ನರಿಮೊಗರು ಗ್ರಾ.ಪಂ.ಡಿಜಿಟಲ್ ಗ್ರಂಥಾಲಯ ಕಾಮಗಾರಿಗೆ ಚಾಲನೆ

ನರಿಮೊಗರು : ನರಿಮೊಗರು ಗ್ರಾ.ಪಂ.ನಲ್ಲಿ ಡಿಜಿಟಲ್ ಗ್ರಂಥಾಲಯದ ಕಾಮಗಾರಿಗೆ ಚಾಲನೆ ಸೆ.22ರಂದು ನಡೆಯಿತು.

ಸುಮಾರು 7.50 ಲಕ್ಷ ವೆಚ್ಚದಲ್ಲಿ ಡಿಜಿಟಲೀಕರಣ ಕಾಮಗಾರಿ ನಡೆಯಲಿದ್ದು,ರೂ. 4.00 ಲಕ್ಷ ಮೇಘ ಫುಟ್ ಪ್ರೊಸೆಸಿಂಗ್ ಪ್ರೈಲಿ. (ಬಿಂದು ಪ್ಯಾಕ್ಟರಿ) ಇವರಿಂದ, ರೂ. 3.00 ಪುತ್ತೂರು ತಾಲೂಕು ಪಂಚಾಯತ್‌ನಿಂದ ಹಾಗೂ ರೂ. 50,000 ನರಿಮೊಗ್ರು ಗ್ರಾಪಂ ನ ಅನುದಾನ ಬಳಸಿಕೊಳ್ಳಲಾಗುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ವಿದ್ಯಾ ಎ ಇವರ ವಹಿಸಿ ಗ್ರಂಥಾಲಯ ಡಿಜಿಟಲೀಕರಣದಿಂದ ಗ್ರಾಮಸ್ಥರಿಗೆ ಜ್ಞಾನ ಸಂಪಾದನೆಗೆ ದಾರಿಯಾಗಲಿ ಎಂದು ಹಾರೈಸಿದರು.

ಗ್ರಾ.ಪಂ.ಉಪಾಧ್ಯಕ್ಷ ಸುಧಾಕರ್‌ ಕುಲಾಲ್ ಮಾತನಾಡಿ ,ದೇಶದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತಮಹೋತ್ಸವದ ನೆನಪಿಗಾಗಿ ಈ ಗಂಥಾಲಯ ಡಿಜಿಟಲೀಕರಣಗೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

ಡಿಜಿಟಲ್ ಗ್ರಂಥಾಲಯ ಕಾಮಗಾರಿಗೆ ಚಾಲನೆ ನೀಡಿದ ಪುತ್ತೂರು ತಾ.ಪಂ.ಕಾರ್ಯನಿರ್ಹಣಾಧಿಕಾರಿ ನವೀನ್ ಭಂಡಾರಿ ಹೆಚ್ ಮಾತನಾಡಿ,ಗ್ರಂಥಾಲಯ ಡಿಟಲೀಕರಣದಲ್ಲಿ ಬಿಂದು ಸಂಸ್ಥೆಯ ಸಹಕಾರವನ್ನು ಶ್ಲಾಘಿಸಿದರು.ಗ್ರಾಮಾಭಿವೃದ್ದಿಯಲ್ಲಿ ಸಂಸ್ಥೆಗಳು ಕೈಜೋಡಿಸಿದಾಗ ಅಭಿವೃದ್ಧಿ ವೇಗವಾಗಲು ಸಾಧ್ಯ ಎಂದರು.

ಮುಖ್ಯ ಅತಿಥಿ ಮೇಘ ಫ್ರುಟ್ ಪ್ರೊಸೆಸಿಂಗ್ ಪ್ರೈ.ಲಿ.ನ ಮಾಲಕ ಸತ್ಯಶಂಕರ್ ಮಾತನಾಡಿ, ಗ್ರಾಮ ಮಟ್ಟದಲ್ಲಿ ಗ್ರಂಥಾಲಯ ಡಿಜಿಟಲೀಕರಣಗೊಳ್ಳುವುದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಜ್ಞಾನರ್ಜನೆಗೆ ಸಹಕಾರಿಯಾಗಲಿದೆ ಎಂದರು.

ಗ್ರಾ.ಪಂ.ಕಾರ್ಯದರ್ಶಿ ಖಲಂದರ್ ಆಲಿ,ಗ್ರಂಥಾಲಯ ಮೇಲ್ವಿಚಾರಕ ವರುಣ್ ಕುಮಾರ್ ಮೊದಲಾದವರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.