರಡ್ಕ ಎಂಬಲ್ಲಿ ರಿಕ್ಷಾ ಹಾಗೂ ಬೈಕ್ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅ.5 ರಂದು ನಡೆದಿದೆ. ಕೇಶವ ಎಂಬವರು ಬೈಕಲ್ಲಿ ಮರ್ದೂರಡ್ಕ ಕಡೆಗೆ ಹೋಗುತ್ತಿದ್ದಾಗ ಎಡಮಂಗಲ ಕಡೆಯಿಂದ ರೋಹಿತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ರಿಕ್ಷಾ ಡಿಕ್ಕಿಹೊಡೆಯಿತು. ಪರಿಣಾಮ ಬೈಕ್ ಚಾಲಕ ಕೇಶವ ಹಾಗೂ ಬೈಕ್ ರಸ್ತೆಗೆ ಬಿದ್ದು ಕೇಶವರ ಕೈಕಾಲಿಗೆ ಗಾಯವಾಗಿದ್ದು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ …

ಎಡಮಂಗಲ : ರಿಕ್ಷಾ ಬೈಕ್ ಡಿಕ್ಕಿ – ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು Read More »

ನಾರ್ಣಕಜೆ : ರಬ್ಬರ್ ಮರ ಸಾಗಾಟದ ಲಾರಿ ಪಲ್ಟಿ ,ಚಾಲಕನಿಗೆ ಗಾಯ

ಸುಬ್ರಹ್ಮಣ್ಯ : ರಬ್ಬರ್ ಮರ ಹೇರಿಕೊಂಡು ಹೋಗುತ್ತಿದ್ದ ಲಾರಿ ಮಗುಚಿ ಬಿದ್ದು ಚಾಲಕ ಗಾಯಗೊಂಡ ಘಟನೆ ಎಲಿಮಲೆ ಸಮೀಪ ನಾರ್ಣಕಜೆ ಎಂಬಲ್ಲಿ ನಡೆದಿದೆ. ಎಲಿಮಲೆಯಿಂದ ರಬ್ಬರ್ ಮರದ ತುಂಡುಗಳನ್ನು ಹೇರಿಕೊಂಡು ಕಣ್ಣೂರಿನ ತಳಿಪರಂಬಕ್ಕೆ ಹೋಗುತ್ತಿದ್ದ ಲಾರಿ ನಾರ್ಣಕಜೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಯ ಗಾರ್ಡನ್ ಗೆ ಡಿಕ್ಕಿ ಹೊಡೆದು ಮಗುಚಿ ಬಿತ್ತು. ಲಾರಿಯೊಳಗೆ ಸಿಲುಕಿದ್ದ ಇಬ್ಬರು ಎದುರಿನ ಒಡೆದ ಗ್ಲಾಸ್ ಮೂಲಕ ಹೊರಬಂದರು. ಘಟನೆಯಲ್ಲಿ ಲಾರಿ ಚಾಲಕ ಅನೀಶ್ ಎಂಬವರಿಗೆ ಗಾಯವಾಗಿದ್ದು,ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದು ಯುವತಿಗೆ ಸಾಲ ನೀಡಿ ಮಂಚಕ್ಕೆ ಕರೆದ ಅನ್ಯಕೋಮಿನ ಯುವಕ | ಹಿಂ.ಜಾ.ವೇ.ಯಿಂದ ಆರೋಪಿ ಪೊಲೀಸರ ವಶಕ್ಕೆ

ಉಡುಪಿ : ಹಿಂದು ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕನೊಬ್ಬ ಸಾಲ ನೀಡಿ ಮಂಚಕ್ಕೆ ಕರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪತ್ತೊಂಜಿಕಟ್ಟೆಯಿಂದ ವರದಿಯಾಗಿದೆ. ಯುವತಿಯೊಂದಿಗೆ ಅನ್ಯಕೋಮಿನ ಯುವಕ ಇದ್ದಾನೆ ಎಂದು ತಿಳಿದ ಹಿಂ.ಜಾ.ವೇ.ಕಾರ್ಯಕರ್ತರು ಆರೋಪಿ ಸಾದಿಕ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಿಂದು ಯುವತಿಯೋರ್ವಳಿಗೆ 2 ವರ್ಷದ ಹಿಂದೆ ಸಾದಿಕ್ ಎಂಬಾತನ ಪರಿಚಯವಾಗಿದ್ದು, ಬಳಿಕ ಆತನಿಂದ ಸಾಲವಾಗಿ ರೂ. 15 ಸಾವಿರ ಪಡೆದಿರುತ್ತಾರೆ. ಕೆಲ ಸಮಯದ ಅನಂತರ ಸಾದಿಕ್ ಸಾಲ ವಾಪಾಸು ನೀಡುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಮೂರು ತಿಂಗಳ …

ಹಿಂದು ಯುವತಿಗೆ ಸಾಲ ನೀಡಿ ಮಂಚಕ್ಕೆ ಕರೆದ ಅನ್ಯಕೋಮಿನ ಯುವಕ | ಹಿಂ.ಜಾ.ವೇ.ಯಿಂದ ಆರೋಪಿ ಪೊಲೀಸರ ವಶಕ್ಕೆ Read More »

ಸಂಘ ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ ,ಕುಮಾರಸ್ವಾಮಿಗೆ ಸಂಘದ ವಿಚಾರಧಾರೆ ಏನೆಂಬುದೇ ತಿಳಿದಿಲ್ಲ -ನಳಿನ್

ಕಾಮಾಲೆ ರೋಗ ಇರುವವರಿಗೆ ಪ್ರಪಂಚದಲ್ಲಿ ಕಾಣುವುದೆಲ್ಲಾ ಹಳದಿಯೇ ಆಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಅವರು ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಂಘದ ವಿಚಾರಧಾರೆ ಏನು ಎಂಬುದೇ ತಿಳಿದಿಲ್ಲ. ಮೊದಲು ಸಂಘದ ಶಾಖೆಗೆ ಭೇಟಿ ನೀಡಿ ಸಂಘದ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಸಂಘದ ಶಿಕ್ಷಣ ಪಡೆದರೆ ಅವರಿಗೂ ಒಳ್ಳೆಯದಾಗುತ್ತದೆ ಎಂದರು. ಸಂಘ ಯಾವತ್ತಿಗೂ ಈ ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಿಕೊಂಡು …

ಸಂಘ ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ ,ಕುಮಾರಸ್ವಾಮಿಗೆ ಸಂಘದ ವಿಚಾರಧಾರೆ ಏನೆಂಬುದೇ ತಿಳಿದಿಲ್ಲ -ನಳಿನ್ Read More »

ಜೆಡಿಎಸ್‌ನ ಮಿಷನ್ 123 ಅಲ್ಲ,ಮಿಷನ್ 23 -ಬಿ.ವೈ.ವಿಜಯೇಂದ್ರ

ಕಡಬ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಲು ಜೆಡಿಎಸ್ ಇದೀಗ ಮಿಷನ್ 123 ಎಂಬ ಕಾರ್ಯಾಗಾರ ನಡೆಸುತ್ತಿದೆ. ಅದು ಮಿಷನ್ 123 ಅಲ್ಲ, ಬದಲಾಗಿ ಅದು ಮಿಷನ್ 23 ಅಷ್ಟೆನೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅವರು ಬುಧವಾರ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಕಡಿಮೆ ಸೀಟು ಬಂದರೆ ಸಂತಸವಾಗುತ್ತದೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಇದ್ದಾಗ ಅಧಿಕಾರ ಹಂಚಿಕೊಳ್ಳಲು …

ಜೆಡಿಎಸ್‌ನ ಮಿಷನ್ 123 ಅಲ್ಲ,ಮಿಷನ್ 23 -ಬಿ.ವೈ.ವಿಜಯೇಂದ್ರ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ,ಧರ್ಮಸ್ಥಳ ಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ

ಕಡಬ : ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅ.6 ರಂದು ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ ಅಧ್ಯಕ್ಷರಾದ ಹೆಚ್.ಸಿ.ತಮ್ಮೇಶ್ ಗೌಡರು ಈ ಸಂದರ್ಭದಲ್ಲಿ ಜೊತೆಗಿದ್ದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಆಡಳಿತ ಕಛೇರಿಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಅವರು ವಿಜಯೇಂದ್ರ ಅವರನ್ನು ಬರಮಾಡಿಕೊಂಡರು. …

ಕುಕ್ಕೆ ಶ್ರೀ ಸುಬ್ರಹ್ಮಣ್ಯ ,ಧರ್ಮಸ್ಥಳ ಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ Read More »

ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹ್ಯತೆಗೆ ಶರಣಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನಿನಾ (19) ಎಂದು ಗುರುತಿಸಲಾಗಿದ್ದು, ಈಕೆ ಕಾಸರಗೋಡು ಮೂಲದವಳಾಗಿದ್ದು, ಕಂಕನಾಡಿಯ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಕಲಿಕೆಯನ್ನು ಮಾಡುತ್ತಿದ್ದಳು. ಬುಧವಾರ ಬಾತ್ ರೂಮ್ ನಲ್ಲಿ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಹೆತ್ತವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದ್ದೇನೆಂದು ಉಲ್ಲೇಖಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪುತ್ತೂರು:ಅಣಬೆ ಪದಾರ್ಥ ತಿಂದು 12 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು!! ಅಸ್ವಸ್ಥಗೊಂಡವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಇಬ್ಬರ ಸ್ಥಿತಿ ಗಂಭೀರ

ಇತ್ತೀಚೆಗೆ ಕೋಳಿ ಪದಾರ್ಥ ತಿಂದು ಓರ್ವ ಮೃತಟ್ಟು ಹಲವರು ಅಸ್ವಸ್ಥಗೊಂಡ ಘಟನೆ ಮಾಸುವ ಮುನ್ನವೇ,ಪುತ್ತೂರು ತಾಲೂಕಿನ ಪಡ್ನೂರು ಎಂಬಲ್ಲಿ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥಗೊಂಡ ಘಟನೆ ಇಂದು ನಡೆದಿದ್ದು,ಅಸ್ವಸ್ಥರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಇಂದು ಮಧ್ಯಾಹ್ನ ಊಟದ ಜೊತೆಗೆ ಅಣಬೆ ಪದಾರ್ಥ ಮಾಡಿದ್ದು, ಎಲ್ಲರೂ ಅಣಬೆ ಪದಾರ್ಥ ಸೇವಿಸಿದ್ದರು. ಕೆಲ ಹೊತ್ತಿನಲ್ಲೇ ಹಲವರು ಅಸ್ವಸ್ಥ ಗೊಂಡಿದ್ದು,ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡವರನ್ನು ರಾಘವ(42), ಲತಾ(35), ತ್ರಿಶಾ(10), ಕೇಶವ(45), …

ಪುತ್ತೂರು:ಅಣಬೆ ಪದಾರ್ಥ ತಿಂದು 12 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು!! ಅಸ್ವಸ್ಥಗೊಂಡವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಇಬ್ಬರ ಸ್ಥಿತಿ ಗಂಭೀರ Read More »

ಮಂಗಳೂರು‌ : ತಂದೆಯಿಂದ ಮಗನಿಗೆ ಗುಂಡು ಹಾರಾಟ | ಮಗನ ಮೆದುಳು ನಿಷ್ಕ್ರಿಯ ,ತಂದೆಗೆ ಹೃದಯಾಘಾತ

ಮಂಗಳೂರಿನ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ. ಉದ್ಯಮಿ ರಾಜೇಶ್ ಪ್ರಭು ಅವರ ಪುತ್ರ ಸುಧೀಂದ್ರ ಪ್ರಭು(16) ಮೃತ ಬಾಲಕ. ಸುಧೀಂದ್ರನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆತನ ಅಂಗಾಂಗಳ ದಾನ ಮಾಡುವ ಕುರಿತ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ ಹೃದಯಾಘಾತ: ಮಗನ ಮೆದುಳು ನಿಷ್ಕ್ರಿಯ ಸುದ್ದಿ ತಿಳಿಯುತ್ತಿದ್ದಂತೆ ರಾಜೇಶ್ ಪ್ರಭು ಅವರಿಗೆ ಹೃದಯಾಘಾತ ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಣಕಾಸು ವಿಷಯದಲ್ಲಿ ಉದ್ಯಮಿಯ ಪತ್ನಿ …

ಮಂಗಳೂರು‌ : ತಂದೆಯಿಂದ ಮಗನಿಗೆ ಗುಂಡು ಹಾರಾಟ | ಮಗನ ಮೆದುಳು ನಿಷ್ಕ್ರಿಯ ,ತಂದೆಗೆ ಹೃದಯಾಘಾತ Read More »

ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ | ಸದ್ಯದಲ್ಲೇ ಕತ್ತಲಲ್ಲಿ ಮುಳುಗಲಿದೆಯೇ ಭಾರತ ??!

ನವದೆಹಲಿ: ಭಾರತದಲ್ಲಿವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು,ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಡಿಮೆ ಪ್ರಮಾಣದ ಕಲ್ಲಿದ್ದಲು ದಾಸ್ತಾನು ಇದೆ.ಇದರ ಪರಿಣಾಮವಾಗಿ ಇಡೀ ದೇಶವೇ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ. ದೇಶದ 64 ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕಡಿಮೆ ಪ್ರಮಾಣದಲ್ಲಿದ್ದು, 4 ಜನಕ್ಕೆ ಮಾತ್ರ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. 25 ವಿದ್ಯುತ್ ಘಟಕಗಳಲ್ಲಿ 7 ದಿನಕ್ಕೆ ಸಾಕಾಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ.ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ದಾಖಲೆಯಲ್ಲಿ ಈ ಮಾಹಿತಿ ಲಭ್ಯವಾಗಿದ್ದು,ದೇಶದ 135 ವಿದ್ಯುತ್ ಉತ್ಪಾದನಾ ಘಟಕಗಳ ಮಾನಿಟರ್ …

ಭಾರತದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ | ಸದ್ಯದಲ್ಲೇ ಕತ್ತಲಲ್ಲಿ ಮುಳುಗಲಿದೆಯೇ ಭಾರತ ??! Read More »

error: Content is protected !!
Scroll to Top