ಹಣ ಹೂಡಿಕೆ ಮಾಡೋರಿಗೆ ಬಂದಿದೆ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ |
5 ವರ್ಷ ಹೂಡಿಕೆ ಮಾಡಿದ್ರೆ 14ಲಕ್ಷ ನಿಮ್ಮ ಕೈ ಸೇರಬಹುದು!!?
|ಪೋಸ್ಟ್ ಆಫೀಸ್ ನ ಈ ಸ್ಕೀಮ್ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್

ಈಗಿನ ಕಾಲದಲ್ಲಿ ಎಲ್ಲರಿಗೂ ತಲೆಯಲ್ಲಿರುವ ದೊಡ್ಡ ಯೋಚನೆ ಏನಪ್ಪಾ ಅಂದರೆ ಭವಿಷ್ಯಕ್ಕಾಗಿ ಹಣದ ಹೂಡಿಕೆ. ನೀವು ಕೂಡ ಎಲ್ಲೆಲ್ಲೋ, ಯಾವುದೋ ಒಂದು ರೀತಿಯಲ್ಲಿ ಹೂಡಿಕೆ ಮಾಡಿರುತ್ತೀರಿ. ಆದರೆ ಅದೆಷ್ಟೇ ಬಗೆಬಗೆಯ ಹೂಡಿಕೆ, ಸೇವಿಂಗ್ಸ್ ಸ್ಕೀಂಗಳು, ವಿಮೆಗಳು ಬಂದಿರಲಿ, ಪೋಸ್ಟ್ ಆಫೀಸ್ ನಲ್ಲಿ ಮಾಡೋ ಹೂಡಿಕೆಯ ಮೇಲೆ ಜನರಿಗೆ ಇರೋ ನಂಬಿಕೆಯೇ ಬೇರೆ.

ಮೊದಲೆಲ್ಲಾ ಹಣ ಕೂಡಿಡೋದು ಅಂದರೆ ಅದು ಪೋಸ್ಟ್ ಆಫೀಸ್ ನ ಆರ್ ಡಿ ಎಂದೇ ಎಲ್ಲರ ಅನಿಸಿಕೆಯಾಗಿತ್ತು. ಭದ್ರತೆ ಮಾತ್ರವಲ್ಲದೆ ಹೆಚ್ಚು ಬಡ್ಡಿ, ತೆರಿಗೆ ವಿನಾಯಿತಿ, ಸಣ್ಣ ಹೂಡಿಕೆಗೆ ಉತ್ತಮ ರಿಟರ್ನ್ಸ್ ಇದೆಲ್ಲಾ ಇತ್ತು. ಈಗಲೂ ಹೆಚ್ಚು ಕಡಿಮೆ ಹಾಗೇ ಇದ್ರೂ ಬೇರೆ ಬಗೆಬಗೆಯ ಹೂಡಿಕೆ ಆಫರ್​ಗಳ ನಡುವೆ ಪೋಸ್ಟ್ ಆಫೀಸ್ ಸ್ಕೀಂಗಳು ಒಂದರ್ಥದಲ್ಲಿ ಕಳೆದೇ ಹೋಗಿವೆ ಎನ್ನಬಹುದು.

ಆದ್ರೆ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಪೋಸ್ಟ್ ಆಫೀಸ್ ನ ಈ ಸ್ಕೀಂ ಒಂದು ಧಿಡೀರನೆ ಜನಪ್ರಿಯತೆ ಪಡೆಯುತ್ತಿದೆ. ಕೇವಲ 5 ವರ್ಷಗಳವರಗೆ ಮಾತ್ರ ಸಣ್ಣ ಪ್ರಮಾಣದಲ್ಲಿ ನೀವು ಹಣ ಹೂಡಿಕೆ ಮಾಡಿದ್ರೆ ಸಾಕು, 14 ಲಕ್ಷ ರೂಪಾಯಿ ನಿಮ್ಮ ಕೈಸೇರಲಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಇದು ಹೇಳಿ ಮಾಡಿಸಿದ ಯೋಜನೆ. ಏನಿದು ಸ್ಕೀಂ, ಯಾರಿಗೆಲ್ಲಾ ಪ್ರಯೋಜನ? ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಂ. ಪೋಸ್ಟ್ ಆಫೀಸಿನಲ್ಲಿ ವಿವಿಧ ವಯಸ್ಸಿನವರಿಗೆ ಬೇರೆ ಬೇರೆ ಬಗೆಯ ಉಳಿತಾಯ ಯೋಜನೆಗಳಿವೆ. ಈ ಕೊರೋನಾ ಸಂದರ್ಭದಲ್ಲಿ ಆದಷ್ಟು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಬರುವ ಯೋಜನೆಗಳ ಕಡೆಗೇ ಗಮನ ಹರಿಸಬೇಕಿದೆ. ಹಾಗಾಗಿ ಈ ಯೋಜನೆ ಬಹಳ ಸೂಕ್ತವಾದದ್ದು ಎನ್ನಲಾಗಿದೆ. ಈ ಯೋಜನೆಯಲ್ಲಿ ಶೇಕಡಾ 7.4 ರಷ್ಟು ಬಡ್ಡಿ ದರ ಸಿಗಲಿದೆ. ಕೇವಲ 5 ವರ್ಷಗಳಲ್ಲಿ 14 ಲಕ್ಷ ರೂಪಾಯಿ ದೊರೆಯುವಂತೆ ಮಾಡೋದು ಹೇಗೆ ಎಂದು ನೋಡೋಣ.

ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಲು ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ಅಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಬಹುದು. ಅಥವಾ ಸರ್ಕಾರಿ ಕೆಲಸದಲ್ಲಿ ಇದ್ದು ವಾಲಂಟರಿ ರಿಟೈರ್​ಮೆಂಟ್ ತೆಗೆದುಕೊಂಡವರು ಕೂಡಾ ಈ ಯೋಜನೆಯನ್ನು ಪಡೆಯಬಹುದು. 5 ವರ್ಷಗಳಲ್ಲಿ ಈ ಹಿರಿಯರು 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ಅವರಿಗೆ ಅಂತ್ಯದಲ್ಲಿ ಒಟ್ಟು 14,28,964 ರೂಪಾಯಿಗಳು ಸಿಗುತ್ತವೆ. ಇದು ವಾರ್ಷಿಕ ಬಡ್ಡಿ ದರ ಇರುವ ಯೋಜನೆ ಆಗಿರೋದ್ರಿಂದ ಒಟ್ಟು 4,28,964 ರೂಪಾಯಿಗಳು ಬಡ್ಡಿ ಹಣ ನಿಮ್ಮ ಕೈಸೇರುತ್ತದೆ.

ಖಾತೆ ತೆರೆಯಲು ಎಷ್ಟು ಹಣ ಇರಬೇಕು?

ಈ ಯೋಜನೆಯ ಪ್ರಕಾರ 1000 ಸಾವಿರ ರೂಪಾಯಿಯಿಂದ ಹಿಡಿದು 15 ಲಕ್ಷ ರೂಪಾಯಿ ತನಕವೂ ನೀವು ಖಾತೆಯಲ್ಲಿ ಹಣ ಇಡಬಹುದಾಗಿದೆ. 1 ಲಕ್ಷಕ್ಕಿಂತ ಕಡಿಮೆ ಹಣ ಬಳಸಿ ಖಾತೆ ತೆರೆಯುತ್ತೀರಾ ಎಂದಾದರೆ ಅದಕ್ಕೆ ಕ್ಯಾಶ್ ಕೊಟ್ಟರೂ ನಡೆಯುತ್ತದೆ. 1 ಲಕ್ಷಕ್ಕೂ ಮೀರಿದ ಹಣಕ್ಕೆ ಚೆಕ್ ನೀಡುವ ಸೌಲಭ್ಯ ಇದೆ.

ತೆರಿಗೆ ವಿನಾಯ್ತಿ

ಈ ಯೋಜನೆಯಡಿಯಲ್ಲಿ ನೀವು ಮಾಡಿರುವ ಹೂಡಿಕೆಯ ಬಡ್ಡಿ ವರ್ಷಕ್ಕೆ 10 ಸಾವಿರ ರೂಪಾಯಿಗಳಿಗಿಂತ ಜಾಸ್ತಿ ಇದ್ದರೆ ಟಿಡಿಎಸ್ ಕಟ್ ಮಾಡಬೇಕಾಗುತ್ತದೆ. ಆದರೆ ಈ ಯೋಜನೆಯು ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಬರುತ್ತದೆ.

Leave A Reply

Your email address will not be published.