ಸಾರ್ವಜನಿಕರೇ ಎಚ್ಚರ !! ಬೆಳ್ತಂಗಡಿಯಲ್ಲಿ ಹೆಚ್ಚಾಗಿದೆ ಮೊಬೈಲ್ ಕಳ್ಳರ ಹಾವಳಿ | ನಿನ್ನೆ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟು 6 ಮೊಬೈಲ್ ಗಳ ಸರಣಿ ಕಳ್ಳತನ !!

ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಒಟ್ಟು 6 ಮೊಬೈಲ್ ಗಳ ಸರಣಿ ಕಳ್ಳತನವಾಗಿದೆ ಎಂದು ವರದಿಯಾಗಿದೆ.

ನಿನ್ನೆ ಬೆಳಿಗ್ಗೆ ಬೆಳ್ತಂಗಡಿಯಿಂದ ಉಜಿರೆ ಕಾಲೇಜಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ಅಂಗನವಾಡಿ ಕಾರ್ಯಕರ್ತೆ ಜಲಜಾ ಎಂಬವರ ಪುತ್ರಿಯ ಬ್ಯಾಗ್ ನಿಂದ ಫೋನನ್ನು ಕಳ್ಳರು ಎಗರಿಸಿದ್ದು, ಕಾಲೇಜಿಗೆ ತಲುಪಿದ ನಂತರ ಆಕೆಗೆ ಈ ವಿಚಾರ ತಿಳಿದು ಬಂದಿದೆ.

ಈ ಬಗ್ಗೆ ಜಲಜಾರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಲ್ಲಿ ಅವರಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟು 6 ಮೊಬೈಲುಗಳು ಕಳೆದುಹೋಗಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರು ಬಸ್ನಲ್ಲಿ ಪ್ರಯಾಣಿಸುವಾಗ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಈ ಬಗ್ಗೆ ಜಾಗರೂಕರಾಗಿ, ತಮ್ಮ ಬ್ಯಾಗ್ ಮತ್ತು ನಗದು ವಸ್ತಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ.

Leave A Reply

Your email address will not be published.