ಇನ್ನು ‌ಹೊರ ಜಗತ್ತು ನೋಡದ ಹಸುಗೂಸನ್ನು ಪೊದೆಗೆ ಎಸೆದು ಹೋದ ಪಾಪಿಗಳು|ಸ್ಥಳೀಯರಿಂದ ಮರುಜನ್ಮ ಪಡೆದ ಕೂಸು

ಚಿಕ್ಕಮಗಳೂರು : ಮಕ್ಕಳು ದೇವರಿಗೆ ಸಮಾನ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಎಳೆ ಕೂಸನ್ನೆ ಪೊದೆಗೆ ಎಸಗಿ ಹೋಗಿರುವ ಮನ ಕರಗುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳದಲ್ಲಿ ನಡೆದಿದೆ.

ಇನ್ನು ತಾನೇ ಕಣ್ಣು ಬಿಟ್ಟು ಜಗತ್ತು ನೋಡ ಬೇಕಿದ್ದ ನವಜಾತ ಶಿಶುವನ್ನು ಯಾರೋ ಕ್ರೂರಿಗಳು ಪೊದೆಗೆ ಎಸೆದು ಹೋಗಿದ್ದರು. ಏನು ಅರಿವಿಲ್ಲದ ಆ ಮುಗ್ಧ ಮಗು ಅಳುತಿದ್ದ ಶಬ್ದ ಪೊದೆಯೊಳಗಿಂದ ಕೇಳಿ ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ತಕ್ಷಣ ಹಸುಗೂಸಿನ ಅಳಲು ಕೇಳಿ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪೊದೆಯಲ್ಲಿ ಬಿದ್ದಿದ್ದ ಗಂಡು ಮಗುವನ್ನು ರಕ್ಷಣೆ ಮಾಡಿದ್ದರಿಂದ ಆ ಮಗುವಿಗೆ ಮರುಜನ್ಮ ದೊರಕಿ ಜಗತ್ತು ನೋಡುವಂತಾಗಿದೆ.

error: Content is protected !!
Scroll to Top
%d bloggers like this: