Day: September 14, 2021

ನೀವು ಸಿನಿಮಾ ಹುಚ್ಚರೇ ? ಹಾಗಿದ್ದರೆ ನಿಮಗಿದೆ ಒಂದು ಭರ್ಜರಿ ಅವಕಾಶ | 10 ದಿನದಲ್ಲಿ ಈ 13 ಹಾರರ್ ಸಿನಿಮಾಗಳನ್ನು ನೋಡಿದರೆ ನೀವು ಗಳಿಸಬಹುದು 96,000 ರೂ!!

ವಾರಾಂತ್ಯ ಬಂದರೆ ಸಾಕು ಒಂದಾದರೂ ಸಿನಿಮಾ ನೋಡಬೇಕೆಂದು ಬಹಳ ಮಂದಿ ಯೋಜನೆ ರೂಪಿಸಿರುತ್ತಾರೆ. ಏಕೆಂದರೆ ಸಿನಿಮಾ ನೋಡುವುದು ಎಂದರೆ ಕೆಲವರಿಗೆ ಬಹಳ ಖುಷಿ ನೀಡುವ ವಿಷಯ. ಕೆಲವರಂತೂ ಹೊಸ ಸಿನಿಮಾದ ಮೊದಲ ಪ್ರದರ್ಶನಕ್ಕೆ ತುದಿಗಾಲಲ್ಲಿ ಹುಚ್ಚರಂತೆ ಕಾಯುತ್ತಿರುತ್ತಾರೆ. ಅದರಲ್ಲಿಯೂ ಭಯಾನಕ ಚಿತ್ರ (ಹಾರರ್ ಫಿಲ್ಮ್) ನೋಡುವುದು ಕೆಲವರಿಗೆ ಪಂಚಪ್ರಾಣ. ಅಂಥವರಿಗೆ ಒಂದು ದೊಡ್ಡ ಆಫರ್ ಅನ್ನು ಅಮೆರಿಕದ ಫೈನಾನ್ಸ್ ಬುಝ್ ಕಂಪೆನಿ ನೀಡಿದೆ. ಅದೇನೆಂದರೆ 10 ದಿನಗಳಲ್ಲಿ 13 ಹಾರರ್ ಫಿಲ್ಮ್ ಗಳನ್ನು ನೋಡಿದರೆ ಅಂಥವರಿಗೆ 1,300 …

ನೀವು ಸಿನಿಮಾ ಹುಚ್ಚರೇ ? ಹಾಗಿದ್ದರೆ ನಿಮಗಿದೆ ಒಂದು ಭರ್ಜರಿ ಅವಕಾಶ | 10 ದಿನದಲ್ಲಿ ಈ 13 ಹಾರರ್ ಸಿನಿಮಾಗಳನ್ನು ನೋಡಿದರೆ ನೀವು ಗಳಿಸಬಹುದು 96,000 ರೂ!! Read More »

ಇನ್ನು ಮುಂದೆ ಮಹಿಳಾ ಪಂಚಾಯತಿ ಅಧ್ಯಕ್ಷರ ಪತಿರಾಯರು ಆಡಳಿತದಲ್ಲಿ ಮೂಗು ತೂರಿಸುವಂತಿಲ್ಲ|ಅಧಿಕಾರ ಚಲಾಯಿಸಿದರೆ ಪತ್ನಿಯ ಸದಸ್ಯತ್ವವೇ ರದ್ದು!!

ಮಹಿಳಾ ಅಧ್ಯಕ್ಷರು ಇರುವ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪತಿರಾಯರು ಮೂಗು ತೂರಿಸುತ್ತಿರುವ ಬಗ್ಗೆ ಇತ್ತೀಚೆಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪತ್ನಿ ಪರವಾಗಿ ಪತಿ ಅಥವಾ ಇನ್ನಾರೇ ಆಗಲಿ ಅಧಿಕಾರ ಚಲಾಯಿಸಿದರೆ ಅಧ್ಯಕ್ಷರ ಸದಸ್ಯತ್ವ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದ್ದು, ಕಾರ್ಯರೂಪಕ್ಕೆ ತರಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಬಹುತೇಕ ಗ್ರಾಪಂಗಳಲ್ಲಿ ಮಹಿಳಾ ಮತ್ತು ಜಾತಿ ಮೀಸಲು ಅನ್ವಯ ಹೆಚ್ಚಿನ ಸಂಖ್ಯೆಯ ಸದಸ್ಯೆಯರು ಗ್ರಾಪಂಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ, ಅವರ ಪರವಾಗಿ …

ಇನ್ನು ಮುಂದೆ ಮಹಿಳಾ ಪಂಚಾಯತಿ ಅಧ್ಯಕ್ಷರ ಪತಿರಾಯರು ಆಡಳಿತದಲ್ಲಿ ಮೂಗು ತೂರಿಸುವಂತಿಲ್ಲ|ಅಧಿಕಾರ ಚಲಾಯಿಸಿದರೆ ಪತ್ನಿಯ ಸದಸ್ಯತ್ವವೇ ರದ್ದು!! Read More »

ಎರಡು ಗಂಟೆಗಳ ಕಾಲ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರ ಹಾವು | ಉರಗ ತಜ್ಞನಿಂದಲೂ ಕಾಪಾಡಲು ಆಗಲಿಲ್ಲ ಆ ಬಾಲಕಿಯನ್ನು !!

ಮಲಗಿದ್ದ ಬಾಲಕಿಯ ಕುತ್ತಿಗೆಗೆ ಸುಮಾರು ಎರಡು ಗಂಟೆಗಳ ಕಾಲ ನಾಗರಹಾವು ಸುತ್ತಿಕೊಂಡಿದ್ದು,ಕೊನೆಗೆ ಆಕೆಯನ್ನು ಕಚ್ಚಿ ರಭಸದಿಂದ ಹಾವು ಹೋದ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ. ಬಾಲಕಿ ನಿದ್ದೆಯಲ್ಲಿ ಇದ್ದ ಕಾರಣ ಆಕೆಗೆ ಇದರ ಅರಿವೇ ಇರಲಿಲ್ಲ. ಕೊನೆಗೆ ಸುಮಾರು ಎರಡು ಗಂಟೆ ಅಲ್ಲಿಯೇ ಇದ್ದ ಹಾವು ಆಕೆ ಎಚ್ಚರವಾದ ಬಳಿಕ ಅಲ್ಲಾಡಿದ್ದರಿಂದ ಹಾವು ಆಕೆಗೆ ಕಚ್ಚಿ ಓಡಿದೆ.ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು,ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಧ್ಯರಾತ್ರಿ ಸುಮಾರು 12-1 ಗಂಟೆಯವೇಳೆ ಈ ಘಟನೆ ನಡೆದಿದ್ದು, ಏಳು …

ಎರಡು ಗಂಟೆಗಳ ಕಾಲ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರ ಹಾವು | ಉರಗ ತಜ್ಞನಿಂದಲೂ ಕಾಪಾಡಲು ಆಗಲಿಲ್ಲ ಆ ಬಾಲಕಿಯನ್ನು !! Read More »

ಮಂಗಳೂರಿಗೂ ಎಂಟ್ರಿ ಕೊಟ್ಟ ನಿಫಾ ವೈರಸ್!!ಇಲ್ಲಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನಲ್ಲಿ ನಿಫಾ ಲಕ್ಷಣ | ವರದಿಗಾಗಿ ಸ್ಯಾಂಪಲ್ ಬೆಂಗಳೂರಿಗೆ ರವಾನೆ-ಜಿಲ್ಲಾಧಿಕಾರಿ ರಾಜೇಂದ್ರ ಕೆವಿ

ಇಲ್ಲಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾದ ಯುವಕನಿಗೆ ನಿಫಾ ವೈರಸ್ ಲಕ್ಷಣಗಳಿದ್ದು,ಸದ್ಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಸ್ಪತ್ರೆ ಮೂಲಗಳು ಆತನ ವರದಿಗಾಗಿ ಕಾಯುತ್ತಿದೆ ಎಂದು ತಿಳಿದು ಬಂದಿದೆ. ಗೋವಾದ ಲ್ಯಾಬ್​ ಒಂದರಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಕಾರವಾರ ಮೂಲದ ಯುವಕನಿಗೆ ಜ್ವರ ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಂಡಿತ್ತು.ಹೀಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ತನಗೆ ನಿಫಾದ ಆತಂಕವಿದೆ ಅಂತ ಹೇಳಿದ್ದ ಯುವಕ, ಟೆಸ್ಟ್ ಮಾಡಲು ಮನವಿ ಮಾಡಿಕೊಂಡಿದ್ದ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರಾಜೇಂದ್ರ …

ಮಂಗಳೂರಿಗೂ ಎಂಟ್ರಿ ಕೊಟ್ಟ ನಿಫಾ ವೈರಸ್!!ಇಲ್ಲಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನಲ್ಲಿ ನಿಫಾ ಲಕ್ಷಣ | ವರದಿಗಾಗಿ ಸ್ಯಾಂಪಲ್ ಬೆಂಗಳೂರಿಗೆ ರವಾನೆ-ಜಿಲ್ಲಾಧಿಕಾರಿ ರಾಜೇಂದ್ರ ಕೆವಿ Read More »

ಬೆಳ್ತಂಗಡಿ|ವಿಪರೀತ ಮಳೆಗೆ ಅಂಚೆ ಕಛೇರಿಯ ಗೋಡೆ ಕುಸಿತ|ಅಗತ್ಯ ದಾಖಲೆಗಳು ಮಣ್ಣಿನಡಿಗೆ ಬಿದ್ದು ಹಾನಿ!!

ಬೆಳ್ತಂಗಡಿ :ವಿಪರೀತ ಮಳೆಯಿಂದಾಗಿ ತೋಟತ್ತಾಡಿಯ ಅಂಚೆ ಕಛೇರಿಯ ಹಿಂಬಾಗದ ಗೋಡೆ ಕುಸಿದಿದ್ದು ಅಪಾರ ಹಾನಿಯಾಗಿದೆ. ಸೆ.14 ರಂದು ರಾತ್ರಿ ವೇಳೆ ಈ ಘಟನೆ ಸಂಭವಿಸಿದೆ.ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗೋಡೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಅಂಚೆ ಪಾಲಕಿ ರೋಸ್ಥಿರವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ನಂತರ ಈ ಘಟನೆ ನಡೆದಿದ್ದರಿಂದ, ಪಾಲಕಿ ಇದರಿಂದ ತಪ್ಪಿಸಿಕೊಂಡಿದ್ದಾರೆ. ಹಳೆ ಮಣ್ಣಿನಿಂದ ನಿರ್ಮಿಸಿದ ಇಟ್ಟಿಗೆಯ ಗೋಡೆ ಹಾಗು ಹೆಂಚಿನ ಛಾವಣಿಯ ಕಟ್ಟಡವಾದ್ದರಿಂದ,ನೀರಿನ ತೇವಾಂಶ ತಾಗಿ ಗೋಡೆ ಕುಸಿದಿರಬಹುದು …

ಬೆಳ್ತಂಗಡಿ|ವಿಪರೀತ ಮಳೆಗೆ ಅಂಚೆ ಕಛೇರಿಯ ಗೋಡೆ ಕುಸಿತ|ಅಗತ್ಯ ದಾಖಲೆಗಳು ಮಣ್ಣಿನಡಿಗೆ ಬಿದ್ದು ಹಾನಿ!! Read More »

ಹೆಸರಾಂತ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದ ಸತ್ಯ!!ವಿಶ್ವದಲ್ಲಿ ಮದುವೆಗಿಂತಲೇ ಮೊದಲು ಮಗುಬೇಕೆನ್ನುವ ಮಹಿಳೆಯರ ಸಂಖ್ಯೆ ಹೆಚ್ಚು!!

ಇಡೀ ವಿಶ್ವದಲ್ಲಿ ಮದುವೆಯಾದ ಬಳಿಕ ಮಗು ಪಡೆಯುವುದು ಪದ್ಧತಿ. ಮದುವೆಗಿಂತ ಮೊದಲು ಮಗು ಹೆತ್ತರೆ ಸಮಾಜ ಆ ಹೆತ್ತಬ್ಬೆಯನ್ನು ಬೇರೆ ದೃಷ್ಟಿಯಲ್ಲಿ ನೋಡುವುದು ಅರಿತ ಸಂಗತಿ. ಇದಕ್ಕೆ ಕಾರಣ ಅನೈತಿಕ ಚಟುವಟಿಕೆ, ಮದುವೆಯಾಗುವುದಾಗಿ ನಂಬಿಸಿ ಬೆಳೆಸಿದ ಸಲುಗೆಯೂ ಆಗಿರಬಹುದು.ಆದರೆ ಸದ್ಯ ಮದುವೆಗಿಂತ ಮೊದಲು ಮಗು ಬೇಕು, ಆ ಬಳಿಕ ಮದುವೆ ಎನ್ನುವ ಮಹಿಳೆಯರೂ ಇದ್ದಾರೆ ಎನ್ನುವ ವಿಚಾರ ನಂಬಲಸಾಧ್ಯವಾದರೂ ಸತ್ಯ. ವಿಶ್ವದಲ್ಲೇ ಮಹತ್ತರವಾದ ಪರಿವರ್ತನೆಯೊಂದು ಬೆಳಕಿಗೆ ಬಂದಿದ್ದು, ಕಳೆದ 20 ವರ್ಷಗಳಿಂದ ಮಹಿಳೆಯರಲ್ಲಿ ಆದ ಐತಿಹಾಸಿಕ ಬದಲಾವಣೆಯ …

ಹೆಸರಾಂತ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದ ಸತ್ಯ!!ವಿಶ್ವದಲ್ಲಿ ಮದುವೆಗಿಂತಲೇ ಮೊದಲು ಮಗುಬೇಕೆನ್ನುವ ಮಹಿಳೆಯರ ಸಂಖ್ಯೆ ಹೆಚ್ಚು!! Read More »

ಪಂಜ : ಬಿಜೆಪಿ ಸುಳ್ಯ ಮಂಡಲದ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ

ಕಡಬ : ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಪಂಜ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ ಸೆ.14ರಂದು ನಡೆಯಿತು. ಪಂಜದ ಹಿರಿಯ ವೈದ್ಯ ಡಾ|| ಯಂ. ರಾಮಯ್ಯ ಭಟ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹರೀಶ್ ಕಂಜಿಪಿಲಿ ಅಧ್ಯಕ್ಷರು, ಭಾ.ಜ.ಪಾ. ಸುಳ್ಯ ಮಂಡಲ ವಹಿಸಿದ್ದರು.ಈಶ್ವರ್ ಕಟೀಲ್ ಜಿಲ್ಲಾ ಉಪಾಧ್ಯಕ್ಷರು ಮತ್ತು ಸಂಚಾಲಕರು, ಆರೋಗ್ಯ ಸ್ವಯಂ ಸೇವಾ ಭಾ.ಜ.ಪಾ., ದ.ಕ.,ಧೀರೇಶ್ ಕೆ. ಸದಸ್ಯರು, ಆರೋಗ್ಯ ಸ್ವಯಂ ಸೇವಾ ಭಾ.ಜ.ಪಾ., ಬಿಜೆಪಿ ಜಿಲ್ಲಾ …

ಪಂಜ : ಬಿಜೆಪಿ ಸುಳ್ಯ ಮಂಡಲದ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ Read More »

ಪುತ್ತೂರು | ಬೇರೆ ಯಾರದ್ದೋ ಮಕ್ಕಳನ್ನು ಬಸ್ ನಿಲ್ದಾಣದ ಬಳಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ ಮಹಿಳೆ | ಸಾರ್ವಜನಿಕರಿಂದ ಚೈಲ್ಡ್ ಲೈನ್ ಗೆ ಮಾಹಿತಿ, ಮಕ್ಕಳ ರಕ್ಷಣೆ

ಬೇರೆಯವರ ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಂಡು ಭಿಕ್ಷಾಟನೆ ಮಾಡಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು,‌ ಈ ಬಗ್ಗೆ ಸಾರ್ವಜನಿಕರಿಂದ ಚೈಲ್ಡ್ ಲೈನ್ 1098 ಹೆಲ್ಪ್ ಲೈನ್ ಗೆ ಬಂದ ಮಾಹಿತಿ ಮೇರೆಗೆ ಚೈಲ್ಡ್ ಹೆಲ್ಪ್ ಲೈನ್ ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಪುತ್ತೂರಿನ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹಿಡಿದುಕೊಂಡು ಸುರತ್ಕಲ್ ಮೂಲದ ಮಹಿಳೆಯೊಬ್ಬರು ಪುತ್ತೂರು ತಾಲೂಕಿನ ಖಾಸಗಿ ಬಸ್ ನಿಲ್ದಾಣದ …

ಪುತ್ತೂರು | ಬೇರೆ ಯಾರದ್ದೋ ಮಕ್ಕಳನ್ನು ಬಸ್ ನಿಲ್ದಾಣದ ಬಳಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ ಮಹಿಳೆ | ಸಾರ್ವಜನಿಕರಿಂದ ಚೈಲ್ಡ್ ಲೈನ್ ಗೆ ಮಾಹಿತಿ, ಮಕ್ಕಳ ರಕ್ಷಣೆ Read More »

ಐದು ನೂರರತ್ತ ಮುಖ ಮಾಡಿದ ಹೊಸ ಅಡಿಕೆ ಧಾರಣೆ

ಸವಣೂರು : ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ.ಸದ್ಯದ ಟ್ರೆಂಡ್ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ಕೆ.ಜಿ.ಗೆ ಐದು ನೂರರತ್ತ ಮುಖಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಪ್ರತೀ ಸೋಮವಾರ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ ಕಾಣುತ್ತಿದೆ. ಸೋಮವಾರ ಹೊರ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ ಕೆ.ಜಿ.ಗೆ 485ಕ್ಕೆ ಖರೀದಿಯಾಗಿದೆ.ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 480ಕ್ಕೆ ಇತ್ತು. ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. …

ಐದು ನೂರರತ್ತ ಮುಖ ಮಾಡಿದ ಹೊಸ ಅಡಿಕೆ ಧಾರಣೆ Read More »

ಲೀಸ್‌ಗೆ ಜಾಗ ನೀಡುವುದಾಗಿ 55 ಲಕ್ಷ ರೂ ಪಡೆದು ವಂಚನೆ | ಸುಳ್ಯ ಅರಂಬೂರಿನ ಅನ್ವರ್ ಕೇರಳ ಪೊಲೀಸರ ವಶಕ್ಕೆ

ಲೀಸ್‌ಗೆ ಜಾಗವನ್ನು ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಸುಳ್ಯದ ಅರಂಬೂರು ಕಲ್ಬರ್ಪೆ ನಿವಾಸಿ ಅನ್ವರ್ ಎಂಬಾತನನ್ನು ಕೇರಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನ್ವರ್ ಎಂಬಾತ ಸುಳ್ಯದಲ್ಲಿ 750 ಎಕರೆ ಜಾಗವನ್ನು ಲೀಸ್‌ಗೆ ನೀಡುವುದಾಗಿ ಹೇಳಿ 2010ನೇ ಇಸವಿಯಲ್ಲಿ 55 ಲಕ್ಷ ರೂಪಾಯಿಗಳನ್ನು ರಾಜೀವನ್, ಹಾಗೂ ಶ್ರೀಧರನ್ ಎಂಬವರಿಂದ ಪಡೆದು ನಂತರ ತಮ್ಮ ದೂರವಾಣಿ ಸಂಖ್ಯೆಯನ್ನು ಸ್ವಿಚ್ ಆಫ್ ಗೊಳಿಸಿ ತಲೆಮರೆಸಿಕೊಂಡಿದ್ದರು ಎಂದು ಕಾನತ್ತೂರಿನ ರಾಜೇಶನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆದೂರು ಎಸ್‌ಐಟಿ ನಾರ್ ಕೋರ್ಟ್ …

ಲೀಸ್‌ಗೆ ಜಾಗ ನೀಡುವುದಾಗಿ 55 ಲಕ್ಷ ರೂ ಪಡೆದು ವಂಚನೆ | ಸುಳ್ಯ ಅರಂಬೂರಿನ ಅನ್ವರ್ ಕೇರಳ ಪೊಲೀಸರ ವಶಕ್ಕೆ Read More »

error: Content is protected !!
Scroll to Top