ಪುತ್ತೂರು| ಇನ್ನು ಮುಂದೆ ಥಂಬ್ ನೀಡದಿದ್ದರೆ ಪಡಿತರ ಅಕ್ಕಿ ಕಟ್ !!| ಆಹಾರ ಇಲಾಖೆಯಿಂದ ಖಡಕ್ ಸೂಚನೆ

ಪುತ್ತೂರು:ಇನ್ನು ಮುಂದೆ ರೇಶನ್ ಅಕ್ಕಿ ಸಿಗಬೇಕಾದರೆ ಪಡಿತರ ಚೀಟಿ ಪಟ್ಟಿಯಲ್ಲಿ ಹೆಸರಿರುವವರು ಥಂಬ್ ಕೊಟ್ಟು ಲಿಂಕ್ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ರೇಶನ್ ಪಡೆಯಲು ಅರ್ಹರಾಗಿರುವುದಿಲ್ಲ.

ನಿಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗಿದೆಯೇ?ಇಕೆವೈಸಿ ಥಂಬ್ ಅಗತ್ಯವಿದೆಯೇ? ಪಡಿತರ ಪಟ್ಟಿಯಲ್ಲಿ ನಿಮ್ಮಹೆಸರಿದೆಯೇ? ಎಂಬುದನ್ನು ತಿಳಿಯಬೇಕದರೆ ನೀವು ಪಡಿತರ ವಿತರಣಾ ಕೇಂದ್ರದ ಬಳಿ ಗೋಡೆಯಲ್ಲಿ ಅಥವಾ ನೊಟೀಸ್ ಬೋರ್ಡಿನಲ್ಲಿ ಅಂಟಿಸಿರುವ ಪಟ್ಟಿಯನ್ನು ನೋಡಬೇಕು. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ನೀವು ಥಂಬ್ ಕೊಟ್ಟು ಲಿಂಕ್ ಮಾಡಿಸಿಕೊಳ್ಳಿ ಇಲ್ಲವಾದರೆ ಅಕ್ಟೋಬರ್ ತಿಂಗಳಿನಿಂದ ನಿಮಗೆ ರೇಶನ್ ಅಕ್ಕಿ ಸಿಗುವುದೇ ಇಲ್ಲ.

ಇಂಥಹದೊಂದು ಆದೇಶವನ್ನು ಕಳೆದ ಮೂರು ತಿಂಗಳ ಹಿಂದೆ ಆಹಾರ ಇಲಾಖೆ ಹೊರಡಿಸಿದೆ. ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಶೇ. ೮೭ ಮಂದಿ ತಮ್ಮ ರೇಶನ್ ಕಾರ್ಡನ್ನು ಸರಿಮಾಡಿಸಿಕೊಂಡಿದ್ದು,ಉಳಿದವರು ಇನ್ನೂ ಎಚ್ಚೆತ್ತುಕೊಂಡಿಲ್ಲ.

ನಿಮ್ಮ ರೇಶನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿದ್ದರೆ ಸಾಲದು,ಇಕೆವೈಸಿ ಥಂಬ್ ಕೊಡದೇ ಇದ್ದರೆ ಆಧಾರ್ ಲಿಂಕ್ ಮಾಡಿದರೂ ನಿಮಗೆ ಪಡಿತರ ದೊರೆಯುವುದಿಲ್ಲ.

ಕಳೆದ ಜೂನ್ ತಿಂಗಳಿನಿಂದ ಈ ಥಂಬ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು,ಥಂಬ್ ಬೇಕಾದವರ ಪಟ್ಟಿಯನ್ನು ರೇಶನ್ ಅಂಗಡಿಯ ನೊಟೀಸ್ ಬೋರ್ಡಿನಲ್ಲಿ ಹಾಕಲಾಗಿದೆ.ಇದನ್ನು ನೋಡಿ ಹಲವು ಮಂದಿ ತಮ್ಮ ಕಾರ್ಡನ್ನು ದುರಸ್ಥಿ ಮಾಡಿಸಿಕೊಂಡಿದ್ದಾರೆ.

ಸ್ಥಳೀಯ ಗ್ರಾಪಂ, ಸೈಬರ್ ಅಥವಾ ಆಹಾರ ಇಲಾಖೆ ಕಚೇರಿಗೆ ತೆರಳಿ ಥಂಬ್ ಕೊಟ್ಟು ಪಡಿತರ ಚೀಟಿಯನ್ನು ಸರಿಮಾಡಿಸಿಕೊಳ್ಳಬಹುದು. ನನಗೆ ಮಾಹಿತಿ ಇಲ್ಲ ಗೊತ್ತೇ ಇರಲಿಲ್ಲ ಎಂದು ಹೇಳಿ ಏನೂ ಪ್ರಯೋಜನವಿಲ್ಲ. ಥಂಬ್ ಕೊಡದೇ ಇದ್ದರೆ ನಮ್ಮ ಪಡಿತರ ಚೀಟಿ ಓನ್ದೀ ಚೀಟಿ ಮಾತ್ರ ಅದಕ್ಕೆ ಬೆಲೆಯೇ ಇಲ್ಲ, ಮಾನ್ಯವೂ ಅಲ್ಲ.

ಈಗಾಗಲೇ ಕಳೆದ ಮೂರು ತಿಂಗಳಿನಿಂದ ಥಂಬ್ ಬೇಕಾದವರಿಗೆ ಮಾಹಿತಿ ನೀಡುವ ಕೆಲಸವನ್ನು ಪಡಿತರ ವಿತರಿಸುವಾಗಲೇ ತಿಳಿಸಲಾಗುತ್ತಿದೆ. ಶೇ. ೮೭ ಮಂದಿ ಸರಿಮಾಡಿಸಿಕೊಂಡಿದ್ದಾರೆ.ಉಳಿದವರು ಈ ತಿಂಗಳ
ಅಂತ್ಯದೊಳಗೆ ಥಂಬ್ ಕೊಟ್ಟು ಪಡಿತರ ಕಾರ್ಡನ್ನು
ಸರಿಮಾಡಿಸಿಕೊಳ್ಳಬೇಕು,ಇಲ್ಲವಾದರೆ ಪಡಿತರ ಸಾಮಾಗ್ರಿ ದೊರೆಯುವುದಿಲ್ಲ ಎಂದು ಪುತ್ತೂರು ತಾಲೂಕು ಆಹಾರ ನಿರೀಕ್ಷಕರು ಸರಸ್ವತಿ ತಿಳಿಸಿದ್ದಾರೆ.

Leave A Reply

Your email address will not be published.