ಸಿಲಿಂಡರ್ ಸ್ಪೋಟದಿಂದ ಪ್ಲ್ಯಾಟ್‌ನಲ್ಲಿ ಬೆಂಕಿ | ತಾಯಿ,ಮಗಳು ಸಜೀವ ದಹನ,ಐವರು ಗಂಭೀರ

ಬೆಂಗಳೂರಿನ ದೇವರಚಿಕ್ಕನಹಳ್ಳಿ ಬಳಿಯ ಅಪಾಟ್‌ರ್ಮೆಂಟ್ ಒಂದರ ಮೂರು ಫ್ಲ್ಯಾಟ್‌ಗಳಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆಯರಿಬ್ಬರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ ನಗರದ ಬನ್ನೇರುಘಟ್ಟ ರಸ್ತೆಯ ಬಳಿಯಿರುವ ದೇವರ ಚಿಕ್ಕನಹಳ್ಳಿಯ ಖಾಸಗಿ ಅಪಾಟ್‌ರ್ಮೆಂಟ್‌ನ ಎರಡನೇ ಮಹಡಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಷಿ ದೇವಿ(82) ಮತ್ತು ಪುತ್ರಿ ಭಾಗ್ಯ ರೇಖಾ (59) ಎಂಬ ಇಬ್ಬರು ಮೃತಪಟ್ಟಿದ್ದಾರೆ.

ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ 3.30ರ ಸುಮಾರಿಗೆ ಅಪಾಟ್ರ್ಮೆಂಟ್ ನ ಎರಡನೇ ಮಹಡಿಯಲ್ಲಿ ಗ್ಯಾಸ್ ಪೈಪ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿ, ಈ ದುರ್ಘಟನೆ ಸಂಭವಿಸಿದೆ.

ಬೆಂಕಿ ತೀವ್ರತೆಗೆ ಫ್ಲ್ಯಾಟ್‌ನಲ್ಲಿರುವ ಎಲ್ಲ ವಸ್ತುಗಳು ಸುಟ್ಟುಹೋಗಿದ್ದು, ಮಹಿಳೆ ಶವ ಕೂಡ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ತೊಡಗಿದರು.

ಸ್ಥಳಕ್ಕೆ ಬೇಗೂರು ಠಾಣಾ ಪೊಲೀಸರು ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು.

2015ರಲ್ಲಿ ಎಆಕ್ಸಿ ಎಂಬುವವರು ಈ ನಾಲ್ಕು ಅಂತಸ್ತಿನ ಅಪಾಟ್ರ್ಮೆಂಟ್ ನಿರ್ಮಾಣ ಮಾಡಿದ್ದರು. ನಿಶಾಂತ್ ಎಂಬಾತ ಈ ಅಪಾಟ್ರ್ಮೆಂಟ್ ಮಾಲಕ ಎಂದು ತಿಳಿದು ಬಂದಿದೆ.

ಮಹಿಳೆಯೊಬ್ಬರು ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ. ಯುಟಿಲಿಟಿಯಲ್ಲಿ ಈ ಮಹಿಳೆ ಇದ್ದು, ಸುತ್ತ ರಕ್ಷಣೆಗಾಗಿ ಹಾಕಿದ್ದ ಗ್ರಿಲ್ ಇದ್ದಿದ್ದರಿಂದ ಬಚಾವಾಗಲು ಸಾಧ್ಯವಾಗಲಿಲ್ಲ. ಅಪಾಯಕರ ಸ್ಥಿತಿಯಲ್ಲಿ ಮಹಿಳೆ ಸಿಲುಕಿಕೊಂಡಿದ್ದರೂ, ಜನರು ಕೂಡ ಅಸಹಾಯಕರಾಗಿ ನೋಡುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಅವಘಡ ನಡೆದಿದೆ. ಈಗಾಗಲೇ ತನಿಖೆಯಲ್ಲಿ ಮಹಿಳೆಯರು ಮೃತಪಟ್ಟಿರುವುದು ಗೊತ್ತಾಗಿದೆ. ಈಗಾಗಲೇ ಸ್ಥಳಕ್ಕೆ ಐದು ಅಗ್ನಿಶಾಮಕ ಸಿಬ್ಬಂದಿ ವಾಹನಗಳು ಬಂದಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಹೊಗೆ ದಟ್ಟಣೆ ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆ ಸ್ವಲ್ಪ ತಡವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕದಳದ ಡಿಜಿಪಿ ಅಮರ್ ಪಾಂಡೆ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.