ಶಿಕ್ಷಕರ ದಿನಾಚರಣೆಯಂದು ಜಾರಿಯಾಗಲಿದೆ ಸರ್ಕಾರದ ಹೊಸ ಯೋಜನೆ | ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿ ದೀಪವಾಗಲಿದೆ ‘ವಿದ್ಯಾನಿಧಿ’

ಬೆಂಗಳೂರು : ರೈತರ ಮಕ್ಕಳ ಉನ್ನತ ಶಿಕ್ಷಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಉಪಯುಕ್ತವಾದ ಯೋಜನೆಯನ್ನು ನಿರ್ಮಿಸಿದ್ದು, ರೈತ ವಿದ್ಯಾನಿಧಿ ಎಂಬ ಯೋಜನೆಗೆ ಚಾಲನೆ ಸಿಗಲಿದೆ.

ಈ ಯೋಜನೆಯು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಜಾರಿ ಆಗಲಿದೆ.ರಾಜ್ಯದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಈ ಯೋಜನೆ ನಿರ್ಮಿಸಿದ್ದು,ಎಸ್‌ಎಸ್‌ಎಲ್ ಸಿ ಪೂರ್ಣಗೊಳಿಸಿದ ರೈತರ ಮಕ್ಕಳಿಗೆ ವಾರ್ಷಿಕ ಶಿಷ್ಯವೇತನ ಲಭ್ಯವಾಗಲಿದೆ.

ಪಿಯುಸಿ, ಐಟಿಐ, ಡಿಪ್ಲೋಮಾ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 2,500 ರೂ. ಹಾಗೂ ವಿದ್ಯಾರ್ಥಿನಿಯರಿಗೆ 3000 ರೂ.ಮತ್ತು ಬಿ.ಎ, ಬಿಸ್ಸಿ, ಬಿಕಾಂ ಓದುವ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ವಿದ್ಯಾರ್ಥಿನಿಯರಿಗೆ 5,500 ರೂ ಯಂತೆ ನೀಡುತ್ತದೆ.

ಅಲ್ಲದೆ ಎಲ್‌ಎಲ್ ಬಿ,ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ಓದು ವಿದ್ಯಾರ್ಥಿಗಳಿಗೆ 7,500 ರೂ. ವಿದ್ಯಾರ್ಥಿನಿಯರಿಗೆ 8000 ರೂ. ಮತ್ತು ಎಂಬಿಬಿಎಸ್, ಬಿಇ, ಬಿಟಿಕ್ ಓದುವವಿದ್ಯಾರ್ಥಿಗಳಿಗೆ 10 ಸಾವಿರ ರೂ. ವಿದ್ಯಾರ್ಥಿನಿಯರಿಗೆ 10,500 ರೂ. ಅಂತೆ ಮಕ್ಕಳಿಗೆ ಶಿಷ್ಯ ವೇತನ ನೀಡಲಾಗುತ್ತದೆ.

Leave A Reply

Your email address will not be published.