ನಿಮಗೆ ಬೀಳುವ ಕನಸು ಶುಭವೋ ಅಥವಾ ಅಶುಭವೋ ಎಂಬ ಗೊಂದಲದಲ್ಲಿ ನೀವಿದ್ದೀರಾ!!?| ಕನಸಲ್ಲಿ ಕಾಗೆ ಬಂದರೆ ಸಾವಿನ ಮುನ್ಸೂಚನೆ ಅಂತೇ!!? | ಈ ಮೂಲಕ ನಿಮ್ಮ ಕನಸು ಯಾವ ಮಾರ್ಗದಲ್ಲಿದೆ ಎಂದು ತಿಳಿದುಕೊಳ್ಳಿ

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳೂ ಭವಿಷ್ಯದ ಸಂಕೇತಗಳೇ… ಎಂಬ ಪ್ರಶ್ನೆ ಜ್ಯೋತಿಷಿಗಳಿಂದ ಹಿಡಿದು ವಿಜ್ಞಾನಿಗಳವರೆಗೂ ಕಾಡಿದ್ದಿದೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದಿವೆ.

ಹೀಗೆ ನಮಗೆ ಕಾಡುವ ಪ್ರತಿಯೊಂದು ಕನಸು ಒಳಿತೇ ಕೆಡುಕೆ ಎಂಬುದು ನಮ್ಮೆಲ್ಲರ ಪ್ರಶ್ನೆ. ಕೆಲವರು ಇಂತಹ ಉಹಾಪೋಹಗಳು ಮೂಢನಂಬಿಕೆ ಎಂದು ಹೇಳುವರು. ಆದರೆ ಕೆಲವೊಂದಿಷ್ಟು ಜನ ಸಂಪ್ರದಾಯಿಕವಾಗಿ ನಂಬುತ್ತಾರೆ.ಕೆಲವರು ಹೇಳುತ್ತಾರೆ ಬೆಳಗಿನ ಹೊತ್ತು ಕನಸು ಬಿದ್ದರೆ ಅದು ನಿಜವಾಗುತ್ತೆ ಎಂದು ಇವೆಲ್ಲದಕ್ಕೂ ಪರಿಹಾರವಾಗಿ ಇದೆ ಮುಂದಿನ ಮಾಹಿತಿ.

ಮುಂದೆ ನಡೆಯುವ ಘಟನೆಗಳಿಗೆ ಕನಸು ಮುನ್ಸೂಚನೆ ಎನ್ನಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಕನಸುಗಳನ್ನು ಸಂಕೇತಗಳಾಗಿ ಬಳಸಿಕೊಂಡಿರುವ ಉಲ್ಲೇಖಗಳಿವೆ.ದಶರಥನ ಮರಣದ ವೇಳೆ ಶ್ರೀರಾಮ ಕೆಟ್ಟ ಕನಸನ್ನು ಕಂಡು, ಅರಮನೆಯಲ್ಲಿ ಅಶುಭ ನಡೆದಿದೆ ಎಂದು ಅಂದಾಜಿಸಿದ್ದನಂತೆ.ರಾವಣನಿಗೂ ಸಾಯುವ ಮುನ್ಸೂಚನೆ ಕನಸಿನ ಮೂಲಕ ಸಿಕ್ಕಿತ್ತಂತೆ.

ಯಾವ ರೀತಿಯ ಕನಸುಗಳು ಸಾವಿನ ಮುನ್ಸೂಚನೆ ನೀಡುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ:

• ಕನಸಿನಲ್ಲಿ ಕಾಗೆ ಕಂಡರೆ ಅಶುಭವೆಂದು ಹೇಳಲಾಗುತ್ತದೆ. ಇದು ಸಾವಿಗೆ ಹತ್ತಿರವಾಗುತ್ತಿರುವ ಸಂಕೇತ ಎಂದು ಪರಿಗಣಿಸಲಾಗುತ್ತದೆ.

• ಪ್ರವಾಸಕ್ಕೆ ಹೋದಂತೆ ಕನಸು ಕಾಣುವುದು ಒಳ್ಳೆಯದಲ್ಲ. ಯಾವ ರಾತ್ರಿ ನೀವು ಪ್ರವಾಸಕ್ಕೆ ಹೋದ ಹಾಗೆ ಕನಸು ಕಾಣುತ್ತದೆಯೋ ಅಂದು ಪ್ರಯಾಣ ಮಾಡುವುದು ಒಳಿತಲ್ಲ.

• ಕನಸಿನಲ್ಲಿ ತಮಟೆ, ಡೋಲು ಬಾರಿಸಿದಂತೆ ಕಂಡರೂ ಅದು ಅಶುಭ.

• ಕೇಶ ಮುಂಡನ ಮಾಡಿದಂತೆ ಕನಸಿನಲ್ಲಿ ಕಂಡರೆ ನಿಮ್ಮ ಕುಟುಂಬದ ಸದಸ್ಯರಲ್ಲೊಬ್ಬರಿಗೆ ಸಾವು ಹತ್ತಿರ ಬಂದಿದೆ ಎಂದರ್ಥ.

• ಕನಸಿನಲ್ಲಿ ಮಹಿಳೆ ಬಾಡಿದ ಹೂ ಮುಡಿದಂತೆ ಕಂಡರೆ ಅದನ್ನು ಕೆಟ್ಟ ಕನಸೆಂದು ಪರಿಗಣಿಸಲಾಗುತ್ತದೆ.

• ಮಹಿಳೆ ಬಿಳಿ ವಸ್ತ್ರ ಧರಿಸಿ, ಕೂದಲನ್ನು ಬಿಟ್ಟುಕೊಂಡಿದ್ದರೆ ಅದು ವಿಯೋಗದ ಲಕ್ಷಣ ಎನ್ನಲಾಗುತ್ತದೆ.

• ದೇವಿಯ ಮುರಿದ ವಿಗ್ರಹ ಕನಸಿನಲ್ಲಿ ಕಂಡರೆ ಅದನ್ನು ಅಶುಭವೆನ್ನಲಾಗುತ್ತದೆ.

• ಮರ ಮುರಿದು ಬಿದ್ದಂತೆ ಅಥವ ಮೇಲಿನಿಂದ ಬಿದ್ದಂತೆ ಕನಸಿನಲ್ಲಿ ಕಂಡರೆ ಅದು ಒಳ್ಳೆಯ ಶಕುನವಲ್ಲ.

• ಪದೇ ಪದೇ ಸಾವು ಮತ್ತು ಸ್ಮಶಾನ ಕಾಣ್ತಾ ಇದ್ದರೆ ಸಾವು ಹತ್ತಿರವಿದೆ ಎನ್ನಲಾಗುತ್ತದೆ.

Leave A Reply

Your email address will not be published.