ನೀವೂ ಕೂಡ ನಿಮ್ಮ ಮೊಬೈಲ್ ಪ್ಯಾಟರ್ನ್ ಮರೆತೋಗಿ ಕಷ್ಟ ಪಟ್ಟಿದ್ದೀರೆ…?|ಹಾಗಿದ್ರೆ ಇಲ್ಲಿ ಕೊಟ್ಟಿರೋ ಸುಲಭ ವಿಧಾನದ ಮೂಲಕ ನಿಮ್ಮ ಮೊಬೈಲ್ ಅನ್ ಲಾಕ್ ಮಾಡಿಕೊಳ್ಳಿ!!

ಇವಾಗ ಅಂತೂ ಯಾರ ಕೈಯಲ್ಲಿಯೂ ಮೊಬೈಲ್ ಇದ್ದೇ ಇದೆ. ವಯಸ್ಕರಿಂದ ಹಿಡಿದು ಚಿಕ್ಕ ಮಕ್ಕಳ ಕೈಯಲ್ಲೂ ಮೊಬೈಲ್ ಮಯವಾಗಿದೆ. ಅಂದಹಾಗೆ ಮೊಬೈಲ್ ಸೇಫ್ಟಿಗಾಗಿ ಎಲ್ಲರೂ ಪ್ಯಾಟರ್ನ್ ಅಥವಾ ಪಿನ್ ಹಾಕುದಂತೂ ಖಚಿತ.

ಈಗ ನಾವು ಹೇಳೋಕೆ ಹೊರಟಿದ್ದು ಏನಪ್ಪಾ ಅಂದ್ರೆ, ನೀವು ಅದೆಷ್ಟೋ ಸಲ ಮೊಬೈಲ್ ಪ್ಯಾಟರ್ನ್ ಮರೆತೋಗಿ ಹರ ಸಾಹಸ ಪಟ್ಟದ್ದು ಅಂತೂ ಸುಳ್ಳಲ್ಲ ಅಲ್ಲಾ!!?? ಈಗ ನೀವೂ ಇದನ್ನ ಓದೋ ಮೂಲಕ ನಿಮ್ಮ ಈ ಸಮಸ್ಯೆಗೆ ಬ್ರೇಕ್ ಹಾಕೋದಂತೂ ಖಚಿತ.

ಹೌದು. ಹಾಗಿದ್ರೆ ನೀವೇ ನೋಡಿ ಮೊಬೈಲ್ ಪ್ಯಾಟರ್ನ್ ಮರೆತು ಹೋಗಿದ್ದರೆ ಏನು ಮಾಡಬೇಕು ಎಂದು…?

ಇಂದು ಹೆಚ್ಚಿನವರು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಪ್ಯಾಟರ್ನ್ ಗಳಿಂದ ಲಾಕ್ ಮಾಡುತ್ತಾರೆ.ಅಂತಹ ಸಂದರ್ಭದಲ್ಲಿ ಹ್ಯಾಂಡ್‌ಸೆಟ್ ಅನ್ನು ಅನ್ಲಾಕ್ ಮಾಡುವಂತಹ ಕೆಲವು ಕ್ರಮಗಳು ಇಲ್ಲಿದೆ.

  1. ಮೊಬೈಲ್ ಅನ್ನು ಅನ್ಲಾಕ್ ಮಾಡಲು, ಮೊದಲು ನೀವು ಬೇರೆ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನ ಇಂಟರ್ನೆಟ್ ಬ್ರೌಸರ್‌ನಲ್ಲಿ google.com/android/devicemanager ವೆಬ್‌-ಪೇಜ್ ಗೆ ಹೋಗಿ
  2. ನಿಮ್ಮ Android ಫೋನ್ ಗೆ ನೀವು ಬಳಸಿರುವ Google ID ಯೊಂದಿಗೆ ಲಾಗಿನ್ ಮಾಡಿ.
  3. ಅದರ ನಂತರ ನೀವು ಎಡಿಎಂ ಇಂಟರ್ಫೇಸ್ನಲ್ಲಿ ತೆಗೆದುಹಾಕಲು ಬಯಸುವ ಅನ್ಲಾಕ್ ಮಾದರಿ (pattern) ಯನ್ನು ಆಯ್ಕೆ ಮಾಡಿ.
  4. ಇಲ್ಲಿಂದ ನಿಮ್ಮ ಹ್ಯಾಂಡ್‌ಸೆಟ್ ಅನ್ಲಾಕ್ ಮಾಡಬಹುದು. ಈಗ ನಿಮ್ಮ ಮೊಬೈಲ್ ಪ್ಯಾಟರ್ನ್ ತೆರೆಯುತ್ತದೆ. ಇದರಿಂದ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
Leave A Reply

Your email address will not be published.