ಕೋವಿಡ್-19 ಸೋಂಕು ಮುಕ್ತಿಗೆ ದೊರಕಿದೆ ‘ಸರ್ಪ ಸಂಜೀವಿನಿ’ | ಈ ಹಾವಿನ ವಿಷ ಕೊರೋನಾಗೆ ಮದ್ದಂತೆ !?

ಕೋವಿಡ್ ಸೋಂಕು ಲಸಿಕೆ ಪಡೆದವರಿಗೂ ಹರಡುತಿದ್ದು,ಜಗತ್ತೆಲ್ಲೆಡೆ ಇದರ ಹಾವಳಿಯೇ ಅಧಿಕವಾಗಿ ಜನ ಮಂಕಾಗುವ ಹಾಗೆ ಮಾಡಿಬಿಟ್ಟಿದೆ.ಈ ಹಿನ್ನೆಲೆ ಕೋವಿಡ್ – 19 ವೈರಸ್‌ಗೆ ಬೇರೆ ಪರಿಹಾರಗಳನ್ನು ಸಂಶೋಧಕರು ಪತ್ತೆ ಹಚ್ಚುತ್ತಲೇ ಇದ್ದು,ಇದೀಗ ಬ್ರೆಜಿಲಿಯನ್ ಸಂಶೋಧಕರು ಬ್ರೆಜಿಲಿಯನ್ ವೈಪರ್ ಹೆಸರಿನ ಹಾವಿನ ವಿಷದಲ್ಲಿ ವಿಶೇಷ ಅಣುವೊಂದನ್ನ ಪತ್ತೆಹಚ್ಚಿದ್ದಾರೆ.

ವೈಪರ್ ಹಾವಿನ ವಿಷ ಕೋವಿಡ್ -19ಗೆ ಕಾರಣವಾಗುವ ವೈರಸ್ ವಿರುದ್ಧ ಹೋರಾಡಲು ಔಷಧವಾಗಿದ್ದು, ಇದು ಮೊದಲ ಹೆಜ್ಜೆಯಾಗಿದೆ.ಹಾವಿನ ವಿಷದಲ್ಲಿರುವ ಅಣುವು ಕೋತಿಯ ಜೀವಕೋಶಗಳಲ್ಲಿ ಕೊರೊನಾ ವೈರಸ್ ಸಂತಾನೋತ್ಪತ್ತಿಯನ್ನ ತಡೆಯುತ್ತದೆ ಎನ್ನಲಾಗಿದೆ.

6 ಅಡಿ (2 ಮೀಟರ್) ಉದ್ದವಿರುವ ಜರರಾಕುಸು ಬ್ರೆಜಿಲ್‌ನ ಅತಿ ದೊಡ್ಡ ಹಾವುಗಳಲ್ಲಿ ಒಂದಾಗಿದೆ. ಇದು ಕರಾವಳಿಯ ಅಟ್ಲಾಂಟಿಕ್ ಅರಣ್ಯದಲ್ಲಿ ವಾಸಿಸುತ್ತದೆ ಮತ್ತು ಬೊಲಿವಿಯಾ, ಪರಾಗ್ವೆ ಮತ್ತು ಅರ್ಜೆಂಟೀನಾದಲ್ಲಿಯೂ ಕಂಡುಬರುತ್ತದೆ.

ಹಾವಿನ ವಿಷದ ಈ ಅಂಶವು ವೈರಸ್‌ನಿಂದ ಬಹಳ ಮುಖ್ಯವಾದ ಪ್ರೋಟೀನ್ ತಡೆಯಲು ಸಾಧ್ಯ ಎಂಬುದನ್ನು ನಾವು ತೋರಿಸಲು ಸಾಧ್ಯವಾಯಿತು ಎಂದು ಬ್ರೆಜಿಲ್‌ನ ಸಾವೋ ಪಾಲೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಅಧ್ಯಯನದ ಲೇಖಕ ರಾಫೆಲ್ ಗೈಡೋ ಹೇಳಿದ್ದಾರೆ.

ಈ ತಿಂಗಳು ವೈಜ್ಞಾನಿಕ ನಿಯತಕಾಲಿಕ ಮಾಲಿಕ್ಯೂಲ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಜರರಾಕುಸು ಪಿಟ್ ವೈಪರ್‌ನಿಂದ ಉತ್ಪತ್ತಿಯಾಗುವ ಅಣುವು ವೈರಸ್‌ನ ಸಾಮರ್ಥ್ಯವನ್ನು ಕೋತಿಯ ಸೆಲ್‌ಗಳಲ್ಲಿ 75%ನಷ್ಟು ಮಲ್ಟಿಪ್ಲೈ ಆಗುವುದನ್ನು ತಡೆಯುತ್ತದೆ ಎಂದು ಕಂಡುಕೊಂಡಿದೆ.

ಅಣುವು ಪೆಪ್ಟೈಡ್ ಅಥವಾ ಅಮೈನೋ ಆಮ್ಲಗಳ ಸರಪಳಿಯಾಗಿದ್ದು, ಇದು ಪಿಎಲ್‌ಪ್ರೋ ಎಂಬ ಕೊರೊನಾ ವೈರಸ್‌ನ ಕಿಣ್ವಕ್ಕೆ ಸಂಪರ್ಕ ಕಲ್ಪಿಸಬಹುದು. ಇದು ಇತರ ಜೀವಕೋಶಗಳಿಗೆ ಹಾನಿಯಾಗದಂತೆ ವೈರಸ್‌ನ ಸಂತಾನೋತ್ಪತ್ತಿಗೆ ಮುಖ್ಯವಾಗಿದೆ.

ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಈಗಾಗಲೇ ಹೆಸರುವಾಸಿಯಾಗಿರುವ ಪೆಪ್ಟೈಡ್ ಅನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಬಹುದು ಎಂದು ಗೈಡೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ಹಾವುಗಳನ್ನು ಹಿಡಿಯುವುದು ಅಥವಾ ಸಾಕುವುದು ಅನಗತ್ಯವಾಗುತ್ತದೆ.

ಇನ್ನು, “ನಾವು ಬ್ರೆಜಿಲ್‌ನ ಸುತ್ತಲೂ ಜರರಾಚುಕು ಎಂಬ ಹಾವನ್ನು ಬೇಟೆಯಾಡಲು ಹೊರಟಿರುವ ಜನರ ಬಗ್ಗೆಯೂ ಆತಂಕದಿದ್ದೇವೆ. ಈ ಹಾವುಗಳು ಜಗತ್ತನ್ನು ಉಳಿಸಲು ಹೊರಟಿದೆ ಎಂದು ಜನರು ಯೋಚಿಸಬಹುದು ಆದರೆ, ಆ ರೀತಿ ಅಲ್ಲ!” ಎಂದು ಸಾವೋ ಪಾಲೋದಲ್ಲಿ ಬುಟಾಂಟನ್ ಸಂಸ್ಥೆಯ ಜೈವಿಕ ಸಂಗ್ರಹ ನಡೆಸುತ್ತಿರುವ ಹರ್ಪಿಟಾಲಜಿಸ್ಟ್ ಗೈಸೆಪೆ ಪೋರ್ಟೊ ಹೇಳಿದರು. ಅಲ್ಲದೆ, ಸ್ವತ: ಹಾವಿನ ವಿಷವೇ ಕೊರೊನಾವೈರಸ್‌ ಅನ್ನು ಗುಣಪಡಿಸುವುದಿಲ್ಲ” ಎಂದೂ ಮಾಹಿತಿ ನೀಡಿದರು.

ಸಂಶೋಧಕರು ಮುಂದೆ ಅಣುವಿನ ವಿವಿಧ ಡೋಸ್‌ಗಳ ದಕ್ಷತೆಯನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ವೈರಸ್ ಅನ್ನು ಜೀವಕೋಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಇದು ಶಕ್ತವಾಗಿದೆಯೇ ಎಂಬುದನ್ನು ಸಂಶೋಧನೆಯ ಭಾಗವಾಗಿದ್ದ ಸಾವೋ ಪಾಲೋ ರಾಜ್ಯ ವಿಶ್ವವಿದ್ಯಾಲಯದ (ಯುನೆಸ್ಪ್) ಪರೀಕ್ಷೆ ಮಾಡುವುದಾಗಿಯೂ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಾನವ ಜೀವಕೋಶಗಳಲ್ಲಿ ಈ ವಸ್ತುವನ್ನು ಪರೀಕ್ಷಿಸಲು ಸಹ ಸಂಶೋಧಕರು ಆಶಿಸುತ್ತಾರೆ. ಆದರೆ, ಅವರು ಅದಕ್ಕೆ ಯಾವುದೇ ಟೈಮ್‌ಲೈನ್‌ ನೀಡಲಿಲ್ಲ.

ಇನ್ನು ಸಂಶೋಧಕರು ಈ ಮಾಲೆಕ್ಯೂಲ್​ನ ವಿಭಿನ್ನ ಡೋಸ್​ಗಳು ಹೇಗೆ ಪರಿಣಾಮ ಬೀರುತ್ತವೆ ಮತ್ತು ಇದು ವೈರಸ್​ನ್ನು ಜೀವಕೋಶದೊಳಗೆ ಪ್ರವೇಶಿಸದಂತೆ ತಡೆಯುತ್ತದೆಯೇ ಎಂದು ಹೆಚ್ಚಿನ ಅಧ್ಯಯನ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.