ಸವಣೂರು : ರೈತ ಸಂಘದ ಸಮಾಲೋಚನಾ ಸಭೆ

ಸವಣೂರು : ಸವಣೂರು ವಲಯದ ರೈತ ಸಂಘದ ವತಿಯಿಂದ ರೈತರ ಸಮಾಲೋಚನಾ ಸಭೆ ಸಂಘದ ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ ಅಧ್ಯಕ್ಷತೆಯಲ್ಲಿ ಸವಣೂರು ವಿನಾಯಕ ಸಭಾಭವನದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ.ಜಿಲ್ಲಾಧ್ಯಕ್ಷ ಶ್ರೀಧರ ರೈರವರು ಮಾತನಾಡಿ ರೈತರು ಸಂಘಟಿತರಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ರೈತರ ಪರ ನಿರಂತರವಾಗಿ ರೈತ ಸಂಘ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲವು ಮಂದಿ ಯುವಕರು ರೈತ ಸಂಘ ಸೇರ್ಪಡೆಯಾದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ. ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ರೈತ ಮುಖಂಡರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಹೊನ್ನಪ್ಪ ಗೌಡ ಪರಣೆ, ರೂಪೇಶ್ ಶೆಟ್ಟಿ ಅಲಿಮಾರು-ನೆಕ್ಕಿಲಾಡಿ, ರೈತ ಮುಖಂಡ ಮಹಮ್ಮದ್ ಕುಂಞ, ರೈತ ಸಂಘದ ಸವಣೂರು ವಲಯ ಕಾರ್ಯದರ್ಶಿ ವೆಂಕಪ್ಪ ಅಡೀಲು ಪ್ರಗತಿಪರ ಕೃಷಿಕರಾದ ಸುದರ್ಶನ್ ನಾಕ್ ಕಂಪ, ವೆಂಕಟೇಶ್ ಭಟ್ ಉಪಸ್ಥಿತರಿದ್ದರು.

Ad Widget / / Ad Widget

ಬೆಳಿಯಪ್ಪ ಗೌಡ ಚೌಕಿಮಠ ಕಾರ್ಯಕ್ರಮ ನಿರೂಪಿಸಿ, ಭರತ್ ರೈ ಸೂಡಿಮುಳ್ಳು ವಂದಿಸಿದರು.

Leave a Reply

error: Content is protected !!
Scroll to Top
%d bloggers like this: