ರಾತ್ರಿ ಊಟ ಮಾಡಿ ಗಂಡನೊಂದಿಗೆ ಮಲಗಿದ್ದ ಮಹಿಳೆ ಸಾವು!!ಆಕೆಯ ಸಾವಿಗೆ ಗಂಡನ ಖಾಸಗಿ ಅಂಗ ಕಾರಣ ಎಂಬ ವದಂತಿ|

ಅರೋಗ್ಯವಾಗಿದ್ದ ಮಹಿಳೆ, ರಾತ್ರಿ ಊಟ ಮಾಡಿ ಗಂಡನೊಂದಿಗೆ ಮಂಚದಲ್ಲಿ ಮಲಗಿದ್ದು, ಬೆಳಗ್ಗೆ ಆಗುವಾಗ ಹೆಣವಾಗಿದ್ದಾರೆ. ನಂತರ ಇದೊಂದು ಸಹಜ ಸಾವು ಎಂದು ಮನೆಯವರು, ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಆ ಬಳಿಕ ನಡೆದ ಉಹಾಪೋಹಾದಿಂದಾಗಿ ಮಹಿಳೆಯ ಗಂಡನ ಖಾಸಗಿ ಅಂಗವನ್ನು ಪೊಲೀಸರು ಪರಿಶೀಲನೆ ನಡೆಸಿದ ವಿಚಿತ್ರ ಘಟನೆಯೊಂದು ಇಂಡೋನೇಷ್ಯಾದಿಂದ ವರದಿಯಾಗಿದೆ.

ಘಟನೆ ವಿವರ:55 ವರ್ಷದ ನೇದಿ ಎಂಬವರು ತಮ್ಮ ಮಗಳನ್ನು ಕೆಲ ದಿನಗಳ ಹಿಂದೆ ಮದುವೆಮಾಡಿಕೊಟ್ಟಿದ್ದರು.ಮದುವೆಯಾದ ಜೋಡಿಯು ಬಹಳ ಅನ್ಯೋನ್ಯವಾಗಿಯೂ ಇದ್ದರೂ. ಆದರೆ ಫೆಬ್ರವರಿ 25ರಂದು ಇದ್ದಕ್ಕಿದ್ದಂತೆ ಗಂಡನೊಂದಿಗೆ ಮಲಗಿದ್ದ ಮಗಳು ಬೆಳಿಗ್ಗೆ ಎದ್ದಿರಲಿಲ್ಲ, ಸಹಜವಾಗಿ ಸಾವು ಎಂದು ಮನೆಯವರು ಅಂತ್ಯಕ್ರಿಯೆ ನೆರವೇರಿಸಿದ್ದರು.

ಇದಾದ ಕೆಲ ದಿನಗಳ ಬಳಿಕ ಊರಿನಲ್ಲಿ ಕೆಲವರು ಆಕೆಯ ಗಂಡನ ಖಾಸಗಿ ಅಂಗದ ಬಗ್ಗೆ ಮಾತನಾಡಿಕೊಳ್ಳಲು ಶುರುಮಾಡಿದ್ದರು. ಆತನ ಖಾಸಗಿ ಅಂಗ ಬಹಳ ದೊಡ್ಡದಿದ್ದು, ಸಂಭೋಗ ನಡೆಸುವಾಗ ಆಕೆ ಮೃತಪಟ್ಟಿದ್ದಾಳೆ,ಈಗ ಅದನ್ನು ಮುಚ್ಚಿಹಾಕಲಾಗಿದೆ ಎಂಬೆಲ್ಲ ವದಂತಿಗಳು ಹಬ್ಬಿದ್ದವು. ಇದರ ಸತ್ಯಾಸತ್ಯತೆ ತಿಳಿಯಲು ಮೃತಪಟ್ಟ ಮಹಿಳೆಯ ತಂದೆ ಪೊಲೀಸರ ಮೊರೆ ಹೋಗಿದ್ದರು.

Ad Widget / / Ad Widget

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಆತನ ಖಾಸಗಿ ಅಂಗವನ್ನು ಅಳತೆ ಮಾಡಿದಲ್ಲದೆ, ಪರೀಕ್ಷೆ ನಡೆಸಿದಾಗ ಸಾಮಾನ್ಯವಾಗಿತ್ತು. ಆ ಬಳಿಕ ಆತನನ್ನು ಬಿಡುಗಡೆಗೊಳಿಸಿದರು.ಸದ್ಯ ಆ ಮಹಿಳೆ ಸಾಯಲು ಆಕೆಗೆ 14ನೇ ವರ್ಷ ಪ್ರಾಯದಿಂದ ಎಪಿಲೆಸ್ಸಿ ಎಂಬ ಖಾಯಿಲೆ ಇದ್ದು,ಅದೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ದೃಢಪಟ್ಟಿದೆ.ಒಟ್ಟಿನಲ್ಲಿ ವದಂತಿಯಿಂದಾಗಿ ಇಡೀ ವಿಶ್ವವೇ ಆತನ ಜನನಾಂಗ ದ ಬಗೆಗೆ ಅಚ್ಚರಿಯಿಂದ ಮಾತನಾಡಿಕೊಂಡಿದ್ದರು.

Leave a Reply

error: Content is protected !!
Scroll to Top
%d bloggers like this: