ರಾತ್ರಿ ಊಟ ಕೊಡಲು ವಿಳಂಬ ಮಾಡಿದಳೆಂಬ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಪಾಪಿ ಗಂಡ!!

ಜಾರ್ಖಂಡ್: ಕೇವಲ ರಾತ್ರಿ ವೇಳೆ ಊಟ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಮಹಾಪಾಪಿ ಗಂಡ.

70 ವರ್ಷ ಈ ಪಾಪಿ ಗಂಡ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ, ಕೊನೆಗೆ ಕೊಲೆ ಮಾಡಿದ್ದಾನೆ.ಅಷ್ಟಕ್ಕೂ ಈ ಭಯಾನಕ ಕೃತ್ಯ ನಡೆದಿರುವುದು ಜಾರ್ಖಂಡ್‌ನ ಕುಂತಿ ಜಿಲ್ಲೆಯ ಕಲಾಮತಿ ಹಳ್ಳಿಯಲ್ಲಿ.

ಮನೆಯಲ್ಲಿಯೇ ಇದ್ದ ಗಂಡ ರಾತ್ರಿ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಪತ್ನಿ ಅಡುಗೆಯನ್ನೇನೋ ಬೇಗ ಮಾಡಿದ್ದಳು.ಆದರೆ ಪತಿಗೆ ಬಡಿಸಲು ಸ್ವಲ್ಪ ವಿಳಂಬವಾಗಿದೆ. ಅಷ್ಟಕ್ಕೇ ಗಂಡ ಸಿಕ್ಕಾಪಟ್ಟೆ ಹಲ್ಲೆ ಮಾಡಿದ್ದಾನೆ.

ಈ ವೇಳೆ ಆತನ ಹಲ್ಲೆಗೆ ಪತ್ನಿ ಕುಸಿದು ಬಿದ್ದಿದ್ದಾಳೆ.ಆದರೂ ಇಷ್ಟಕ್ಕೆ ಸುಮ್ಮನಾಗದ ಗಂಡ, ಮತ್ತೆ ಹಲ್ಲೆ ಮಾಡಿದ್ದಾನೆ. ತನಗೆ ಏನೂ ಮಾಡಬೇಡಿ ಬಿಟ್ಟು ಬಿಡಿ ಎಂದು ಪತ್ನಿ ಕೂಗಾಡಿದರೂ, ಬಿಡದೆ ಆತ ಹಲ್ಲೆ ಮುಂದುವರೆಸಿದ್ದಾನೆ.

ಈತನ ಹಲ್ಲೆಗೆ ರಕ್ತದ ಮಡುವಿನಲ್ಲಿ ಪತ್ನಿ ಒದ್ದಾಡುತ್ತಿದ್ದರೂ ಆಸ್ಪತ್ರೆಗೆ ಸಾಗಿಸದೇ ಕೊಲೆ ಮಾಡಿದ್ದಾನೆ. ನಂತರ ಇಡೀ ರಾತ್ರಿ ಹೆಂಡತಿ ಮೃತದೇಹದ ಜತೆ ಇದ್ದಾನೆ.

ಮಾರನೆಯ ದಿನ ಪೊಲೀಸರಿಗೆ ವಿಷಯ ತಿಳಿದು ಗಂಡನನ್ನು ಬಂಧಿಸಿದ್ದಾರೆ. ಇಬ್ಬರೂ ಗಲಾಟೆಗೂ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಗಂಡನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave A Reply