ಪ್ರೇಯಸಿಯ ಕೈ ಕಾಲು ಕಟ್ಟಿ ಜೀವಂತವಾಗಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಕರಣ!! 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಪ್ರೇಯಸಿಯೊಂದಿಗೆ ಜಗಳವಾಡಿ, ಆಕೆಯ ಕೈಕಾಲು ಕಟ್ಟಿ ಹಾಕಿ ಸೂಟ್ ಕೇಸ್ ನಲ್ಲಿ ಜೀವಂತವಾಗಿ ತುಂಬಿಸಿ ಕಾಡಿನಲ್ಲಿ ಎಸೆದಿದ್ದ ಆರೋಪಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನ್ಯೂಯಾರ್ಕ್​​ನ ವೈಟ್​ ಪ್ಲೇನ್ಸ್​​ ನ ಫೆಡರಲ್​ ನ್ಯಾಯಾಲಯದ ನ್ಯಾಯಾಧೀಶ ವಿನ್ಸೆಂಟ್ ಬ್ರಿಚೆಟ್ಟಿ ಪ್ರಕಟಿಸಿದ್ದಾರೆ.

26 ವರ್ಷ ವಯಸ್ಸಿನ ಜೇವಿಯರ್​ ಡಾ.ಸಿಲ್ವಾ ಈ ಶಿಕ್ಷೆಗೆ ಗುರಿಯಾದವನಾಗಿದ್ದು, 2019ರಲ್ಲಿ ಈತ ಮಾಡಿದ್ದ ಕೃತ್ಯಕ್ಕೆ ಶಿಕ್ಷೆ ನೀಡಲಾಗಿದೆ. ಬುಕ್ ​ಸ್ಟೋರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿ ವ್ಯಾಲೆರಿ ರೆಯೆಸ್ ಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಡಾ.ಸಿಲ್ವಾ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು.

ಡಾ ಸಿಲ್ವಾ ಒಬ್ಬ ಸ್ವಾರ್ಥಿ, ಆಸೆಬುರುಕ ಎಂದು ರೆಯೆಸ್ ಳ​ ತಾಯಿ ಕೂಡ ಕೋರ್ಟ್​ ನಲ್ಲಿ ಹೇಳಿಕೆ ನೀಡಿದ್ದರು. ಡಾ.ಸಿಲ್ವಾ, ತನಗೂ ಮತ್ತು ರೆಯೆಸ್ ​ಗೂ ಸಂಬಂಧವಿತ್ತು.ಆದರೆ ಬ್ರೇಕ್​ ಅಪ್​ ಆಗಿತ್ತು. ಅದಾದ 9 ತಿಂಗಳ ನಂತರ ಅವಳ ಅಪಾರ್ಟ್​ಮೆಂಟ್​ ನಲ್ಲೇ ನಮ್ಮಿಬ್ಬರಿಗೂ ಸಿಕ್ಕಾಪಟೆ ಜಗಳ ನಡೆದಿರುವುದು ನಿಜ ಎಂದು ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದ. ಜಗಳದ ಬಳಿಕ ಸೂಟ್​ ಕೇಸ್​ ನಲ್ಲಿ ರೆಯೆಸ್ ಳನ್ನು ತುಂಬಿ ಗ್ರೀನ್​ ವಿಚ್​ ಕಾಡಿನಲ್ಲಿ ಎಸೆದಿದ್ದ. ಅದು ಒಂದು ವಾರದ ಬಳಿಕ ವ್ಯಕ್ತಿಯೊಬ್ಬರಿಗೆ ಸಿಕ್ಕಿತ್ತು. ಅದಾಗಲೇ ರೆಯೆಸ್​ ಉಸಿರುಕಟ್ಟಿ ಮೃತಪಟ್ಟಿದ್ದಳು.

ಪ್ರಕರಣ ದಾಖಲಾದ ಬಳಿಕ ಡಾ.ಸಿಲ್ವಾ, ರೆಯೆಸ್ ತಾಯಿ ಎದುರು ಬಂದು ಕಣ್ಣೀರು ಹಾಕಿ ಕ್ಷಮೆ ಕೇಳಿದ್ದ. ಈ ವಿಚಾರವನ್ನು ಕೋರ್ಟ್ ನಲ್ಲಿ ಸಿಲ್ವಾ ಲಾಯರ್ ಬಲವಾಗಿ ವಾದಿಸಿದ್ದರು. ಆತ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡುತ್ತಿದ್ದಾನೆ. ಅವರಿಗೆ ಕ್ಷಮೆ ನೀಡಬೇಕು ಎಂದು ಕೋರಿದ್ದರು.

ಆದರೆ, ಡಾ.ಸಿಲ್ವಾನ ಲಾಯರ್ ನ ವಾದವನ್ನು ಪ್ರಾಸಿಕ್ಯೂಟರ್ ಒಪ್ಪಲಿಲ್ಲ. ಯುವತಿಯನ್ನು ಸೂಟ್ ​ಕೇಸ್​ ನಲ್ಲಿ ಹಾಕುವಾಗ ಆತ ಪಶ್ಚಾತ್ತಾಪ ಪಡಲಿಲ್ಲ. ಅಷ್ಟೇ ಅಲ್ಲ, ಆಕೆಯದ್ದೇ ಡೆಬಿಟ್​ ಕಾರ್ಡ್​ ಬಳಸಿ 5000 ಡಾಲರ್​ ಗಳಷ್ಟು ಹಣ ವಿತ್​ ಡ್ರಾ ಮಾಡಿದ್ದಾನೆ. ಅವಳ ಐಪ್ಯಾಡ್​ ಕೂಡ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಧೀಶರಿಗೆ ಹೇಳಿದ್ದರು.

Leave A Reply

Your email address will not be published.