ಶಾಲೆಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳಿಗೆ ನಿರಾಸೆ!!|ಈ ಬಾರಿಯೂ ರಾಜ್ಯದ 8ನೇ ತರಗತಿ ಮಕ್ಕಳಿಗೆ ಸೈಕಲ್ ವಿತರಣೆ ಅನುಮಾನ!!

ಆ ಬಾರಿ ಕೊರೋನ ಸೋಂಕಿನಿಂದಾಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದರೂ ಸರ್ಕಾರ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ.

ಕೊರೊನಾ ಭೀತಿಯಿಂದ ಮುಚ್ಚಲಾಗಿದ್ದ ಶಾಲೆಗಳು ಕಳೆದ ಕೆಲ ದಿನಗಳಿಂದ ಪುನರಾರಂಭಗೊಂಡಿದ್ದು,ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗಳತ್ತ ಮುಖಮಾಡಿದರೂ ಈ ವಿಷಯ ಮಕ್ಕಳಿಗೆ ಬೇಸರ ತಂದಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಪ್ರತಿವರ್ಷ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಣೆ ಮಾಡುತ್ತಿತ್ತು. ಕಳೆದ ವರ್ಷ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ ಕಾರಣ ಬೈಸಕಲ್ ವಿತರಾಣೆ ಮಾಡಿರಲಿಲ್ಲ.

ಆದರೆ, ಈ ಬಾರಿ ಪ್ರಸ್ತುತ ಶಾಲೆಗಳು ಪುನರ್ ಆರಂಭವಾಗಿವೆ. ವಿದ್ಯಾರ್ಥಿಗಳು ಶಾಲೆಗಳ್ತ ಮುಖಮಾಡಿ ಎರಡು ವಾರ ಕಳೆದಿದ್ದರೂ, ರಾಜ್ಯ ಸರ್ಕಾರ ಮಾತ್ರ ಈವರೆಗೆ ವಿದ್ಯಾರ್ಥಿಗಳಿಗೆ ವಿತರಿಸುವ ಸೈಕಲ್ ವಿಚಾರದ ಬಗ್ಗೆ ಎಲ್ಲೂ ಮಾಹಿತಿ ನೀಡಿಲ್ಲ. ಪ್ರತಿವರ್ಷ ಸರ್ಕಾರ ಶಾಲೆಗಳು ಆರಂಭವಾಗಿ ಕೆಲ ದಿನಗಳಲ್ಲೇ ಸೈಕಲ್ ವಿತರಣೆ ಕುರಿತಂತೆ ಸ್ಪಷ್ಪಡಿಸುತ್ತಿತ್ತು ಆದರೆ, ಈ ಬಾರಿ ಇದುವರೆಗೂ ಮಾಹಿತಿ ನೀಡಿಲ್ಲ.

ಪ್ರಸ್ತುತ ರಾಜ್ಯಸರ್ಕಾರ ಮೊದಲ ಹಂತದಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಹತ್ತನೇ ತರಗತಿ, 9 ನೇ ತರಗತಿಗಳನ್ನು ಆರಂಭ ಮಾಡಿತ್ತು. ಬಳಿಕ ಎರಡನೇ ಹಂತದಲ್ಲಿ 6,7,8 ನೇ ತರಗತಿಗಳನ್ನು ಶುರು ಮಾಡಿದೆ. ಇನ್ನು ಒಂದರಿಂದ ಐದನೇ ತರಗತಿಯವರೆಗೆ ಶಾಲೆಗಳು ಸದ್ಯಕ್ಕೆ ಪುನರಾರಂಭಗೊಳ್ಳುವುದು ಅನುಮಾನ ವಾಗಿದೆ.

ಮತ್ತೊಂದೆಡೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮಾತ್ರ ವಿತರಿಸಲಾಗಿದ್ದು,ಸಮವಸ್ತ್ರ ವಿತರಣೆ ಬಗ್ಗೆ ಇನ್ನು ಸರ್ಕಾರ ನಿಲುವು ಪ್ರಕಟಿಸಿಲ್ಲ. ಇದು ಕೂಡ ವಿದ್ಯಾರ್ಥಿಗಳಿಗೆ ನಿರಾಸೆ ತಂದಿದ್ದು, ಸೈಕಲ್ ವಿತರಣೆ ಅನುಮಾನ ಎಂಬಂತಿದೆ.

Leave A Reply

Your email address will not be published.