ವಾಟ್ಸ್‌ಆ್ಯಪ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್ ಸ್ಥಗಿತ | ದಿಢೀರ್ ಸರ್ವರ್ ಡೌನ್ ,ಹೆಣಗಾಡಿದ ಬಳಕೆದಾರರು

ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮೆಸೆಂಜರ್‌, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಫೇಸ್ಟುಕ್ ಮೆಸೆಂಜರ್‌ ಅ.4ರ ರಾತ್ರಿ ದಿಢೀರ್ ಸರ್ವರ್ ಕೈಕೊಟ್ಟಿರುವುದರಿಂದ ಕಾರ ನಿರ್ವಹಣೆ ವಿಶ್ವದಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಸಂವಹನ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗಿದ್ದು ಬಳಕೆದಾರರು ಪೇಚಿಗೆ ಸಿಲುಕಿದ್ದಾರೆ.

ಈ ಬಗ್ಗೆ ಬಳಕೆದಾರರು ಟ್ವಿಟರ್‌ನಲ್ಲಿ ಸಮಸ್ಯೆ ಹೇಳಿಕೊಳ್ಳಲಾರಂಭಿಸಿರುವುದರಿಂದ ವಾಟ್ ಆ್ಯಪ್ ಕುರಿತು ಲಕ್ಷಾಂತರ ಟೀಟ್ ಪೋಸ್ಟ್ ಆಗಿರುವುದರಿಂದ ಟ್ವಿಟರ್‌ನಲ್ಲಿ ಈಗಾಗಲೇ ಟ್ರೆಂಡಿಂಗ್‌ನಲ್ಲಿದೆ.ಅಲ್ಲದೆ ಮೆಸೇಜಿಂಗ್‌ಗೆ ಹಲವರು ಈಗ ಟೆಲಿಗ್ರಾಮ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು, ಇನ್‌ಸ್ಟಾಲ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.

ತಾತ್ಕಾಲಿಕವಾಗಿ ಸರ್ವರ್ ಸ್ಥಗಿತಗೊಂಡಿರುವ ಕುರಿತು ಫೇಸ್ಟುಕ್ ಸಂಸ್ಥೆಯು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ಈ ಹಿಂದೆಯೂ ಅನೇಕ ಬಾರಿ ತಾತ್ಕಾಲಿಕವಾಗಿ ಸರ್ವರ್ ಸ್ಥಗಿತಗೊಂಡು ಅಲ್ಪಸಮಯದಲ್ಲೇ ಮರುಸ್ಥಾಪನೆಗೊಳ್ಳುತ್ತಿತ್ತು. ಈ ಬಾರಿ ಹಲವು ಸಮಯ ಸರ್ವರ್ ಸ್ಥಗಿತಗೊಂಡಿತ್ತು.

Leave A Reply

Your email address will not be published.