ಕಡಬದ ಸಾನ್ವಿಕಾ ಕೆ.ಎಸ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ

ಕಡಬ: ಡಬ್ಲ್ಯು.ಎಸ್.ಎಸ್ ಸ್ಪೋರ್ಟ್ಸ್ ಅಕಾಡೆಮಿ ನೇತೃತ್ವದಲ್ಲಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್ ಪಂದ್ಯಾವಳಿಯ ಕರಾಟೆ ವಿಭಾಗದಲ್ಲಿ ಕಡಬ ತಾಲೂಕಿನ ಪಿಜಕಳ ಗ್ರಾಮದ ಆರಿಗ ಕಂಗುಳೆ ನಿವಾಸಿ ಸಾನ್ವಿಕಾ ಕೆ.ಎಸ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾಳೆ.

ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬುಸಾಬ್ ಪ್ರಶಸ್ತಿ ಪ್ರಮಾಣಪತ್ರ ಹಾಗೂ ಬಹುಮಾನ ನೀಡಿ ಗೌರವಿಸಿದ್ದಾರೆ.ಒಂದು ನಿಮಿಷದಲ್ಲಿ ಗರಿಷ್ಠ ಪಂಚಿಗ್ ಸಾಧನೆಗೆ ಈ ಪ್ರಶಸ್ತಿ ಲಭ್ಯವಾಗಿದೆ.

ಸಾನ್ವಿಕಾಳು ಪಿಜಕಳ ನಿವಾಸಿ ಸದಾನಂದ ಗೌಡ ಹಾಗೂ ವಾಣಿ ದಂಪತಿಯ ಪುತ್ರಿ, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವನ್ನು ಪೂರೈಸಿದ್ದಾಳೆ.

ಈಕೆಗೆ ಕರಾಟೆ ಶಿಕ್ಷಕರಾದ ಯಾದವ್ ಬೀರಂತಂಡ್ಕ ಹಾಗೂ ಅಕ್ಷಯ್ ರವರು ತರಬೇತಿಯನ್ನು ನೀಡಿದ್ದಾರೆ. ಒಳ್ಳೆಯ ಖೋಖೋ ಆಟಗಾರ್ತಿಯಾಗಿರುವ ಸಾನ್ವಿಕಾ ಪ್ರಾಥಮಿಕ ವಿದ್ಯಾಭ್ಯಾಸದ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಳು.

ಮಾತ್ರವಲ್ಲದೆ ಕರಾಟೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಹಲವು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಹಾಡು, ನೃತ್ಯ ಕಲೆಯಲ್ಲಿ ಪರಿಣತಿ ಪಡೆದಿರುವ ಸಾನ್ವಿಕಾ ಇತ್ತೀಚೆಗೆ ಖಾಸಗಿ ವಾಹಿನಿಯೊಂದು ನಡೆಸಿರುವ ಜೂನಿಯರ್ ಮಹಾರಾಜ ರಿಯಾಲಿಟಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾಳೆ.

Leave A Reply

Your email address will not be published.