ದ.ಕ. ಜಿಲ್ಲೆಯ 16 ಮಂದಿ ಗ್ರಾ.ಪಂ ಗ್ರೇಡ್-1 ಕಾರ್ಯದರ್ಶಿಗಳಿಗೆ ಪಿಡಿಓಗಳಾಗಿ ಮುಂಭಡ್ತಿ

ಪುತ್ತೂರು: ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್-1 ಕಾರ್ಯದರ್ಶಿಯವರನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾಗಿ ಮುಂಭಡ್ತಿ ನೀಡಿ ವರ್ಗಾವಣೆಗಳಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ನೇಮಕಾತಿ ಅಧಿಕಾರಿಗಳು ಆದೇಶ ಮಾಡಿದ್ದಾರೆ.

ಗ್ರೇಡ್-1 ಕಾರ್ಯದರ್ಶಿಗಳಾಗಿದ್ದ ಬನ್ನೂರು ಗ್ರಾಪಂನ ಕಾರ್ಯದರ್ಶಿ, ಪ್ರಸ್ತುತ ಜಿ.ಪಂಗೆ ನಿಯೋಜನೆಗೊಂಡಿರುವ ಶೇಖರ್‌ ಗೌಡ ಅವರು ಕುಡಿಪ್ಪಾಡಿ ಗ್ರಾ.ಪಂ. ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾ.ಪಂಥ. ಶ್ರೀಶೈಲ ಢಣುರ ವಿಟ್ಲ ಪಡ್ನೂರು ಗ್ರಾ.ಪಂ., ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಕಮಲ್‌ರಾಜ್ ಕಾಣಿಯೂರು ಗ್ರಾ.ಪಂ. ಆರ್ಯಾಪು ಪಂ.ನ ಅನುಷಾ ಡಿ. ಬೆಳ್ಳಾರೆ ಗ್ರಾ.ಪಂ, ಮಂಗಳೂರು ಅಡ್ಯಾರು ಗ್ರಾ.ಪನ : ಪಂಕಜ ಬಂಟ್ವಾಳದ ಅನಂತಾಡಿ ಗ್ರಾ.ಪಂ., ಸುಳ್ಯದ ಬೆಳ್ಳಾರೆ ಗ್ರಾಪಂ.ನ ಭವ್ಯ ಎಂಬ ಕಡಬದ ಎಡಮಂಗಲ ಗ್ರಾ.ಪಂ., ಬಂಟ್ವಾಳದ ಪಜೀರು ಗ್ರಾಪಂನ ಅಶ್ವಿನಿ ಬಿ. ರವರು ಪೆರ್ನೆ ಗ್ರಾ.ಪಂ,ಬಂಟ್ವಾಳ ಬಾಳೆಪುಣಿಯ ವಿಜಯಲಕ್ಷ್ಮಿ ಅವರು ಸಜಿಪಮುನ್ನೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾಗಿ ಪದೋನ್ನತಿ ಪಡೆದು ವರ್ಗಾವಣೆಗೊಂಡಿರುತ್ತಾರೆ,

ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಂ ಗ್ರಾಮೀಣಾಭಿವೃದ್ಧಿ, ಸಹಾಯಕ ಗ್ರೇಡ್-1 ವೃಂದದ ನೌಕರರ ಜೇಷ್ಟತಾ ಪಟ್ಟಿಯನ್ನು ದಿ:01.01.2021ರಲ್ಲಿ ಇದ್ದಂತೆ ಈ ಕಛೇರಿಯ ಅಧಿಕೃತ ಜ್ಞಾಪನ ಸಂ.ದಕವರಿ ಆಡಳಿತ/ಗ್ರಾಪಂಕಾ/ಸಿಆರ್-11/2020-21 (3) ದಿನಾಂಕ: 25.05.2011 ರಂತೆ ಪ್ರಕಟಿಸಲಾಗಿರುತ್ತದೆ. ಆದ್ದರಿಂದ ಸದು ಜೇಷ್ಠತಾ ಪಟ್ಟಿಗೆ ಯಾವುದೇ ತಡೆಯಾಜ್ಞೆ, ಇರುವುದಿಲ್ಲ, ಮುಂಭಡ್ತಿ ಸಮಯದಲ್ಲಿ ಜೇಷ್ಠತಾ ಪಟ್ಟಿಯನ್ನು ಮಾನ್ಯವೆಂದು ಪರಿಗಣಿಸಿ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಜೇಷ್ಠತೆ, ಅರ್ಹತೆ ಮತ್ತು ಮೀಸಲಾತಿಯನ್ನು ಪರಿಗಣಿಸಿ ಅರ್ಹ ನೌಕರರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಮುಂಬಡ್ತಿ ನೀಡುವ ಸಲುವಾಗಿ ಸೆ.15ರಂದು ಇಲಾಖಾ ಮುಂಭಡ್ತಿ ಸಮಿತಿ ಸಭೆಯನ್ನು ಜರುಗಿಸಲಾಗಿರುತ್ತದೆ. ಸದರಿ ಮುಂಭಡ್ತಿ ಸಮಿತಿ ಸಭೆಯ ನಡವಳಿಯಂತೆ ಮುಂಭಡ್ತಿಗೆ ಅರ್ಹರಾಗಿ ಆಯ್ಕೆ ಮಾಡಲಾಗಿರುವ ಎಲ್ಲಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಂ ಗ್ರಾಮೀಣಾಭಿವೃದ್ಧಿ, ಸಹಾಯಕ ಗ್ರೇಡ್-1 ವೃಂದದ ನೌಕರರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಪಾರದರ್ಶಕ ವಾಗಿ ಸ್ಥಳ ನಿಯುಕ್ತಿಗೊಳಿಸುವ ಕುರಿತು ದಿನಾಂಕ ಸೆ.20ರಂದು ಬಡ್ತಿಗೆ ಆಯ್ಕೆಯಾಗಿರುವ ಎಲ್ಲಾ ಗ್ರೇಡ್-1 ಗ್ರಾಮ ಪಂಚಾಯತ್ ಕಾರ್ಯದರ್ಶಿಗಳ ಸಮಕ್ಷಮದಲ್ಲಿ ಕೌನ್ಸೆಲಿಂಗ್‌ನ್ನು ಆಯೋಜಿಸಲಾಗಿದ್ದು, ಸದರಿ ಕೌನ್ಸೆಲಿಂಗ್‌ನಲ್ಲಿ ಅರ್ಜಿ ಸಲ್ಲಿಸಿದ ಗ್ರೇಡ್-1 ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಗ್ರಾಮ ಪಂಚಾಯತ್‌ಗಳನ್ನು ಆಯ್ಕೆಮಾಡಿಕೊಂಡಿರುತ್ತಾರೆ.

Leave A Reply

Your email address will not be published.