Day: September 30, 2021

ಮಂಗಳೂರು: ನಿನ್ನ ಮಗಳೊಂದಿಗೆ ರಸ್ತೆಯಲ್ಲಿ ಸಿಗು, ನಿನಗೂ ಹೊಡೆಯುತ್ತೇವೆ!!| ಖಾಸಗಿ ಮಾಧ್ಯಮ ನಡೆಸಿದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರೆಗೆ ಸಾರ್ವಜನಿಕವಾಗಿ ಬೆದರಿಕೆ

ಖಾಸಗಿ ಮಾಧ್ಯಮವೊಂದು ನಡೆಸಿದ ಡಿಬೇಟ್ ಕಾರ್ಯಕ್ರಮ ಒಂದಕ್ಕೆ ಕರೆ ಮಾಡಿದ ವ್ಯಕ್ತಿಯೊರ್ವ ಅತಿಥಿಯಾಗಿ ಚರ್ಚೆಯಲ್ಲಿ ಭಾಗವಹಿಸಿದ್ದ ರಾಜ್ಯ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಗೆ ನಡುರಸ್ತೆಯಲ್ಲಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲಿನ ಹಿಂದೂ ಸಂಘಟನೆಯ ಕಾರ್ಯಕರ್ತರ ನೈತಿಕ ಪೊಲೀಸ್ ಗಿರಿಯ ಬಗೆಗೆ ಖಾಸಗಿ ಮಾಧ್ಯಮ ನಡೆಸಿದ ಚರ್ಚಾ ಕೂಟದಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಪ್ರಶ್ನೆ ಕೇಳಲು ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಈ ಕಾರ್ಯಕ್ರಮದಲ್ಲಿ …

ಮಂಗಳೂರು: ನಿನ್ನ ಮಗಳೊಂದಿಗೆ ರಸ್ತೆಯಲ್ಲಿ ಸಿಗು, ನಿನಗೂ ಹೊಡೆಯುತ್ತೇವೆ!!| ಖಾಸಗಿ ಮಾಧ್ಯಮ ನಡೆಸಿದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರೆಗೆ ಸಾರ್ವಜನಿಕವಾಗಿ ಬೆದರಿಕೆ Read More »

ಬಿ.ಕಾಮ್ ಪದವೀಧರರಿಗೆ ಸುವರ್ಣಾವಕಾಶ!!ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿದೆ ಆಧಾರದಲ್ಲಿ ನೇಮಕಾತಿಗೆ ಆದೇಶ ಹೊರಡಿಸಿದ್ದು,ಜಿಲ್ಲೆಯ ವಿವಿಧ ತಾಲೂಕು ಪಂಚಾಯತ್ ಗಳ ಸಹಿತ ಜಿಲ್ಲಾ ಪಂಚಾಯತ್ ನಲ್ಲಿ ಆಡಳಿತಾತ್ಮಕ ಸಹಾಯಕ ಹುದ್ದೆಗೆ ನೇಮಕಾತಿ ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಮ್ ಪದವಿಯ ಜೊತೆಗೆ ಕಂಪ್ಯೂಟರ್ ಜ್ಞಾನ, ಕನಿಷ್ಠ ಎರಡು ವರ್ಷಗಳ ಅನುಭವದ ಸಹಿತ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಟೈಪಿಂಗ್ ಜ್ಞಾನ ಹೊಂದಿರಬೇಕಾಗಿದೆ. ಅರ್ಜಿಯನ್ನು ಒನ್ಲೈನ್ ನಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಗೆ ಯಾವುದೇ ಶುಲ್ಕ ಪಾವತಿಸುವ …

ಬಿ.ಕಾಮ್ ಪದವೀಧರರಿಗೆ ಸುವರ್ಣಾವಕಾಶ!!ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Read More »

ಅ.7-8 : ಮಂಗಳೂರಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರವಾಸ | ಅಗತ್ಯ ಸಿದ್ದತೆ -ಡಾ.ರಾಜೇಂದ್ರ ಕೆ.ವಿ

ಅ. 7, 8ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿವಾಸ್ತವ್ಯ ಹೂಡಲಿದ್ದು, ಇದಕ್ಕಾಗಿ ಭದ್ರತೆ ಸೇರಿದಂತೆ ಅಗತ್ಯ ಸಿದ್ಧತೆಗಳು ಆರಂಭಗೊಂಡಿವೆ. ಜಿಲ್ಲಾಡಳಿತದೊಂದಿಗೆ ಬೆಂಗಳೂರಿನಿಂದ ಏರ್ಪಡಿಸಲಾಗಿದ್ದ ವೀಡಿಯೋ ಸಂವಾದದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌ ಅವರಿಗೆ ಪೂರ್ವಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾಹಿತಿ ನೀಡಿದರು. ರಾಷ್ಟ್ರಪತಿ ಭವನದ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ವಾಸ್ತವ್ಯ, ಊಟೋಪಚಾರ ಹಾಗೂ ಜತೆಗೆ ಆಗಮಿಸುವ ಅಧಿಕಾರಿಗಳು, ಸಿಬಂದಿಗೆ ವಸತಿ, ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. …

ಅ.7-8 : ಮಂಗಳೂರಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರವಾಸ | ಅಗತ್ಯ ಸಿದ್ದತೆ -ಡಾ.ರಾಜೇಂದ್ರ ಕೆ.ವಿ Read More »

ಕೊಳ್ತಿಗೆ ಅನ್ಯಕೋಮಿನ ಯುವಕನ ಮನೆಯಲ್ಲಿ ಅಪ್ರಾಪ್ತ ಹಿಂದು ಯುವತಿ ಪತ್ತೆ ಪ್ರಕರಣ | ವಿವಾಹದ ಸಿದ್ದತೆ ಬಾಯ್ಬಿಟ್ಟ ಯುವಕ | ಯುವತಿ ಮನೆಯವರಿಂದ ನಾಪತ್ತೆ ದೂರು ದಾಖಲು | ಆದೂರು ಪೊಲೀಸರ ವಶದಲ್ಲಿ ಜೋಡಿ

ಪುತ್ತೂರು ತಾಲೂಕಿನ ಕೊಳ್ತಿಗೆ ಕುಂಟಿಕಾನ ಎಂಬಲ್ಲಿ ಸಿದ್ದೀಕ್ ಎಂಬಾತ ಅಪ್ರಾಪ್ತ ವಯಸ್ಸಿನ ಹಿಂದು ಯುವತಿಯನ್ನು ಅಪಹರಿಸಿ ಮನೆಯಲ್ಲಿ ಇರಿಸಿಕೊಂಡಿದ್ದಾನೆಂಬ ಮಾಹಿತಿಯರಿತ ಸ್ಥಳೀಯರು ಬುಧವಾರ ಆತನ ಮನೆಯ ಮುಂದೆ ಜಮಾಯಿಸಿ ಸ್ಥಳದಲ್ಲಿ ತುಸು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಾಗ ಯುವಕನ ಮನೆಯವರು ಬಾಗಿಲು ತೆರೆಯದೆ ಇದ್ದುದು, ಇನ್ನಷ್ಟು ಸಂಶಯಕ್ಕೆ ಕಾರಣವಾಯಿತು. ಕೆಲಹೊತ್ತು ಕಾದ ಪೊಲೀಸರು ಮನೆಯ ಬಾಗಿಲು ತೆರೆದ ಬಳಿಕ ಮನೆಯೊಳಗೆ ಹೋಗಿ ಹುಡುಕಾಡಿದಾಗ ಯುವತಿ ಮನೆಯೊಳಗೆ ಇರಲಿಲ್ಲ. ಈ ವೇ ಅಲ್ಲಿ …

ಕೊಳ್ತಿಗೆ ಅನ್ಯಕೋಮಿನ ಯುವಕನ ಮನೆಯಲ್ಲಿ ಅಪ್ರಾಪ್ತ ಹಿಂದು ಯುವತಿ ಪತ್ತೆ ಪ್ರಕರಣ | ವಿವಾಹದ ಸಿದ್ದತೆ ಬಾಯ್ಬಿಟ್ಟ ಯುವಕ | ಯುವತಿ ಮನೆಯವರಿಂದ ನಾಪತ್ತೆ ದೂರು ದಾಖಲು | ಆದೂರು ಪೊಲೀಸರ ವಶದಲ್ಲಿ ಜೋಡಿ Read More »

ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಪತ್ರಕರ್ತನಿಗೆ ₹1.61 ಕೋಟಿ ವಂಚಿಸಿದ ವಿಧಾನಸೌಧ ನೌಕರರು!

ಬೆಂಗಳೂರು: ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಪತ್ರಕರ್ತರೊಬ್ಬರಿಂದ 1.61 ಕೋಟಿ ರೂ. ಪಡೆದು ನಕಲಿ ಆದೇಶ ಪತ್ರ ಕೊಟ್ಟು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರ್ಕಾರಿ ಕೆಲಸವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಪ್ರತಿಯೊಬ್ಬರು ತಮಗೆ ಸರ್ಕಾರಿ ನೌಕರಿ ಸಿಗಲಿ ಎಂದು ಇಷ್ಟಪಡುತ್ತಾರೆ. ಅದಕ್ಕಾಗಿ ತುಂಬಾ ಪ್ರಯತ್ನವನ್ನು ಪಡುತ್ತಾರೆ. ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂಬುವವರ ಮಾತನ್ನು ನಂಬಿ ವಂಚಿತರಾಗುತ್ತಾರೆ. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್ ನಿವಾಸಿಯಾದ ಪತ್ರಕರ್ತ ಮಂಜುನಾಥ್ ಅವರು ವಿಧಾನಸೌಧ ನೌಕರರಿಂದ ವಂಚಿತರಾಗಿದ್ದಾರೆ. …

ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಪತ್ರಕರ್ತನಿಗೆ ₹1.61 ಕೋಟಿ ವಂಚಿಸಿದ ವಿಧಾನಸೌಧ ನೌಕರರು! Read More »

ಮದುವೆಯಾಗಲು ನಿರಾಕರಿಸಿದ ಪ್ರಿಯಕರ ,ಯುವ ಕಲಾವಿದೆ ನೇಣು ಬಿಗಿದು ಆತ್ಮಹತ್ಯೆ

ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೈ ಮನನೊಂದು ತೆಲುಗು ಚಿತ್ರರಂಗದ ಸಹ ಕಲಾವಿದೆ ಅನುರಾಧ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಸಾಕಷ್ಟು ಸಿನಿಮಾಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದ ಅನುರಾಧ, ಕಿರಣ್ ಎಂಬುವರನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆತನನ್ನೆ ಮದುವೆಯಾಗಬೇಕೆಂದು ಬಯಸಿದ್ದಳು.ಆದರೆ ಕಿರಣ್ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದಿದ್ದ ಅನುರಾಧ ಹೈದರಾಬಾದ್‍ನ ಬಂಜಾರಾ ಹಿಲ್ಸ್ ನಲ್ಲಿರುವ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ಅನುರಾಧ ನಾಲ್ಕು ದಿನಗಳಿಂದ ಮನೆಯಿಂದ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಹೊರೆಯವರು …

ಮದುವೆಯಾಗಲು ನಿರಾಕರಿಸಿದ ಪ್ರಿಯಕರ ,ಯುವ ಕಲಾವಿದೆ ನೇಣು ಬಿಗಿದು ಆತ್ಮಹತ್ಯೆ Read More »

ನಾಳೆಯಿಂದ ತನ್ನ ಎಟಿಎಂ ಸೇವೆ ನಿಲ್ಲಿಸಲಿದೆ ಈ ಬ್ಯಾಂಕ್ |ಇದಕ್ಕೆ ಕಾರಣವಾದರೂ ಏನು??

ಈಗಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಟೆಕ್ನಾಲಜಿಗೆ ಅವಲಂಬಿತರಾಗುತ್ತಾರೆ. ಎಲ್ಲಿ? ಹೇಗೆ? ಸಮಯ ಉಳಿತಾಯ ಮಾಡುವುದು ಎಂದು ನೋಡುತ್ತಿರುವ ಕಾಲಘಟ್ಟವಾಗಿದೆ. ಬ್ಯಾಂಕ್​​ ಗ್ರಾಹಕರಿಗೆ ಎಟಿಎಂ ಕೇಂದ್ರಗಳು ಅತ್ಯಾಪ್ತ ಸ್ನೇಹಿತನಾಗಿ ಯಾವುದೋ ಕಾಲವಾಗಿದೆ. ಅದಿಲ್ಲದೆ ಬ್ಯಾಂಕ್​ ವಹಿವಾಟು ಕಷ್ಟ ಎನ್ನುವಂತಾಗಿದೆ ಪರಿಸ್ಥಿತಿ. ಹೀಗಿರುವಾಗ ಒಂದು ಬ್ಯಾಂಕ್ ತನ್ನ ಎಟಿಎಂ ಯಂತ್ರಗಳ ಸೇವೆಯನ್ನು ಬಂದ್ ಮಾಡಲು ಹೊರಟಿದೆ. ಹೌದು ನಾಳೆ ಅಕ್ಟೋಬರ್​ 1ರಿಂದ ಸೂರ್ಯೋದಯ್ ಸ್ಮಾಲ್​ ಫಿನಾನ್ಸ್ ಬ್ಯಾಂಕ್ (Suryoday Small Finance Bank) ತನ್ನ ಎಟಿಎಂ ಯಂತ್ರಗಳು (ATMs) ಮೂಲಕ …

ನಾಳೆಯಿಂದ ತನ್ನ ಎಟಿಎಂ ಸೇವೆ ನಿಲ್ಲಿಸಲಿದೆ ಈ ಬ್ಯಾಂಕ್ |ಇದಕ್ಕೆ ಕಾರಣವಾದರೂ ಏನು?? Read More »

ಮತ್ತೆ ಮರುಕಳಿಸುತ್ತಿದೆ ಪ್ರಾಣಿಗಳ ಮಾರಣಹೋಮ | 16 ಕೋತಿಗಳನ್ನು ಕೊಂದು ಮೂಟೆಗಳಲ್ಲಿ ತಂದು ಬಿಸಾಡಿದ ದುಷ್ಕರ್ಮಿಗಳು

ಮೂಕ ಪ್ರಾಣಿಗಳು ಮನುಷ್ಯರಂತೆಯೇ ಜೀವಿಗಳು. ಅವುಗಳ ರಕ್ಷಣೆ ನಮ್ಮಿಂದಾಗಬೇಕೇ ವಿನಃ ವಿನಾಶ ಅಲ್ಲ.ಇತ್ತೀಚೆಗೆ ಹಾಸನದಲ್ಲಿ ಕೋತಿಗಳ ಮಾರಣಹೋಮ ಪ್ರಕರಣ, ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲು ಇಂತದ್ದೇ ಘಟನೆ ನಡೆಯುವ ಮೂಲಕ, ಮನುಷ್ಯರು ಮತ್ತೊಮ್ಮೆ ಮೃಗಗಳಂತೆ ವರ್ತಿಸಿದ್ದಾರೆ. ಕೋಲಾರ ನಗರ ಹೊರವಯದ ಟಮಕ ನಿರ್ಜನ ಪ್ರದೇಶದಲ್ಲಿ 16 ಕೋತಿಗಳ ಶವಗಳು ಪತ್ತೆಯಾಗಿದೆ, ಬೇರೆಕಡೆ ಕೋತಿಗಳಿಗೆ ವಿಷಪ್ರಾಸನ ಮಾಡಿ ಕೊಂದಿರುವ ದುಷ್ಕರ್ಮಿಗಳು, ಮೂರು ಮೂಟೆಗಳಲ್ಲಿ ಕೋತಿಗಳ ಶವಗಳನ್ನ ತಂದು ಬಿಸಾಡಿ ಹೋಗಿದ್ದಾರೆ. …

ಮತ್ತೆ ಮರುಕಳಿಸುತ್ತಿದೆ ಪ್ರಾಣಿಗಳ ಮಾರಣಹೋಮ | 16 ಕೋತಿಗಳನ್ನು ಕೊಂದು ಮೂಟೆಗಳಲ್ಲಿ ತಂದು ಬಿಸಾಡಿದ ದುಷ್ಕರ್ಮಿಗಳು Read More »

ವಾಕಿಂಗ್ ಸಪೋರ್ಟ್ ಹಿಡಿದು ಕೂತಿದ್ದ ಮಹಿಳೆ ಮೇಲೆ ಏಕಾಏಕಿ ಚಿರತೆ ದಾಳಿ | ಮುಂದಾಲೋಚನೆಯಿಂದ ತನ್ನ ವಾಕಿಂಗ್ ಸಪೋರ್ಟರನ್ನೇ ಅಸ್ತ್ರ ಮಾಡಿಕೊಂಡು ಹೋರಾಡಿದ ಮಹಿಳೆ !!

ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವು ಕಡೆಗಳಲ್ಲಿ ಕಾಡುಪ್ರಾಣಿಗಳು ಊರಿಗೆ ಹೆಜ್ಜೆ ಇಡುತ್ತಿರುವುದು ಮಾಮೂಲಾಗಿ ಹೋಗಿದೆ. ಇದರಿಂದ ಕಾಡಿನಂಚಿನಲ್ಲಿರುವ ಜನರು ರಾತ್ರಿ ಹೊತ್ತು ಹೊರಹೋಗಲು ಭೀತಿಗೊಳಗಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ಇತ್ತೀಚೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಚಿರತೆಯೊಂದು ರಾತ್ರಿ ವೇಳೆ ಊರಿಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಂಬೈನ ಗೋರೆಗಾವ್ ಬಳಿಯ ಆರೇ ಪ್ರದೇಶದಲ್ಲಿರುವ ವಿಸವ ವರ್ಕರ್ಸ್ …

ವಾಕಿಂಗ್ ಸಪೋರ್ಟ್ ಹಿಡಿದು ಕೂತಿದ್ದ ಮಹಿಳೆ ಮೇಲೆ ಏಕಾಏಕಿ ಚಿರತೆ ದಾಳಿ | ಮುಂದಾಲೋಚನೆಯಿಂದ ತನ್ನ ವಾಕಿಂಗ್ ಸಪೋರ್ಟರನ್ನೇ ಅಸ್ತ್ರ ಮಾಡಿಕೊಂಡು ಹೋರಾಡಿದ ಮಹಿಳೆ !! Read More »

ಕನ್ನಡ ಚಿತ್ರನಟಿ ಸೌಜನ್ಯಾ ನೇಣು ಬಿಗಿದು ಆತ್ಮಹತ್ಯೆ | ಧಾರಾವಾಹಿಗಳಲ್ಲೂ ಅಭಿನಯಿಸಿದ್ದ ಸೌಜನ್ಯಾ

ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯ ನಟಿ ಸೌಜನ್ಯಾ (25) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ನಿವಾಸಿ ಸೌಜನ್ಯ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡಬೆಲೆ ಗ್ರಾಮದ ಅಪಾರ್ಟ್‍ಮೆಂಟ್‍ನಲ್ಲಿ ತನ್ನ ಫ್ರೆಂಡ್ ವಿವೇಕ್ ಜೊತೆ ವಾಸವಾಗಿದ್ದರು. ವಿವೇಕ್‍ನನ್ನು ಊಟ ತರುವಂತೆ ಕಳುಹಿಸಿ ನಂತರ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನಟಿ ಸೌಜನ್ಯಾ ಅವರು ಚೌಕಟ್ಟು ಫನ್, ಸೇರಿದಂತೆ ಹಲವು …

ಕನ್ನಡ ಚಿತ್ರನಟಿ ಸೌಜನ್ಯಾ ನೇಣು ಬಿಗಿದು ಆತ್ಮಹತ್ಯೆ | ಧಾರಾವಾಹಿಗಳಲ್ಲೂ ಅಭಿನಯಿಸಿದ್ದ ಸೌಜನ್ಯಾ Read More »

error: Content is protected !!
Scroll to Top