ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಗೆ ಕ್ರೀಡಾಪಟುಗಳಿಗೆ ಅರ್ಜಿ ಅಹ್ವಾನ|ರಾಜ್ಯದಲ್ಲಿ ಒಟ್ಟು ನೂರು ಹುದ್ದೆಗಳಿಗೆ ನೇಮಕಾತಿ!!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಮೀಸಲಾತಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು,ರಾಜ್ಯದಲ್ಲಿ ಒಟ್ಟು 20 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಮತ್ತು 80 ನಾಗರಿಕ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಆಗಸ್ಟ್ 31ರಿಂದ ಸೆಪ್ಟೆಂಬರ್ 29ರವರೆಗೆ ಅರ್ಹ ಅಭ್ಯರ್ಥಿಗಳು ಈ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಬಹುದು.

ಒಟ್ಟು 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಹಾಕಿ, ಹ್ಯಾಂಡ್ ಬಾಲ್, ಜೂಡೋ, ಕಬಡ್ಡಿ, ಶೂಟಿಂಗ್ (ಕ್ರೀಡೆ), ವಾಲಿಬಾಲ್, ವೇಟ್ ಲಿಫ್ಟಿಂಗ್, ಈಜು (ಅಕ್ವಾಟಿಕ್), ಜಲ ಕ್ರೀಡೆಗಳು – ರೋಯಿಂಗ್, ಕಯಾಕಿಂಗ್ ಮತ್ತು ಕೆನಾಯಿಂಗ್, ಟೆನಿಸ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಯನ್ನು ನೇಮಕಾತಿಗೆ ಪರಿಗಣಿಸಲಿದ್ದಾರೆ.

ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ :

ಪಿಎಸ್‌ಐ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದಿರಬೇಕು.ಕನಿಷ್ಟ 21 ಗರಿಷ್ಟ 30 ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು,ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ನಾಗರಿಕ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ :

ಪಿಯುಸಿ ಅಥವಾ 10+2 ಅಥವಾ ತತ್ಸಮಾನ.ಕನಿಷ್ಟ 19 ಗರಿಷ್ಟ 25 ವಯೋಮಿತಿ ಇದ್ದು,ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ
ಸಡಿಲಿಕೆ ಇದೆ.

ನಿಗದಿತ ಶುಲ್ಕವನ್ನು ನಗದು ಯಾ ಆನ್‌ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿ ಅಥವಾ HDFC ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ, ಚಲನ್‌ನ ಅಭ್ಯರ್ಥಿ ಪ್ರತಿ ಇಟ್ಟುಕೊಳ್ಳಬೇಕು. ಡಿಡಿ ಪೋಸ್ಟಲ್ ಆರ್ಡರ್, ಮನಿ ಆರ್ಡ‌್ರಗಳನ್ನು ಸ್ವೀಕರಿಸುವುದಿಲ್ಲ.

ಶುಲ್ಕ ವಿವರ:

ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ:

SC /ST/CAT-01-250 /- GM & ,OBC(2A,2B,3A,3B) 500/-2

ಪೊಲೀಸ್ ಕಾನ್ಸ್ಟೇಬಲ್:

SC /ST/CAT-01- 200 /- GM & ,OBC(2A,2B,3A,3B) 400/-

ಆನ್ಲೈನ್ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಬಳಸಿ:

http://cpc21.ksp-online.in/

Contact-Ace IAS Academy

Opp. Empire Mall M.G. Rd, Mangalore.7090109997,9663011457

ಅರ್ಜಿ ಹಾಕುವ ಮುನ್ನ ಯಾವುದೇ ತಪ್ಪು ಮಾಹಿತಿ ನೀಡದೆ ಆನ್‌ಲೈನ್‌ನಲ್ಲಿ ಇರುವ ಅರ್ಜಿಯನ್ನು ಭರ್ತಿ ಮಾಡಬೇಕು.

Leave A Reply

Your email address will not be published.