ಎಸ್ ಬಿಐ ಜಾರಿಗೆ ತಂದಿದೆ ‘ಪ್ಲಾಟಿನಮ್ ಡೆಪೋಸಿಟ್’ ಯೋಜನೆ | ಈ ವಿಶೇಷ ಡೆಪೋಸಿಟ್ ಮಾಡಿಸಿದರೆ ಸಿಗಲಿದೆ ಅಧಿಕ ಬಡ್ಡಿ !!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಈ ವಿಶೇಷವಾದ ಠೇವಣಿ ಯೋಜನೆಯನ್ನು ಆರಂಭಿಸಿದೆ.

ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ಎಸ್‌ಬಿಐ ಪ್ಲಾಟಿನಂ ಡಿಪೋಸಿಟ್ (SBI Platinum specal deposit), ವಿಶೇಷ ಠೇವಣಿ ಯೋಜನೆಯಾಗಿದ್ದು, ಇದು ಸೀಮಿತ ಅವಧಿವರೆಗೆ ಮಾತ್ರ ಲಭ್ಯವಿರಲಿದೆ. ನೀವು ಕೂಡ ಹೆಚ್ಚಿನ ಲಾಭ ಗಳಿಸಲು ಬಯಸುವುದಾದರೆ, ಸೆಪ್ಟೆಂಬರ್ 14 ರ ಮೊದಲು ಈ ವಿಶೇಷ ಠೇವಣಿಯನ್ನು ಮಾಡಿಸಬೇಕು. ಎಸ್‌ಬಿಐ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ಬ್ಯಾಂಕ್ :

ಭಾರತದ 75 ನೇ ವರ್ಷದ ಸ್ವಾತಂತ್ರ್ಯವನ್ನು ಪ್ಲಾಟಿನಂ ಠೇವಣಿಗಳೊಂದಿಗೆ (SBI Platinum special deposit) ಆಚರಿಸುವ ಸಮಯ ಬಂದಿದೆ ಎಂದು, ಎಸ್‌ಬಿಐ ಹೇಳಿದೆ. ಎಸ್‌ಬಿಐನಲ್ಲಿ ಟರ್ಮ್ ಡಿಪೋಸಿಟ್ ಮತ್ತು ವಿಶೇಷ ಟರ್ಮ್ ಡಿಪೋಸಿಟ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ವಿಶೇಷ ಠೇವಣಿ ಯೋಜನೆಯ ವೈಶಿಷ್ಟ್ಯಗಳು :

  • ಈ ಯೋಜನೆಯಡಿ, ಗ್ರಾಹಕರು ಹಣವನ್ನು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ಡಿಪೋಸಿಟ್ ಮಾಡಬಹುದು
  • ಅಲ್ಲದೆ, NRE ಮತ್ತು NRO ಟರ್ಮ್ ಡಿಪೋಸಿಟ್ (Term deposit benefits) ಒಳಗೊಂಡಂತೆ, ಡೋಮ್ಯಾಸ್ಟಿಕ್ ರಿಟೇಲ್ ಟರ್ಮ್ ಡಿಪೋಸಿಟ್(2 ಕೋಟಿಗಿಂತ ಕಡಿಮೆ) ಈ ಸ್ಕೀಮ್ ಲಾಭವನ್ನು ಪಡೆಯಬಹುದು
  • ಇದರ ಅಡಿಯಲ್ಲಿ, ಹೊಸ ಮತ್ತು ರಿನಿವಲ್ ಠೇವಣಿಗಳನ್ನು ಸಹ ಮಾಡಬಹುದು
  • ಹಾಗೆಯೇ ಕೇವಲ ಟರ್ಮ್ ಡಿಪೋಸಿಟ್ ಮತ್ತು ವಿಶೇಷ ಟರ್ಮ್ ಡಿಪೋಸಿಟ್ ಪ್ರಾಡಕ್ಟ್ ಇದೆ
  • NRE ಡಿಪೋಸಿಟ್ ಕೇವಲ 525 ಮತ್ತು 2250 ದಿನಗಳವರೆಗೆ ಮಾತ್ರ ಇರಲಿದೆ

ಆದರೆ ನೆನಪಿರಲಿ ಈ ವಿಶೇಷ ಕೊಡುಗೆ ಸೆಪ್ಟೆಂಬರ್ 14 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆದಷ್ಟು ಬೇಗ ಈ ಠೇವಣಿಯ ಲಾಭ ಪಡೆಯಬಯಸುವವರು ಬ್ಯಾಂಕ್ ಗೆ ಭೇಟಿ ನೀಡಿ.

Leave A Reply

Your email address will not be published.