ಬೆಳ್ತಂಗಡಿ | ರಾಜಕಾರಣಿಗಳ ಒಳಜಗಳ, ರಸ್ತೆಯೇ ನನ್ನದೆನ್ನುವ ವ್ಯಕ್ತಿ | 40 ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ | ಪಡಂತಾಜೆ ಗ್ರಾಮಸ್ತರ ಗೋಳು ಕೇಳುವವರ್ಯಾರು ??

ಬೆಳ್ತಂಗಡಿ: ತಾಲೂಕಿನ ಶಿಬಾಜೆ ಗ್ರಾಮದ, ಶಿಬಾಜೆ-ಪಡಂತಾಜೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರದಲ್ಲಿಯೇ, ರಸ್ತೆ ದುರಸ್ಥಿಗೊಳಿಸಿಕೊಡುವಂತೆ ಊರ ನಾಗರಿಕರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ ಅರಸಿನಮಕ್ಕಿ ಮಂಡಲ ಪಂಚಾಯತಿ ವತಿಯಿಂದ ಈ ರಸ್ತೆ ನಿರ್ಮಾಣವಾಗಿತ್ತು. ಅದಾಗಿ ರಸ್ತೆ ಪುನಃ ಹದಗೆಟ್ಟಿದೆ. ಈ ವಿಷಯ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನದಲ್ಲಿದೆ. ಆದರೆ ರಾಜಕಾರಣಿಗಳ ಒಳಜಗಳ ಮತ್ತು ಊರ ವ್ಯಕ್ತಿಯೊಬ್ಬನ ತಗಾದೆ ಇಂದ ಅಭಿವೃದ್ಧಿ ಕಾರ್ಯ ತೀವ್ರ ಕುಂಠಿತಗೊಂಡಿದ್ದು ಗ್ರಾಮಸ್ಥರು ಅದೇ ಗುಂಡಿಮಯ ರಸ್ತೆಯಲ್ಲಿ ಸಂಚರಿಸುವಂತಾಗಿದೆ.

ಪಡಂತಾಜೆ ಪರಿಸರದಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ನಿವಾಸಿಗಳು ರಸ್ತೆಯ ಅವ್ಯವಸ್ಥೆಯಿಂದ ನಿತ್ಯ ಪರದಾಡುವಂತಾಗಿದೆ. ಅಗತ್ಯ ಸಂದರ್ಭಗಳಲ್ಲಿ ಆಟೋ ಚಾಲಕರು ಈ ಊರಿಗೆ ಬಾಡಿಗೆ ತೆರಳಲು ನಿರಾಕರಿಸುತ್ತಿದ್ದಾರೆ. ಊರ ದ್ವಿಚಕ್ರ ಸವಾರರಂತು ನಿತ್ಯ ಎದ್ದು ಬಿದ್ದು ಸಂಚರಿಸುತ್ತಿದ್ದಾರೆ. ಶಾಲಾ ಮಕ್ಕಳು ಮತ್ತು ಪಾದಚಾರಿಗಳು ನಿತ್ಯ ನಡೆದಾಡಲು ಪರದಾಡುವ ಪರಿಸ್ಥಿತಿ ಎದುರಾಗಿದೆ.

Ad Widget


Ad Widget


Ad Widget

Ad Widget


Ad Widget

ರಸ್ತೆ ಸಮಸ್ಯೆ ಬಗ್ಗೆ ಊರ ನಾಗರಿಕರು ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಊರ ನಾಗರಿಕರು ಸ್ವತಃ ರಸ್ತೆ ದುರಸ್ಥಿಗೊಳಿಸುವಾಗ, ಊರ ನಾಗರೀಕನೊಬ್ಬ ಅಂದಾಜು 100 ಮೀ. ರಸ್ತೆ ತನ್ನ ಅದೀನದ್ದು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಇನ್ನಾದರೂ ಸಮಸ್ಯೆಗಳನ್ನು ಬಗೆಹರಿಸಿ ನೂತನ ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಇಲ್ಲವೇ ಸರಿ ಪಡಿಸಿ ಕೊಡುವಂತೆ ಊರ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: