ಅನಗತ್ಯ ವೀಕೆಂಡ್ ಕರ್ಫ್ಯೂ ಬಗ್ಗೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ದ್ವಂದ್ವ ನೀತಿ ಬಡ ಜನರಿಗೆ ಸಂಕಷ್ಟ, ಜನ ಸಾಮಾನ್ಯರಿಗೆ ಶಿಕ್ಷೆ, ದಂಡ- ಕಡಬ ಬ್ಲಾಕ್ ಕಾಂಗ್ರೆಸ್ ಖಂಡನೆ

ಕಡಬ : ವೀಕೆಂಡ್ ಕರ್ಫ್ಯೂ ನಿಂದ ಜಿಲ್ಲೆಯ ಜನ ತತ್ತರಿಸಿದ್ದು, ಅನಗತ್ಯವಾಗಿ ಇತರ ವ್ಯಾಪಾರಿಗಳು, ಭಿಕ್ಷಾ ಹಾಗೂ ಇನ್ನಿತರ ವಾಹನಗಳಲ್ಲಿ ಶನಿವಾರ ಹಾಗೂ ಆದಿತ್ಯವಾರ ಕರ್ಫ್ಯೂ ವಿಧಿಸಿ ವಿವಿಧ ರೀತಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿ ಬೀದಿ ಬದಿ ಗೂಡಂಗಡಿ ವ್ಯಾಪಾರಿಗಳು ಹಾಗೂ ಬಡ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರದ ಕುಟಿಲ ನೀತಿಯನ್ನು ಕಡಬ ಬ್ಲಾಕ್ ಕಾಂಗ್ರೇಸ್ ಖಂಡಿಸಿದೆ.

ಕಡಬ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು ವ್ಯಾಪಾರಸ್ಥರು ಮಾಡಿದಂತಹ ಮನೆ ಸಾಲ,ಅಂಗಡಿ ಸಾಲ, ಮತ್ತು ಬಾಡಿಗೆ, ಇಎಮ್‌ಐ ಕಟ್ಟಲಾಗದಂತಹ ಪರಿಸ್ಥಿತಿಯಲ್ಲಿ ಮನೆಯವರು ಪರದಾಡುವಂತಾಗಿದೆ.

ದೇಶದ ಹಿತಕ್ಕಾಗಿ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ನಾವು ಕೂಡ ಸಹಕರಿಸಿದ್ದೇವೆ. ಈ ನೋಡಲಿಕ್ಕೆ ಸಾಧ್ಯವಿಲ್ಲದೆ ರೀತಿ ಅವೈಜ್ಞಾನಿಕ, ತಲೆ ಬುಡವಿಲ್ಲದ ಬಂದ್‌ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿಗಳ ವಿಸ್ತರಣೆ ಆದೇಶಕ್ಕೆ ತಡೆಹಾಕಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೂ ಕೂಲಂಕುಶವಾಗಿ ಪರೀಕ್ಷೆಗೆ ಒಳಪಡಿಸದೆ ಕೋವಿಡ್‌ನಿಂದ ಮೃತಪಟ್ಟದ್ದು ಎಂದು ಹೇಳುವಂತದ ಸರಿಯಾದ ಕ್ರಮವಲ್ಲ.

ಈ ಬಗ್ಗೆ ಸರಕಾರ ಗಮನ ಹರಿಸಬೇಕು ಕೋಪಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ಕನಿಷ್ಠ 3 ಲಕ್ಷ ರೂಪಾಯಿ ಧನ ಪರಿಹಾರ ತಕ್ಷಣ ನೀಡಬೇಕು. ಇದರಲ್ಲಿ ಎಪಿಎಲ್ ,ಬಿಪಿಎಲ್ ತಾರತಮ್ಯ ಮಾಡಬಾರದೆಂದು ಆಗ್ರಹಿಸಿದರು.

ಅಚ್ಚೇದಿನ ಹೆಸರಲ್ಲಿ ಅಧಿಕಾರಕ್ಕೆ ಬಂದಂತಹ ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರಕಾರ ದೇಶದ ಜನರನ್ನು ಮರುಳುಗೊಳಿಸಿ, ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಜನರನ್ನು ಉದ್ರೇಕಿಸಿ ಲಾಭ ಪಡೆಯುವ ಹುನ್ನಾರ ಇನ್ನು ಮುಂದೆ ನಡೆಯುದಿಲ್ಲ. ಇನ್ನೂ ಕೂಡ ಜನರನ್ನು ನಂಬಿಸಿ ಮೋಸ ಮಾಡುವ ಭಾವನೆಯಿದ್ದರೆ ಅದು ಮೂರ್ಖತನದ ಪರಮಾವಧಿಯೆಂದು ಭಾವಿಸಬೇಕಾಗುತ್ತದೆ.

ಜಿಲ್ಲೆಯ ಜನತೆಯ ಹಿತ ದೃಷ್ಟಿಯಿಂದ ಕೂಲಿ ಕಾರ್ಮಿಕರು. ವ್ಯಾಪಾರಿಗಳು ಹಾಗೂ ಇತರ ವ್ಯಾಪಾರಿಗಳು ಶಿಕ್ಷಾ ಮತ್ತು ಇನ್ನಿತರ ವಾಹನ ಚಾಲಕರಿಗೆ ಜೀವನಕ್ಕೆ ರಕ್ಷಣೆ ನೀಡಿ ವಿವಿಧ ಕಸುಬು ನಿರ್ವಹಿಸಲು ಅನುಕೂಲವಾಗುವಂತೆ ಬೆಂಬಲ ನೀಡಬೇಕೆಂದು ಹಾಗೂ ಅವೈಜ್ಞಾನಿಕ ವೀಕೆಂಡ್ ಕರ್ಪೂ ಯನ್ನು ರದ್ದು ಗೊಳಿಸುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಾಂತರ ಸರಕಾರವನ್ನು ಹಾಗೂ ರಾಜ್ಯಪಾಲರನ್ನು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ ಪಿ ವರ್ಗೀಸ್, ಮಾಥ್ಯೂ ಟಿ ಜೆ, ಆಶ್ರಫ್ ಶೇಡಿಗುಂಡಿ,ಶರೀಫ್, ಹನೀಪ್ ಕೆ.ಎಮ್,ಬಾಲಕೃಷ್ಣ ಬಳ್ಳೇರಿ ಉಪಸ್ಥಿತರಿದ್ದರು.

Leave A Reply

Your email address will not be published.