ಒಬ್ಬ ಬಾಯ್ ಫ್ರೆಂಡ್ ಗಾಗಿ ಮೂರು ಹುಡುಗಿಯರ ಹೊಡೆದಾಟ!!|ಒಬ್ಬರಿಗೊಬ್ಬರು ಜುಟ್ಟು ಹಿಡಿದು ಎಳೆದಾಡಿ ಕೊನೆಗೆ ಆತ ಸಿಕ್ಕಿದ್ದು!!?

ನಾವೆಲ್ಲರೂ ಒಂದು ಹುಡುಗಿಗಾಗಿ ಸಾಲು ಸಾಲು ಹುಡುಗರು ನಿಂತು, ಆಕೆ ನನ್ನವಳು ಎಂದು ಕಿತ್ತಾಡುವುದನ್ನು ನೋಡಿರುತ್ತೇವೆ.ಆದರೆ ಇಲ್ಲಿ ಒಬ್ಬ ಬಾಯ್ ಫ್ರೆಂಡ್ ಗಾಗಿ ಮೂವರು ಹುಡುಗಿಯರು ಹೊಡೆದಾಡುತ್ತಿರುವುದು ವಿಚಿತ್ರವೇ ಸರಿ. ಆದ್ರೆ ಹುಡುಗಿಯರ ಈ ಫೈಟ್ ನೋಡಿ ಜನರು ಎಂಜಾಯ್ ಮಾಡಿದ್ದು ಅಂತೂ ಸುಳ್ಳಲ್ಲ.

ಅಷ್ಟಕ್ಕೂ ಈ ಘಟನೆ ನಡೆದಿರೋದು ಬಿಹಾರದ ಮುಜ಼ಫ್ಫರ್‌ಪುರ ನಗರದ ಮಾಲ್ ಒಂದರಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ.ಬಾಯ್‌ಫ್ರೆಂಡ್ ಒಬ್ಬನ ವಿಚಾರವಾಗಿ ಮೂವರು ಯುವತಿಯರು ಹೊಡೆದಾಡುತ್ತಿರುವ ವಿಡಿಯೋವೊಂದು ರೆಕಾರ್ಡ್ ಆಗಿದ್ದು, ಆನ್ಲೈನ್‌ನಲ್ಲಿ ವೈರಲ್ ಆಗಿದೆ.

ಒಬ್ಬ ಯುವಕನಿಗಾಗಿ ಮೂವರು ಹುಡುಗಿಯರು ಕಚ್ಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.ನೋಡು ನೋಡುತ್ತಲೇ ಗಲಾಟೆಯಲ್ಲಿ ನಾಲ್ಕನೇ ಹುಡುಗಿ ಸೇರಿಕೊಂಡು ಒಬ್ಬರ ಜುಟ್ಟು ಒಬ್ಬರು ಹಿಡಿದು ರಂಪಾಟ ಮಾಡುತ್ತಿರುವುದನ್ನು ಸಹ ಅಲ್ಲಿ ನೋಡಬಹುದಾಗಿದೆ.

Ad Widget / / Ad Widget

ಹುಡುಗಿಯರ ಈ ಜಗಳ ನೋಡಲು ಜನರು ಸೇರಿದ್ದು, ಅವರ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.ಇವರ ಈ ರಂಪಾಟದಿಂದ ಬೇಸತ್ತ ಮಾಲ್‌ನ ಸಿಬ್ಬಂದಿ ಚೆನ್ನಾಗಿ ಬೈದು ಹೊರಗೆ ಹೋಗುವಂತೆ ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಬಾಯ್‌ಫ್ರೆಂಡ್‌ಗಾಗಿ ನಾಲ್ಕು ಹುಡುಗಿಯರ ಫೈಟ್ ಮುಂದೇನಾಯಿತು, ಬಾಯ್ ಫ್ರೆಂಡ್ ಆಯ್ಕೆ ಯಾರಾ ಪಾಲಾಗಿದ್ದು ಎಂಬುದು ಗೊತ್ತಾಗಿಲ್ಲ. ಅಲ್ಲದೇ ಜಗಳ ಯಾವ ಹಂತ ತಲುಪಿತು, ಯಾವ ವಿಷಯಕ್ಕೆ ನಡೆದಿದೆ ಎಂಬುದು ಗೊತ್ತಾಗಿಲ್ಲ.

Leave a Reply

error: Content is protected !!
Scroll to Top
%d bloggers like this: