ಬೆಂಗಳೂರು:ನಡುರಾತ್ರಿ ಕ್ಯಾಬ್ ಚಾಲಕನೊಂದಿಗೆ ಜಗಳಕ್ಕಿಳಿದ ಯುವತಿಯರು!!ಕೋಪ ನೆತ್ತಿಗೇರಿದ ಯುವತಿಯರಿಂದ ಬ್ರಾ ಬಿಚ್ಚಿ ಅಂಗಾಂಗ ಪ್ರದರ್ಶನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೊರ ದೇಶದ ಪ್ರಜೆಗಳಿಂದ ನಡೆಯುತ್ತಿರುವ ಅಟ್ಟಹಾಸ ಇನ್ನೂ ನಿಂತಿಲ್ಲ ಎಂಬುವುದಕ್ಕೆ ನೈಜ ಉದಾಹರಣೆಯೊಂದು ನಡೆದಿದ್ದು,ಪೊಲೀಸರ ಮೇಲಿನ ಹಲ್ಲೆಯ ಬಳಿಕ ಮತ್ತೊಂದು ಪ್ರಕರಣದಲ್ಲೀಗ ಕ್ಯಾಬ್ ಚಾಲಕನೋರ್ವನಿಗೆ ಯುವತಿಯರು ಬ್ರಾ ಬಿಚ್ಚಿ ಎದೆ ಭಾಗವನ್ನು ತೋರಿಸಿ ಅಶ್ಲೀಲವಾಗಿ ನಡೆದುಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ರಾತ್ರಿ ಕಾಲೇಜು ನಿಮಿತ್ತ ಬೆಂಗಳೂರಿನ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ ಒಂದರಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕೆಲ ಯುವತಿಯರು ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಶ್ರೀಕಾಂತ್ ಅವರು ಪ್ಯಾಸೆಂಜರ್ ಬಳಿ ಓಟಿಪಿ ಪಡೆದು ಓಕೆ ಕೂಡಾ ಮಾಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಕ್ಯಾಬ್ ಬುಕ್ ಮಾಡುವಾಗ 4 ಮಂದಿ ಮಾತ್ರ ಸ್ಥಳದಲ್ಲಿ ಇದ್ದು,ಕಾರು ಬಂದ ಬಳಿಕ ಮತ್ತೊಬ್ಬ ಬಂದಿದ್ದಾನೆ. ಐವರು ಇರುವುದನ್ನು ನೋಡಿ ಕಾರಿನಲ್ಲಿ 5 ಮಂದಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಶ್ರೀಕಾಂತ್ ಹೇಳಿದ್ದೇ ತಡ ಯುವತಿಯರು ಜಗಳ ಶುರುವಿಟ್ಟುಕೊಂಡಿದ್ದಾರೆ.

ಇದಾದ ಬಳಿಕ ಆ ಯುವತಿಯರು ಕ್ಯಾಬ್ ಕ್ಯಾನ್ಸಲ್ ಮಾಡಿದ್ದು,ಇದನ್ನು ಕಂಡು ಟ್ರಿಪ್ ರದ್ದು ಮಾಡಿದ್ದಕ್ಕೆ ಚಾಲಕ 100 ರೂ. ಚಾರ್ಜ್ ಕೇಳಿದ್ದಾರೆ. ಇದಕ್ಕೆ ರಾದ್ಧಾಂತವೇ ನಡೆದಿದ್ದು, ಕೆರಳಿ ನಿಂತ ಉಗಾಂಡ ಯುವತಿಯರು ಮನಬಂದಂತೆ ಅಸಭ್ಯವಾಗಿ ವರ್ತಿಸಿದ್ದಾರೆ. ಬ್ರಾ ಬಿಚ್ಚಿ, ಬರಿದೆದೆಯಲ್ಲಿ ಚಾಲಕನಿಗೆ ಅಂಗಾಂಗ ಪ್ರದರ್ಶಿಸಿ ವಿಕೃತಿ ಮರೆದಿದ್ದಾರೆ.

ಇದಾದ ಬಳಿಕ ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕ ಶ್ರೀಕಾಂತ್ ಅವರನ್ನು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಕ್ಯಾಬ್ ಚಾಲಕ ಶ್ರೀಕಾಂತ್ ಅವರ ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದಾರೆ.

ಘಟನೆಗೆ ಸಂಬಂಧ ಪಟ್ಟಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಿಕ್ ಮಾಡಿದ್ದ ಉಗಾಂಡ ಪ್ರಜೆ ಲುಬೆಗಾ ರೇಮಂಡ್ ನನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: