Day: September 15, 2021

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ಘಟಕ ಉದ್ಘಾಟನೆ

ಕಡಬ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆಯಿತು. ಉದ್ಘಾಟನೆ ನೆರವೇರಿಸಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ|ಶಿವಣ್ಣ ಎನ್.ಕೆ ಮಾತನಾಡಿ ದೇಶ ಕಾಯುವ ಕಾಯಕವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ಸೂಕ್ತ ಸ್ಥಾನ ಮಾನ ಸಿಗುವಂತಾಗಬೇಕಾದರೆ ನಾವೆಲ್ಲಾ ಒಗ್ಗಟ್ಟಾಗಬೇಕು, ಸರಕಾರದಿಂದ ನಮಗೆ ಸಿಗಬೆಕಾದ ಸವಲತ್ತುಗಳಿಗಾಗಿ ನಾವು ಸಂಘಟಿತರಾಗಿ ಹೋರಾಡಬೇಕಾಗಿದೆ. ಸಂಘಟನೆಯ ಮುಖಾಂತರ ನಿವೃತ್ತ …

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ಘಟಕ ಉದ್ಘಾಟನೆ Read More »

ಆಲಂಕಾರು ರೈತನ ಜಮೀನು ವಶಪಡಿಸಿ ಅರಣ್ಯ ಇಲಾಖೆಯಿಂದ ದಬ್ಬಾಳಿಕೆ : ರೈತ ಸಂಘ ಆರೋಪ

ಕಡಬ:ಕಡಬ ತಾಲೂಕಿನ ಪೆರಾಬೆ ಗ್ರಾಮದ ಸುರುಳಿ ಎಂಬಲ್ಲಿ ರೈತರೊಬ್ಬರಿಗೆ ಸೇರಿದ ಸ್ವಾಧೀನದಲ್ಲಿದ್ದ ಜಮೀನಿಗೆ ಅರಣ್ಯ ಇಲಾಖೆಯವರು ಅಕ್ರಮವಾಗಿ ಪ್ರವೇಶಿಸಿ ಜಾಗವನ್ನು ಸ್ವಾಧೀನ ಪಡಿಸಿಕೊಂಡು ದಬ್ಬಾಳಿಕೆ ನಡೆಸಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆರೋಪಿಸಿದರು. ರೈತ ಸುರುಳಿ ಲೋಲಾಕ್ಷ ಶೇಟ್ಟಿಯವರ ಪಟ್ಟಾ ಸ್ಥಳಕ್ಕೆ ಹೊಂದಿಕೊಂಡಿರುವ ಕುಮ್ಕಿ ಜಮೀನಿಗೆ ಅರಣ್ಯ ಇಲಾಖಾ ಫಾರೆಸ್ಟರ್ ಏಕಾಏಕಿ ಅಕ್ರಮವಾಗಿ ಪ್ರವೇಶಿಸಿ ಜಮೀನಿನಲ್ಲಿದ್ದ ಅಡಕೆ ತೆಂಗು, ಗಿಡಗಳನ್ನು ನಾಶ ಮಾಡಿ ಅಗಳು ನಿರ್ಮಿಸಿದ್ದಾರೆ …

ಆಲಂಕಾರು ರೈತನ ಜಮೀನು ವಶಪಡಿಸಿ ಅರಣ್ಯ ಇಲಾಖೆಯಿಂದ ದಬ್ಬಾಳಿಕೆ : ರೈತ ಸಂಘ ಆರೋಪ Read More »

ಸುಳ್ಯ : ಹೊಳೆಯಲ್ಲಿ ಕಣ್ಮರೆಯಾಗಿದ್ದ ಮಹಿಳೆಯ ಶವ ನಾಲ್ಕು ದಿನಗಳ ಬಳಿಕ ಪತ್ತೆ

ಸುಳ್ಯ : ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ಕಾಣೆಯಾಗಿದ್ದು, ಮಹಿಳೆಯ ಶವ ಪೆರಾಜೆ ಬಳಿ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ. ಪೆರಾಜೆ ಕಲ್ಚರ್ಪೆಯಿಂದ ವರದಿಯಾಗಿದೆ. ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ.11 ರಂದು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಮೀನಾಕ್ಷಿ ಅವರನ್ನು ಅಂದು ರಾತ್ರಿಯಿಂದ ಅರಂತೋಡು ಗ್ರಾಮಸ್ಥರು ಹುಡುಕಿದರೂ ಪತ್ತೆಯಾಗಿರಲಿಲ್ಲ. ಮರುದಿನ ಸುಳ್ಯ ಅಗ್ನಿಶಾಮಕದಳದವರು ಮತ್ತು ಊರವರು ಹುಡುಕಲು ಪ್ರಾರಂಭಿಸಿದರು. ನಾಲ್ಕು ದಿನಗಳಿಂದಲೂ ಪತ್ತೆ …

ಸುಳ್ಯ : ಹೊಳೆಯಲ್ಲಿ ಕಣ್ಮರೆಯಾಗಿದ್ದ ಮಹಿಳೆಯ ಶವ ನಾಲ್ಕು ದಿನಗಳ ಬಳಿಕ ಪತ್ತೆ Read More »

ಬೆಳ್ತಂಗಡಿಯಲ್ಲಿ ಮತ್ತೆ ಸದ್ದು ಮಾಡಿದ ಸ್ಯಾಟಲೈಟ್ ಕಾಲ್ | ಬೆಳ್ತಂಗಡಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಅರಣ್ಯಗಳಲ್ಲಿ ಮತ್ತೆ ಟ್ರೇಸ್ ಆದ ಕಾಲ್

ದಕ ಜಿಲ್ಲೆಯಲ್ಲಿ ಮತ್ತೆ ಮತ್ತೆ ಸ್ಯಾಟಲೈಟ್ ಕಾಲ್ ಸದ್ದು ಮಾಡುತ್ತಿದ್ದು ಮೂರು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಾಗೂ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಪರ್ಕ ಸಾಧಿಸಿರುವ ಬಗ್ಗೆ ರಾಜ್ಯ ಏಜೆನ್ಸಿ ಹೆಚ್ಚಿನ ತನಿಖೆಗೆ ಆಂತರಿಕ (ಐಎಸ್ ಡಿ)ವಿಭಾಗಕ್ಕೆ ನೀಡಿದೆ. ಕಳೆದ ಒಂದು ವಾರದಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಆಗಿದ್ದು, ಇಲ್ಲಿಂದ ವಿದೇಶಕ್ಕೆ ಕನೆಕ್ಟ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸ್ಯಾಟಲೈಟ್ …

ಬೆಳ್ತಂಗಡಿಯಲ್ಲಿ ಮತ್ತೆ ಸದ್ದು ಮಾಡಿದ ಸ್ಯಾಟಲೈಟ್ ಕಾಲ್ | ಬೆಳ್ತಂಗಡಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಅರಣ್ಯಗಳಲ್ಲಿ ಮತ್ತೆ ಟ್ರೇಸ್ ಆದ ಕಾಲ್ Read More »

ಬೆಳ್ತಂಗಡಿ | ಸಿರಿಯನ್ ಕಥೊಲಿಕ್ ವಿವಿಧೋದ್ದೇಶ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಿ.ಜೆ ಹೃದಯಾಘಾತದಿಂದ ನಿಧನ

ಬೆಳ್ತಂಗಡಿಯ ಸಾಂತೋಮ್ ಟವರ್‌ನಲ್ಲಿರುವ ಸಿರಿಯನ್ ಕಥೊಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಿ.ಜೆ ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕ್ಲಿನಿಕ್‌ನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಬೆಳ್ತಂಗಡಿ ಧರ್ಮಪ್ರಾಂತ್ಯದ ಜ್ಞಾನ ನಿಲಯದ ಧರ್ಮೋಪದೇಶ ಕೇಂದ್ರದಲ್ಲಿ …

ಬೆಳ್ತಂಗಡಿ | ಸಿರಿಯನ್ ಕಥೊಲಿಕ್ ವಿವಿಧೋದ್ದೇಶ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಿ.ಜೆ ಹೃದಯಾಘಾತದಿಂದ ನಿಧನ Read More »

ತಾಯಿಯೇ ಮೊದಲ ಗುರು ಎಂಬ ಮಾತನ್ನು ಸಾರಿ ಹೇಳುತಿದೆ ಈ ವಿಡಿಯೋ | ತಾಯಿ ತನ್ನ ಮಗುವಿಗೆ ಪಾಠ ಹೇಳಿಕೊಡುವ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು !! |

ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಮಗು ಹುಟ್ಟಿದಾಗಿನಿಂದ ತಾಯಿ ಮಗುವಿಗೆ ಪ್ರತಿಯೊಂದು ಚಟುವಟಿಕೆಯನ್ನೂ ಸಹ ಹೇಳಿಕೊಡುತ್ತಾಳೆ. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದರ ಜೊತೆಗೆ ವಿದ್ಯಾಭ್ಯಾಸವನ್ನು ಮೊದಲ ಅಕ್ಷರದಿಂದ ಹೇಳಿಕೊಡುತ್ತಾಳೆ. ಮಕ್ಕಳಿಗೆ ತಮ್ಮ ಮಾತು ಕೇಳಿಸುವುದು ಅಷ್ಟು ಸುಲಭದ ಮಾತಲ್ಲ. ಮಗು ತಾನಾಗಿಯೇ ಶಿಕ್ಷಣದ ಬಗೆಗೆ ಆಸಕ್ತಿ ಹೊಂದುವಂತೆ ಓಲೈಸಬೇಕು. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಸೇರಿ ಒಂದು ಉಪಾಯ ಮಾಡಿದ್ದಾರೆ. ಮಗು …

ತಾಯಿಯೇ ಮೊದಲ ಗುರು ಎಂಬ ಮಾತನ್ನು ಸಾರಿ ಹೇಳುತಿದೆ ಈ ವಿಡಿಯೋ | ತಾಯಿ ತನ್ನ ಮಗುವಿಗೆ ಪಾಠ ಹೇಳಿಕೊಡುವ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು !! | Read More »

ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಕುಟುಂಬಸ್ಥರು

ರಸ್ತೆ ಅಪಘಾತದಲ್ಲಿ ತಮ್ಮ ಪುತ್ರಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗಗಳ ದಾನ ಮಾಡುವ ಮೂಲಕ ಕುಟುಂಬಸ್ಥರು ಸಾರ್ಥಕತೆ ಮೆರೆದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಹಳ್ಳೂರ ಗ್ರಾಮದ ಕವನ ಮಳ್ಳಯ್ಯ ಹಿರೇಮಠ (20) ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿ ಎನಿಸಿಕೊಂಡಿದ್ದಾಳೆ. ಹಳ್ಳೂರ ಗ್ರಾಮದ ಕವನ ಹಿರೇಮಠ ಶಿಕಾರಿಪುರದ ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೆ.9ರಂದು ಹೊನ್ನಾಳಿ ತಾಲೂಕು ಸೊರಟೂರ ಗ್ರಾಮದ ಬಳಿ ಓಮಿನಿ- ಚಕ್ಕಡಿ ಗಾಡಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು …

ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಕುಟುಂಬಸ್ಥರು Read More »

ಜಿಮ್ ನಲ್ಲಿ ವರ್ಕೌಟ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದ ಹುಡುಗನ ಹೊಟ್ಟೆ ಒಂಬತ್ತು ತಿಂಗಳ ಗರ್ಭಿಣಿಯಂತೆ ಆದದ್ದಾದರೂ ಹೇಗೆ ??!|ಅಷ್ಟಕ್ಕೂ ಆತನ ಈ ಹೊಟ್ಟೆಗೆ ಕಾರಣ ಏನಿರಬಹುದು ನೀವೇ ನೋಡಿ!!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಯುವಕರು ಜಿಮ್ ಫಿಟ್ನೆಸ್ ಎಂದು ಅದೇ ಗುಂಗಲ್ಲಿ ತೇಲುತ್ತಿರುತ್ತಾರೆ.ಆರೋಗ್ಯಕ್ಕೆ ಯಾವ ರೀತಿಯ ಪೆಟ್ಟು ಬೀಳುತ್ತಿದೆ ಎಂಬುದು ಅರಿವೇ ಇರುವುದಿಲ್ಲ. ಹೀಗೆಯೇ ಫಿಟ್ನೆಸ್ ಮಾಡುತ್ತಿದ್ದವನ ಹೊಟ್ಟೆ ಒಂಬತ್ತು ತಿಂಗಳ ಗರ್ಭಿಣಿಯಂತೆ ಆಗಿದ್ದು ಆತನಿಗೆ ವಿಚಿತ್ರ ಎನಿಸಿದೆ. ಅಷ್ಟಕ್ಕೂ ಇದಕ್ಕೆ ಕಾರಣ ಏನೆಂಬುದನ್ನು ಮುಂದೆ ಓದಿ. ಹೌದು, ಈತನ ಹೆಸರು ಕೈಲ್ ಸ್ಮಿತ್.ಈತ ಫಿಟ್ ಮತ್ತು ಆರೋಗ್ಯಕರ ಹುಡುಗ. ನಿಯಮಿತವಾಗಿ ಸ್ಮಿತ್, ಬಾಸ್ಕೆಟ್ ಬಾಲ್ ಆಡ್ತಿದ್ದ.ಸ್ಮಿತ್ ಸಣ್ಣ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಿ ಅದೀಗ ದೊಡ್ಡ …

ಜಿಮ್ ನಲ್ಲಿ ವರ್ಕೌಟ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದ ಹುಡುಗನ ಹೊಟ್ಟೆ ಒಂಬತ್ತು ತಿಂಗಳ ಗರ್ಭಿಣಿಯಂತೆ ಆದದ್ದಾದರೂ ಹೇಗೆ ??!|ಅಷ್ಟಕ್ಕೂ ಆತನ ಈ ಹೊಟ್ಟೆಗೆ ಕಾರಣ ಏನಿರಬಹುದು ನೀವೇ ನೋಡಿ!! Read More »

ತಾ.ಪಂ., ಜಿ.ಪಂ. ಕ್ಷೇತ್ರ ಮರು ಪುನರ್‌ ವಿಂಗಡನೆ | ಮೀಸಲಾತಿಯೂ ಬದಲಾವಣೆ

ತಾ.ಪಂ.,ಜಿ.ಪಂ.ಕ್ಷೇತ್ರದ ವಿಂಗಡನೆ ಮತ್ತೊಮ್ಮೆ ನಡೆಯಲಿದೆ. ಕೆಲ ತಿಂಗಳ ಹಿಂದೆ ಚುನಾವಣಾ ಆಯೋಗ ಹೊರಡಿಸಿದ ಎಲ್ಲಾ ಆದೇಶಗಳು ರದ್ದಾಗಲಿದೆ.ಜತೆಗೂ ಮೀಸಲಾತಿಯೂ ಬದಲಾಗಲಿದೆ. ಈ ಕುರಿತು ರಾಜ್ಯ ಸರಕಾರ ಮಹತ್ವದ ಹೆಜ್ಜೆಇರಿಸಿದೆ. ಈ ಸಂಬಂಧ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆಗೆ ಸರಕಾರ ಮುಂದಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2021ನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ಮೂಲಕ ಪ್ರಸ್ತುತ ಇರುವ ತಾಲೂಕು ಮತ್ತು ಜಿ.ಪಂ. ಕ್ಷೇತ್ರ ಪುನರ್ ವಿಂಗಡನೆಯನ್ನು ರದ್ದುಪಡಿಸಿ ಮತ್ತೆ ಪುನರ್ …

ತಾ.ಪಂ., ಜಿ.ಪಂ. ಕ್ಷೇತ್ರ ಮರು ಪುನರ್‌ ವಿಂಗಡನೆ | ಮೀಸಲಾತಿಯೂ ಬದಲಾವಣೆ Read More »

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯ ಅತ್ಯಾಚಾರ | ಅಪರಾಧಿಗೆ 10 ವರ್ಷ ಜೈಲು,ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ಅಪರಾಧಿಯೊಬ್ಬನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯವು ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ನವೀನ್ (27) ಶಿಕ್ಷೆಗೊಳಗಾದ ಆರೋಪಿ.ಈತ ತನ್ನದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ 2019ರ ಜೂ.27ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರದ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಳು. ಅನಂತರ ಗರ್ಭಪಾತವಾಗಿತ್ತು. ಬೆಳ್ತಂಗಡಿಯ ಅಂದಿನ ಪ್ರೊಬೆಷನರಿ …

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯ ಅತ್ಯಾಚಾರ | ಅಪರಾಧಿಗೆ 10 ವರ್ಷ ಜೈಲು,ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ Read More »

error: Content is protected !!
Scroll to Top