ರಾಜ್ಯದಲ್ಲಿ ತಲೆಎತ್ತಲಿವೆ ‘ಟ್ರಾನ್ಸ್ ಫಾರ್ಮರ್ ಬ್ಯಾಂಕುಗಳು’ | ಪಡಿತರ ಚೀಟಿ ಹೊಂದಿರುವ ಮನೆಗೆ ಇನ್ನು ಮೂಡಲಿದೆ ‘ಬೆಳಕು’ | ಇದು ನಮ್ಮ ನೂತನ ಸಚಿವರ ಯೋಜನೆಗಳು

ಬೆಂಗಳೂರು: ಕೇವಲ ಪಡಿತರ ಚೀಟಿ ಮೂಲಕ ಗ್ರಾಮೀಣ ಪ್ರದೇಶದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದ ಎಲ್ಲ ವಿಭಾಗಗಳಲ್ಲಿ ‘ಟ್ರಾನ್ಸ್‌ಫಾರ್ಮರ್ ಬ್ಯಾಂಕ್’ ನಿರ್ಮಿಸುವ ಚಿಂತನೆಯಿದೆ. ಟಿಸಿ ಹಾಳಾದರೆ 24 ಗಂಟೆಯಲ್ಲಿ ಬದಲಾಯಿಸಬೇಕು ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಬೆಳಕು ಯೋಜನೆಯಡಿ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರ ( NOC) ಅಗತ್ಯವಿಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಇದುವರೆಗೆ ಎಲ್ಲಾ ಸವಲತ್ತುಗಳು ಬಿ.ಪಿ.ಎಲ್ ಕಾರ್ಡ್ ದಾರರಿಗೆ ಮಾತ್ರ ದೊರಕುತಿತ್ತು. ಆದರೆ ಈ ಬೆಳಕು ಯೋಜನೆ ಎ.ಪಿ.ಎಲ್ ಕಾರ್ಡ್ ದಾರರಿಗೂ ಸೀಮಿತವಾಗಲಿದೆ.

ಸುಮಾರು 3 ಲಕ್ಷ ಮನೆಗಳಿಗೆ ಮುಂದಿನ 100 ದಿನಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಇದ್ದರೆ ಸಾಕು, ಅವರಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅನೇಕ ಬಡವರು ಮನೆ ನಿರ್ಮಿಸಿಕೊಂಡಿದ್ದರೂ, ವಿದ್ಯುತ್ ಸಂಪರ್ಕ ಪಡೆಯಲು ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಳಕು ಯೋಜನೆಯ ಮೂಲಕ ಎನ್‌ಒಸಿ ಇಲ್ಲದೇ ರೇಷನ್ ಕಾರ್ಡ್ ಆಧರಿಸಿ ಎಲ್ಲರಿಗೂ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.