Day: September 6, 2021

ನಾಣ್ಯ ನುಂಗಿದ ಮಗು ಸಾವು | ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣಬಿಟ್ಟ 4 ವರ್ಷದ ಖುಷಿ

ಮೈಸೂರು : 5 ರೂಪಾಯಿ ನಾಣ್ಯ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಬಿಳಿಕೆರೆಯ ಆಯರಹಳ್ಳಿಯ ನಾಲ್ಕು ವರ್ಷದ ಖುಷಿ ಮೃತ ಬಾಲಕಿ. ಈಕೆ ಮೈಸೂರಿನ ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದು, ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂ‌. ನಾಣ್ಯ ನುಂಗಿದ್ದಾಳೆ. ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ವೇಳೆಯೇ ಮಗು ಕೊನೆಯುಸಿರೆಳೆದಿದೆ.

ಬೆಳ್ತಂಗಡಿ | ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಚರಂಡಿಗೆ ಮಗುಚಿ ಬಿದ್ದ ಲಾರಿ

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಯಲ್ಲಿ ರಸ್ತೆಯ ಗುಂಡಿ ತಪ್ಪಿಸಲು ಹೋಗಿ ರಸ್ತೆಬದಿಯ ಚರಂಡಿಗೆ ಕಲ್ಲು ತುಂಬಿದ್ದ ಲಾರಿ ಮಗುಚಿದ ಘಟನೆ ನಡೆದಿದೆ. ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಪಕ್ಕದ ಚರಂಡಿಗೆ ಮಗುಚಿದೆ. ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಹೆಚ್ಚಾಗಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಸಂಬಂಧಪಟ್ಟವರು ಆದಷ್ಟು ಬೇಗ ರಸ್ತೆ ದುರಸ್ತಿ ಕಾರ್ಯ ಮಾಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೆ. 17 ರಿಂದ 20 ದಿನಗಳ ಕಾಲ ಬಿಜೆಪಿ‌ಯಿಂದ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’

ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು 20 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಅವರ 71 ನೇ ಜನುಮದಿನದ ಅಂಗವಾಗಿ ಸೆ. 17 ರಿಂದ 20 ದಿನಗಳ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ. 20 ದಿನಗಳ ಕಾಲ ರಕ್ತದಾನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ಈಗಾಗಲೇ ಎಲ್ಲಾ ರಾಜ್ಯ ಘಟಕಗಳಿಗೆ ಸೂಚನೆಯನ್ನು ಸಹ …

ಸೆ. 17 ರಿಂದ 20 ದಿನಗಳ ಕಾಲ ಬಿಜೆಪಿ‌ಯಿಂದ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ Read More »

ಭದ್ರಾವತಿ ನಗರಸಭೆ ಉಪ ಚುನಾವಣೆ ಜೆಡಿಎಸ್ ಗೆಲುವು | ಎರಡಂಕಿ ದಾಟದ ಬಿಜೆಪಿ ಮತ

ಭದ್ರಾವತಿ ನಗರಸಭೆ 29ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಜೆಡಿಎಸ್ ಅಭ್ಯರ್ಥಿ ನಾಗರತ್ನ ಅವರು ಗೆಲುವು ದಾಖಲಿಸಿದ್ದಾರೆ. 29ನೇ ವಾರ್ಡ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗರತ್ನ ಅವರು 1282 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲೋಹಿತಾ ನಂಜಪ್ಪ 832 ಮತಗಳು, ಬಿಜೆಪಿ ಪಕ್ಷದ ಅಭ್ಯರ್ಥಿ ರಮಾ ವೆಂಕಟೇಶ್ ಅವರು 70 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ 450 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

‘ಕೆಣಕಿದ ಯುವಕನನ್ನು ಬೆನ್ನಟ್ಟಿದ ಹುಂಜ’ ಏನೀ ವಿಚಿತ್ರವಯ್ಯಾ? | ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ವಿಡಿಯೋ ಫುಲ್ ವೈರಲ್ !!

ಈಗಿನ ಕಾಲದಲ್ಲಿ ಮನೋರಂಜನೆಗಳಿಗೇನು ಕಮ್ಮಿಯಿಲ್ಲ. ಸಾಮಾಜಿಕ ಜಾಲತಾಣಗಳು ಯಾವಾಗಲೂ ಒಂದಿಲ್ಲೊಂದು ವಿಷಯದಲ್ಲಿ ನಮ್ಮನ್ನು ಸೆಳೆಯುತ್ತಲೇ ಇರುತ್ತದೆ. ದಿನಪೂರ್ತಿ ಇವುಗಳಲ್ಲಿ ಮುಳುಗಿದ್ದರೂ ಸಹ ಮುಗಿಯದಷ್ಟು ವಿಡಿಯೋಗಳು, ಮೇಮ್ಸ್ ಗಳು ತುಂಬಿ ತುಳುಕುತ್ತಿರುತ್ತವೆ. ಹಾಗೆಯೇ ಸಾಮಾಜಿಕ ಜಾಲಾತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತದೆ. ಕೆಲವೊಂದು ಮನರಂಜನೆ ನೀಡಿದರೆ ಇನ್ನು ಕೆಲವೊಂದು ಕೋಪ ತರಿಸುತ್ತದೆ. ಆದರೆ ಹೆಚ್ಚಿನ ವಿಡಿಯೋಗಳು ನಗು ತರಿಸುವುದು ಸುಳ್ಳಲ್ಲ. ಕೆಲವೊಂದು ದೃಶ್ಯಗಳು ಬಹಳ ಹೊತ್ತು ನಮ್ಮನ್ನ ನಗೆಗಡಲಲ್ಲಿ ತೇಲಿಸುತ್ತದೆ. ಇಂಥಹುದೆ ವಿಡಿಯೋ ಒಂದು ವೈರಲ್ ಆಗಿದ್ದು, ಇದೀಗ …

‘ಕೆಣಕಿದ ಯುವಕನನ್ನು ಬೆನ್ನಟ್ಟಿದ ಹುಂಜ’ ಏನೀ ವಿಚಿತ್ರವಯ್ಯಾ? | ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ವಿಡಿಯೋ ಫುಲ್ ವೈರಲ್ !! Read More »

ಹುಡುಗಿಯರ ಆ ಬಟ್ಟೆಗಳು ಹುಡುಗರನ್ನು ಹಾಳುಮಾಡುತ್ತವೆ!!ಸಮವಸ್ತ್ರ ಧರಿಸದೆ ಶಾಲೆಗೆ ಬಂದ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಲು ಹೇಳಿದ ಮುಖ್ಯ ಶಿಕ್ಷಕ

ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮಾನರೆಂದು ಕಾಣಲು ಸಮವಸ್ತ್ರ ಅತ್ಯಗತ್ಯ. ಅದಕ್ಕೆಂದೇ ಸರ್ಕಾರ ಈ ಸಮವಸ್ತ್ರ ತೊಡುಗೆಯ ಕಾನೂನನ್ನು ರೂಪಿಸಿದ್ದು, ಸದ್ಯ ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರಗಳಿಂದ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದಾರೆ. ಆದರೆ ಅದೇ ಸಮವಸ್ತ್ರ ಧರಿಸದೇ ಶಾಲೆಗೆ ಬಂದರೆ ಯಾವ ಕ್ರಮ ಕೈಗೊಳ್ಳುವುದೆಂಬ ಅರಿವಿಲ್ಲಿದ ಮತಿಗೆಟ್ಟ ಶಾಲಾ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚುವಂತೆ ತಾಕಿತು ಮಾಡಿದ್ದು ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕಾರಣವೂ ದಾಖಲಾಗಿದೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ರಾಜಗರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಹುಡುಗಿಯರ ಬಣ್ಣಬಣ್ಣದ …

ಹುಡುಗಿಯರ ಆ ಬಟ್ಟೆಗಳು ಹುಡುಗರನ್ನು ಹಾಳುಮಾಡುತ್ತವೆ!!ಸಮವಸ್ತ್ರ ಧರಿಸದೆ ಶಾಲೆಗೆ ಬಂದ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಲು ಹೇಳಿದ ಮುಖ್ಯ ಶಿಕ್ಷಕ Read More »

ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಪತ್ನಿ ವಿಜಯಾ ನಿಧನ

ಇತ್ತೀಚೆಗೆ ಬಿಜೆಪಿ ಸೇರಿರುವ ಕೊಳ್ಳೇಗಾಲ ಶಾಸಕ,ಮಾಜಿ ಸಚಿವ ಎನ್.ಮಹೇಶ್ ಅವರ ಪತ್ನಿ ವಿಜಯಾ (64) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಾ ಅವರಿಗೆ ಭಾನುವಾರ ರಾತ್ರಿ ಮನೆಯಲ್ಲಿ ಉಸಿರಾಟದ ಸಮಸ್ಯೆ ತೀವ್ರವಾಗಿ ಉಂಟಾಗಿತ್ತು. ಇದರಿಂದಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 11.30 ಸುಮಾರಿಗೆ ನಿಧನರಾದರು. ಮಂಡ್ಯ ಅಪೆಕ್ಸ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ವಿಜಯಾ ಅವರು ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅಂತ್ಯಸಂಸ್ಕಾರ ಬೆಂಗಳೂರಿನ ಕನಕಪುರದಲ್ಲಿರುವ ಕಾನ್ಸಿ ಫೌಂಡೇಷನ್‌ನಲ್ಲಿ …

ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಪತ್ನಿ ವಿಜಯಾ ನಿಧನ Read More »

ರಾಜ್ಯದಲ್ಲಿ ಈ ವರ್ಷ ಐದು ಸಾವಿರ ಶಿಕ್ಷಕರ ನೇಮಕ | ಶಿಕ್ಷಕರ ದಿನಾಚರಣೆಯಂದು ಮಹತ್ವದ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಶಿಕ್ಷಕರ ದಿನಾಚರಣೆಯಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಶಿಕ್ಷಕರ ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಇದೇ ವರ್ಷ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ್ ಮನವಿಗೆ ಸ್ಪಂದಿಸಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿರುವುದಾಗಿ ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ …

ರಾಜ್ಯದಲ್ಲಿ ಈ ವರ್ಷ ಐದು ಸಾವಿರ ಶಿಕ್ಷಕರ ನೇಮಕ | ಶಿಕ್ಷಕರ ದಿನಾಚರಣೆಯಂದು ಮಹತ್ವದ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ Read More »

ಅಫ್ಘಾನಿಸ್ತಾನದಲ್ಲಿ ಮಿತಿಮೀರಿದ ತಾಲಿಬಾನಿಗಳ ಅಟ್ಟಹಾಸ!! ತುಂಬು ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ, ಮಕ್ಕಳ ಮುಂದೆಯೇ ಗುಂಡಿಕ್ಕಿ ಕೊಂದು ಖುಷಿ ಕಂಡರು ಪಾಪಿಗಳು

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಮಹಿಳೆಯರನ್ನಂತೂ ಕಾಲಿನ ಕಸದಂತೆ ನೋಡುತ್ತಿದ್ದಾರೆ. ಇದು ಮುಂದುವರೆದಿದ್ದು, ಅಫ್ಘಾನ್‌ನ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಕೆಯ ಗಂಡ, ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆಂದು ವರದಿಯಾಗಿದೆ. ಅಫ್ಘಾನ್‌ನ ಘೋರ್ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಯೋಪ್‌ನಲ್ಲಿ ಈ ಘನ ಘೋರ ಕೃತ್ಯ ನಡೆದಿದೆ. ಹತ್ಯೆಗೀಡಾದ ಮಹಿಳಾ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ. ತಾಲಿಬಾನಿಗಳ ಹಲ್ಲೆಯಿಂದ ಆಕೆಯ ಮುಖ ತುಂಬಾ ವಿರೂಪಗೊಂಡಿದೆ. ಸ್ಥಳೀಯ …

ಅಫ್ಘಾನಿಸ್ತಾನದಲ್ಲಿ ಮಿತಿಮೀರಿದ ತಾಲಿಬಾನಿಗಳ ಅಟ್ಟಹಾಸ!! ತುಂಬು ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ, ಮಕ್ಕಳ ಮುಂದೆಯೇ ಗುಂಡಿಕ್ಕಿ ಕೊಂದು ಖುಷಿ ಕಂಡರು ಪಾಪಿಗಳು Read More »

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಕಾರು ಅಪಘಾತ | ಕಾರಿಗೆ ಡಿಕ್ಕಿಯಾಗಿ ಡಿವೈಡರ್‌ಗೆ ಬಡಿದ ಫೆರಾರಿ

ಬೆಂಗಳೂರಿನ ಯಲಹಂಕ ಫ್ಲೈ ಓವರ್ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಫೆರಾರಿ ಕಾರಿನಲ್ಲಿದ್ದ ಏರ್ ಬ್ಯಾಗ್‌ಗಳು ಓಪನ್ ಆಗಿದ್ದರಿಂದ ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.ಈ ಕಾರು ವಿಧಾನ ಪರಿಷತ್ ಸದಸ್ಯ ಮಂಗಳೂರಿನ ಬಿ.ಎಂ.ಫಾರೂಕ್ ಅವರಿಗೆ ಸೇರಿದ್ದು ಎನ್ನಲಾಗಿದೆ. ಅಪಘಾತವಾದ MH 02 FF 5555 ನಂಬರಿನ ಫೆರಾರಿ ಕಾರು ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಖ್ ಒಡೆತನಕ್ಕೆ ಸೇರಿದ್ದಾಗಿದೆ. ಯಲಹಂಕ ಫೈ ಓವರ್ ಮೇಲೆ ರಾತ್ರಿ 9 …

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಕಾರು ಅಪಘಾತ | ಕಾರಿಗೆ ಡಿಕ್ಕಿಯಾಗಿ ಡಿವೈಡರ್‌ಗೆ ಬಡಿದ ಫೆರಾರಿ Read More »

error: Content is protected !!
Scroll to Top