ಬಂದೂಕಿನ ತುದಿಯಿಂದಲೇ ಉತ್ತರಿಸುತ್ತಿರುವ ತಾಲಿಬಾನ್ ನಿಂದ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ಪಂಜಶೀರ್ ಪ್ರಾಂತ್ಯ ವಶ ಎಂದು ಘೋಷಣೆ | ವಿಜಯೋತ್ಸವದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳಿಂದ 17 ಮಂದಿ ಸಾವು, 40 ಮಂದಿ ಸ್ಥಿತಿ ಗಂಭೀರ

ಅಫ್ಘನ್ ಪ್ರಜೆಗಳ ಜೀವನ ದಿನದಿಂದ ದಿನಕ್ಕೆ ನುಂಗಲಾರದ ತುತ್ತಾಂತ್ತಾಗಿದೆ. ಖುಷಿಯಾಗಲಿ ಅಥವಾ ದುಃಖವಾಗಲಿ ತಾಲಿಬಾನಿಗಳು ಅದನ್ನು ಬಂದೂಕಿನ ಮೂಲಕವೇ ವ್ಯಕ್ತಪಡಿಸುವುದನ್ನು ನೋಡಿದ್ರೆ ಅಫ್ಘಾನ್ ಜನರ ಮುಂದಿನ ಭವಿಷ್ಯ ಚಿಂತಾಜನಕವಾಗಿರುವಂತೆ ಗೋಚರಿಸುತ್ತಿದೆ.

ಹೌದು, ತಾಲಿಬಾನಿಗಳ ವಿಜಯೋತ್ಸವಕ್ಕೆ 17 ಮಂದಿ ಬಲಿಯಾಗಿದ್ದು, 41 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಬುಲ್‌ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಕಾಬುಲ್ ಸುತ್ತ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಿನ್ನೆ ಭಾರೀ ಪ್ರಮಾಣದಲ್ಲಿ ಗನ್ ಸೌಂಡ್ ಕಾಬುಲ್ ಸುತ್ತಲೂ ಕೇಳಿಬಂದಿತು. ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧದ ಪಡೆ (NRFA) ಯನ್ನು ಸೋಲಿಸುವ ಮೂಲಕ ಪಂಜ್‌ಶೀರ್ ಪ್ರಾಂತ್ಯವನ್ನು ತೆಕ್ಕೆಗೆ ಹಾಕಿಕೊಂಡಿದ್ದೇವೆ. ಈ ಮೂಲಕ ಇಡೀ ಅಫ್ಘಾನಿಸ್ತಾನ ಇದೀಗ ನಮ್ಮ ಕೈವಶವಾಗಿದೆ ಎಂದು ತಾಲಿಬಾನ್ ಘೋಷಣೆ ಮಾಡಿಕೊಂಡಿರು. ಇದರ ಬೆನ್ನಲ್ಲೇ ಕಾಬುಲ್ ಸುತ್ತಲೂ ವಿಜಯೋತ್ಸವ ಆಚರಿಸಿದ ತಾಲಿಬಾನ್ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿತು.

ಆದರೆ, ವಿಜಯೋತ್ಸವದಲ್ಲಿ ಮಕ್ಕಳು ಸೇರಿದಂತೆ 17 ಮಂದಿ ಮೃತಪಟ್ಟರೆ 40 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪಂಜಶೀರ್ ವಶಕ್ಕೆ ಪಡೆದುಕೊಂಡಿರುವುದಾಗಿ ತಾಲಿಬಾನ್ ಹೇಳಿದ್ರೆ, ಪ್ರತಿರೋಧ ಪಡೆಯ ನಾಯಕ ಅಹ್ಮದ್ ಮಸೌದ್ ಅದ ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದಾರೆ. ಪಂಜ್‌ಶೀರ್ ವಶ ಪಡೆಯಲಾಗಿದೆ ಎಂಬ ಸುದ್ದಿ ಪಾಕಿಸ್ತಾನ ಮಾಧ್ಯಮಗಳಲ್ಲೂ ಸಹ ಹರಿದಾಡಿದೆ. ಇದು ಸುಳ್ಳು. ಪಂಜಶೀರ್ ಅನ್ನು ವಶಪಡಿಸಿಕೊಂಡರೇ ಅಂದೇ ನನ್ನ ಕೊನೆಯ ದಿನವಾಗಿರುತ್ತದೆ ಎಂದು ಮಸೌದ್ ಹೇಳಿದ್ದಾರೆ.

ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಪುತ್ರ ಎಬಾದುಲ್ಲಾ ಸಲೇಹ್ ಕೂಡ ತಾಲಿಬಾನ್ ವಾದವನ್ನು ತಳ್ಳಿಹಾಕಿದ್ದು, ಪಂಜ್‌ಶೀರ್ ನಮ್ಮ ಹಿಡಿತದಲ್ಲೇ ಇದೆ ಎಂದಿದ್ದಾರೆ. ಪಂಜ್‌ಶೀರ್‌ನ ಪ್ರತಿರೋಧ ಪಡೆಗಳ ನಾಯಕರಲ್ಲಿ ಒಬ್ಬರು. ತಾಲಿಬಾನಿಗಳು ಹೇಳಿದಂತೆ ನಾನು ಪಂಜ್‌ಶೀರ್ ಬಿಟ್ಟು ಓಡಿ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಧಾನದ ಮಾತುಕತೆ ವಿಫಲವಾದ ಬಳಿಕ ಪಂಜ್‌ಶೀರ್ ಮೇಲೆ ತಾಲಿಬಾನ್ ನಿರಂತರವಾಗಿ ದಾಳಿ ಮಾಡುತ್ತಿದ್ದು, ಮುಂದೆ ಏನಾಗಲಿದೆಯೋ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.