ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಗಣಹೋಮ

ದಿನಾಂಕ 10/09/2021 ನೇ ಶುಕ್ರವಾರ ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಗಣಹೋಮ ನಡೆಯಿತು.

ಕಳೆದ ಹಲವಾರು ವರ್ಷಗಳಿಂದ ನಾವೆಲ್ಲರೂ ಜೊತೆ ಸೇರಿಕೊಂಡು ಶ್ರದ್ಧಾಭಕ್ತಿಯಿಂದ ಶ್ರೀ ಗಣೇಶೋತ್ಸವ ಹಬ್ಬವನ್ನು ವಿಜೃಂಭಣೆಯಿಂದ ಪೆರ್ಲಂಪಾಡಿಯಲ್ಲಿ ಆಚರಿಸುತ್ತಿದ್ದೆವು. ಆದರೆ ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಬಂದೆರಗಿದ ಕೊರೋನ ಮಹಾಮಾರಿಯ ಕಾರಣದಿಂದಾಗಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ನಿಟ್ಟಿನಿಂದ ಕಳೆದ ಬಾರಿ ಚೌತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದೇ ಹೋಯಿತು ಹಾಗೂ ಈ ಬಾರಿ ಕೂಡ ಯಾವ ರೀತಿಯ ಆಚರಣೆ ಮಾಡಬೇಕೆಂಬ ಗೊಂದಲದಲ್ಲಿರುವಾಗಲೇ ಚೌತಿ ಬಂದೇ ಬಿಟ್ಟಿತು. ಪ್ರಸ್ತುತ ದಿನಗಳಲ್ಲಿ ಹಬ್ಬದ ಸಂಭ್ರಮಾಚರಣೆಗಿಂತಲೂ ಆಚರಣೆಗೆ ಸರ್ಕಾರದ ಅನುಮತಿ ಇದ್ದರೂ ಕೂಡ ನಮ್ಮೆಲ್ಲರ ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಮುಂದುವರಿಯಲೇಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಸಮಯದ ಕೊರತೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಮ್ಮ ಮೊದಲ ಆದ್ಯತೆ ಎಂಬ ಈ ಪ್ರಮುಖ ಕಾರಣಗಳಿಗಾಗಿ ನಾವು ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವನ್ನು ಗಣಹೋಮ ‌ಮಾಡುವುದರ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪೆರ್ಲಂಪಾಡಿ, ಹಿಂದು ಮುಖಂಡರುಗಳು, ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Leave A Reply

Your email address will not be published.