Day: September 12, 2021

ಕಾಣಿಯೂರಿನಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ

ಕಾಣಿಯೂರು: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ವತಿಯಿಂದ 9 ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆಯು ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು. ಮಧ್ಯಾಹ್ನ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.ಮೆಸ್ಕಾಂ ಅಭಿಯಂತರಾದ ರಾಜೇಶ್ ರಾಧೆ-ಕೃಷ್ಣ ವೇಷಧಾರಿ ಪುಟಾಣಿಗಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ‌ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ,ಅಧ್ಯಕ್ಷ ವಾಸುದೇವ ‌ನಾಯ್ಕ್ ತೋಟ,ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು,ಅಧ್ಯಕ್ಷ ಸುರೇಶ್ …

ಕಾಣಿಯೂರಿನಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ Read More »

ಗುಜರಾತ್ ನ ನೂತನ ಸಿ.ಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ

ನೂತನ ಸಿಎಂ ಆಯ್ಕೆ ಪ್ರಕ್ರಿಯೆಗೆ ನಡೆದ ಬಿಎಲ್ ಪಿ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನುಗುಜರಾತ್ ನ ನೂತನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ನೂತನ ಸಿಎಂ ಆಯ್ಕೆಯನ್ನು ಘೋಷಿಸಿದರು. ಬಿಎಲ್ ಪಿ ಸಭೆಯಲ್ಲಿ ವಿಜಯ್ ರೂಪಾನಿ ಅವರು ಸಿಎಂ ಆಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ತಮ್ಮ ನಿಲುವು ಸೂಚಿಸಿದರು. ಆ ಬಳಿಕ ಇತರರಿಂದ ಅಭಿಪ್ರಾಯ …

ಗುಜರಾತ್ ನ ನೂತನ ಸಿ.ಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ Read More »

ಬೆಳ್ತಂಗಡಿ|ಚಾರ್ಮಾಡಿ ಘಾಟ್ 7ನೇ ತಿರುವಿನಲ್ಲಿ ಬಂಡೆ ಕುಸಿತ!!

ಬೆಳ್ತಂಗಡಿ: ಚಾರ್ಮಾಡಿ ಘಾಟಿ 7ನೇ ತಿರುವಿನ ಬಳಿ ಇಂದು ಮಧ್ಯಮ ಗಾತ್ರದ ಬಂಡೆ ಕುಸಿತಕ್ಕೊಳಗಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಘಟನೆ ಸಂಭವಿಸಿದ್ದು,ಇದರಿಂದ ಘಾಟಿ ಪ್ರದೇಶದಲ್ಲಿ ಏಕಮುಖ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿದು ಬಂದಿದೆ. ಮಂಜಿನ ವಾತಾವರಣ ಇರುವುದರಿಂದ ವಾಹನಗಳ ಓಡಾಟಕ್ಕೆ ಅಡ್ಡಿ ಆಗದಂತೆ ತಕ್ಷಣ ತೆರವು ಅಗತ್ಯವಿದ್ದು,ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಬೀದಿ ನಾಯಿಯನ್ನು ಜೀವಂತವಾಗಿ ಹೂಳಿದ ಪಾಪಿಗಳು|ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಒಂಬತ್ತು ಜನರ ಬಂಧನ!!

ಶಿವಮೊಗ್ಗ:ಬೀದಿ ನಾಯಿಗಳ ಹತ್ಯೆ ಮಾಡುವವರ ಸಂಖ್ಯೆ ಇತ್ತೀಚಿಗೆ ಅಧಿಕವೇ ಆಗಿದೆ.ಅವುಗಳಿಗೆ ಅನ್ನ ನೀಡಿ ಆಶ್ರಯ ನೀಡಬೇಕಿದ್ದ ಜನಗಳೇ ಅವುಗಳಿಗೆ ಹಿಂಸೆ ನೀಡುತ್ತಿದ್ದಾರೆ. ಇದೀಗ ಭದ್ರಾವತಿ ತಾಲೂಕು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಕೊಂದು ಅರಣ್ಯಪ್ರದೇಶದಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರು, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಮತ್ತು ನಾಯಿಗಳನ್ನು ಹಿಡಿದು ಸಾಯಿಸಿದ್ದ ಮೈಸೂರಿನ ನಾಲ್ವರನ್ನು ಬಂಧಿಸಲಾಗಿದೆ. ಬೀದಿನಾಯಿಗಳ ಕಾಟ ವಿಪರೀತವಾಗಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಕಂಬದಾಳ್ …

ಬೀದಿ ನಾಯಿಯನ್ನು ಜೀವಂತವಾಗಿ ಹೂಳಿದ ಪಾಪಿಗಳು|ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಒಂಬತ್ತು ಜನರ ಬಂಧನ!! Read More »

ಕಾಣಿಯೂರು ಲಕ್ಷ್ಮೀನರಸಿಂಹ ಯುವಕ ಮಂಡಲದಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಾಣಿಯೂರು: 2020-21 ನೇ ಸಾಲಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿನ 7 ನೇ ತರಗತಿ ಮತ್ತು ಸರಕಾರಿ ಪ್ರೌಢಶಾಲೆ ಕಾಣಿಯೂರು ಇಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕದೊಂದಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ವತಿಯಿಂದ ಅಭಿನಂದಿಸಲಾಯಿತು. ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ 34 ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಎಸ್ಎಸ್ಎಲ್ ಸಿ ಯಲ್ಲಿ 597 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ …

ಕಾಣಿಯೂರು ಲಕ್ಷ್ಮೀನರಸಿಂಹ ಯುವಕ ಮಂಡಲದಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ Read More »

ಕಾಣಿಯೂರು : ಸಚಿವ ಎಸ್.ಅಂಗಾರ ಅವರಿಂದ ರಸ್ತೆ ಕಾಮಗಾರಿ ವೀಕ್ಷಣೆ

ಕಾಣಿಯೂರು:ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕು ಕಾಣಿಯೂರು ಗ್ರಾಮದ ಕಾಣಿಯೂರು ಬಾಂತೈ- ಲಕ್ಷ್ಮೀನರಸಿಂಹ ಭಜನಾ ಮಂದಿರ-ಪ್ರಗತಿ ಶಾಲಾ ರಸ್ತೆಯ 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರೀಟೀಕರಣ ಕಾಮಗಾರಿಯನ್ನು ಬಂದರು- ಮೀನುಗಾರಿಕೆ,ಒಳನಾಡು ಜಲಸಾರಿಗೆ ಸಚಿವ,ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಅಂಗಾರ ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ರೈ ಕೆಡೆಂಜಿ, ಸುಬೋಧ್ ಶೆಟ್ಟಿ ಮೇನಾಲ,ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ, ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದುನಡ್ಕ,ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಮುಗರಂಜ, ಬಿಜೆಪಿ …

ಕಾಣಿಯೂರು : ಸಚಿವ ಎಸ್.ಅಂಗಾರ ಅವರಿಂದ ರಸ್ತೆ ಕಾಮಗಾರಿ ವೀಕ್ಷಣೆ Read More »

ಚಿಕನ್ ತಂದೂರಿ ಬಿರಿಯಾನಿ ತಿಂದು ಹತ್ತು ವರ್ಷದ ಬಾಲಕಿ ಸಾವು|ಅಷ್ಟಕ್ಕೂ ಆ ಬಿರಿಯಾನಿಯಲ್ಲಿ ಇದ್ದಿದ್ದಾದರೂ ಏನು !!?

ಇತ್ತೀಚೆಗಂತೂ ಆಹಾರ ತಯಾರಿಸುವುದು ಒಂದು ನಿರ್ಲಕ್ಷ್ಯದಂತಾಗಿದೆ.ರಸ್ತೆ ಬದಿ ಕೊಳಚೆ ಪ್ರದೇಶದಲ್ಲಿ ಎಲ್ಲೆಡೆ ಹೋಟೆಲ್ ಮಯವಾಗಿದೆ. ಸಿಕ್ಕಿದಲ್ಲಿ ಆಹಾರ ತಿಂದು ಹೊಟ್ಟೆ ಹಾಳು ಮಾಡಿಕೊಂಡವರೆಷ್ಟೋ ಜನ ಇದ್ದಾರೆ. ಆದರೆ ಇಲ್ಲೊಂದು ಕಡೆ ಸ್ಟಾರ್ ಹೋಟೆಲ್ ಬಿರಿಯಾನಿ ತಿಂದು ಸಾವನ್ನಪ್ಪಿದ ಘಟನೆ ಅಂತೂ ಭೀಕರವಾಗಿದೆ.ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆ ಅರ್ಣಿ ಎಂಬಲ್ಲಿರುವ 7ಸ್ಟಾರ್​ ಹೋಟೆಲ್​ವೊಂದರಲ್ಲಿ ಈ ಘಟನೆ ನಡೆದಿದೆ. ಲೋಕ್ಷಣಾ ಎಂಬ 10 ವರ್ಷದ ಬಾಲಕಿ ತನ್ನ ಕುಟುಂಬದವರೊಂದಿಗೆ ಉಪಾಹಾರಗೃಹಕ್ಕೆ ಹೋಗಿ ಚಿಕನ್ ತಂದೂರಿ ಬಿರ್ಯಾನಿ ತಿಂದಿದ್ದಳು. ಆದರೆ ಕೆಲವೇ ಹೊತ್ತಲ್ಲಿ …

ಚಿಕನ್ ತಂದೂರಿ ಬಿರಿಯಾನಿ ತಿಂದು ಹತ್ತು ವರ್ಷದ ಬಾಲಕಿ ಸಾವು|ಅಷ್ಟಕ್ಕೂ ಆ ಬಿರಿಯಾನಿಯಲ್ಲಿ ಇದ್ದಿದ್ದಾದರೂ ಏನು !!? Read More »

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಗೆ ಕ್ರೀಡಾಪಟುಗಳಿಗೆ ಅರ್ಜಿ ಅಹ್ವಾನ|ರಾಜ್ಯದಲ್ಲಿ ಒಟ್ಟು ನೂರು ಹುದ್ದೆಗಳಿಗೆ ನೇಮಕಾತಿ!!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಮೀಸಲಾತಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು,ರಾಜ್ಯದಲ್ಲಿ ಒಟ್ಟು 20 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಮತ್ತು 80 ನಾಗರಿಕ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 29ರವರೆಗೆ ಅರ್ಹ ಅಭ್ಯರ್ಥಿಗಳು ಈ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಬಹುದು. ಒಟ್ಟು 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಹಾಕಿ, ಹ್ಯಾಂಡ್ ಬಾಲ್, ಜೂಡೋ, ಕಬಡ್ಡಿ, ಶೂಟಿಂಗ್ …

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಗೆ ಕ್ರೀಡಾಪಟುಗಳಿಗೆ ಅರ್ಜಿ ಅಹ್ವಾನ|ರಾಜ್ಯದಲ್ಲಿ ಒಟ್ಟು ನೂರು ಹುದ್ದೆಗಳಿಗೆ ನೇಮಕಾತಿ!! Read More »

ಶಿಕ್ಷಕರಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಸಚಿವ |ಶಿಕ್ಷಕರ ರಜೆ ಕಡಿತಗೊಳಿಸಿ ಪೂರ್ಣ ಪಠ್ಯ ಕ್ರಮ ತೆಗೆದುಕೊಳ್ಳುವ ಚಿಂತನೆ!!

ಶಿವಮೊಗ್ಗ:ಕೊರೋನದಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ನಷ್ಟವಾಗಿದ್ದು, ಕಳೆದ ಬಾರಿ ಪಠ್ಯ ಕಡಿತಗೊಳಿಸಲಾಗಿತ್ತು. ಆದರೆ ಈ ಬಾರಿ ಪಠ್ಯ ಕಡಿತಗೊಳಿಸದೆ ಶಿಕ್ಷಕರ ರಜೆ ಕಡಿತಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ರಜೆ ಕಡಿಮೆ ಮಾಡಿ ಕಲಿಕಾ ಅವಧಿ ನಷ್ಟ ಸರಿದೂಗಿಸಲು ಚಿಂತನೆ ನಡೆಸಲಾಗಿದ್ದು,ಪಠ್ಯ ಕಡಿತಗೊಳಿಸದೆ ಪಾಠಗಳನ್ನು ಪೂರ್ಣಗೊಳಿಸುವ ಚಿಂತನೆ ಇದೆ ಎಂದು ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಇರುವ ಪಠ್ಯ ಪೂರ್ಣಗೊಳಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಪಠ್ಯ ಕಡಿತಗೊಳಿಸಿದರೆ ಅವರಿಗೆ ನಷ್ಟವಾಗುತ್ತದೆ. ಕಳೆದ ಒಂದುವರೆ ವರ್ಷದಿಂದ …

ಶಿಕ್ಷಕರಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಸಚಿವ |ಶಿಕ್ಷಕರ ರಜೆ ಕಡಿತಗೊಳಿಸಿ ಪೂರ್ಣ ಪಠ್ಯ ಕ್ರಮ ತೆಗೆದುಕೊಳ್ಳುವ ಚಿಂತನೆ!! Read More »

ಮತ್ತೆ ಶುರುವಾಗಲಿದೆ ವಿಧಾನಸಭಾ ಅಧಿವೇಶನ!!ಈ ಬಾರಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಚರ್ಚೆಯಾಗಲಿದೆಯೇ ತೈಲ ಬೆಲೆ ಏರಿಕೆ,ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ|

ಮಹಾಮಾರಿಯಿಂದಾಗಿ ನಿಂತುಹೋಗಿದ್ದ ವಿಧಾನಸಭೆ ಅಧಿವೇಶನ ಬರೋಬ್ಬರಿ ಆರು ತಿಂಗಳುಗಳ ಭರ್ಜರಿ ಅಂತರದ ಬಳಿಕ ಮತ್ತೆ ಶುರುವಾಗಲಿದ್ದು, ಈ ಬಾರಿ ಸುಮಾರು ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಆನ್ ಲೈನ್ ಜೂಜಾಟ ಹಾಗೂ ಪೊಲೀಸ್ ಕಾಯಿದೆ 1963 ರ ತಿದ್ದುಪಡಿ ಸಹಿತ 18ಕ್ಕೂ ಮಿಕ್ಕಿ ಮಸೂದೆಗಳ ಮಂಡನೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಇತ್ತ ವಿಧಾನ ಸಭಾ ಪ್ರತಿಪಕ್ಷಗಳ ನಾಯಕರು ಸರ್ಕಾರವನ್ನು ಕೆಲ ವಿಷಯದಲ್ಲಿ ತೀವ್ರ ತರಾಟೆಗೆ ತೆಗೆದುಕೊಳ್ಳುವ ತಂತ್ರ ರೂಪಿಸಿದೆ. ಈ ಅಧಿವೇಶನದಲ್ಲಿ ಸಾಕಷ್ಟು ಸಮಯವನ್ನು …

ಮತ್ತೆ ಶುರುವಾಗಲಿದೆ ವಿಧಾನಸಭಾ ಅಧಿವೇಶನ!!ಈ ಬಾರಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಚರ್ಚೆಯಾಗಲಿದೆಯೇ ತೈಲ ಬೆಲೆ ಏರಿಕೆ,ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ| Read More »

error: Content is protected !!
Scroll to Top