Day: September 2, 2021

ಮಂಜಿನ ಶೃಂಗಾರ ಸೌಂದರ್ಯದ ಪ್ರವಾಸಿಗರ ಸ್ವರ್ಗ ಮುಳ್ಳಯ್ಯನಗಿರಿ

ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜೊತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೆಸರೇ ಹೇಳುವಂತೆ ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ ಅತೀ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದಿದೆ . ಇದು ಸಮುದ್ರ ಮಟ್ಟದಿಂದ ಸುಮಾರು 6330 ಅಡಿಗಳಷ್ಟು ಎತ್ತರದಲ್ಲಿದೆ ಆದುದರಿಂದ ಚಾರಣಿಗರಿಗೆ ಹೇಳಿಮಾಡಿಸಿದ ಸ್ಥಳವಾಗಿದೆ . ಬೆಟ್ಟದ ಬುಡದಲ್ಲಿ ನಿಂತು ಮೇಲೆ ನೋಡಿದರೆ ಮೋಡಗಳು ಗಿರಿಶಿಖರವನ್ನು ಆವರಿಸಿಕೊಂಡಂತೆ ಅನುಭವವಾಗುತ್ತದೆ. …

ಮಂಜಿನ ಶೃಂಗಾರ ಸೌಂದರ್ಯದ ಪ್ರವಾಸಿಗರ ಸ್ವರ್ಗ ಮುಳ್ಳಯ್ಯನಗಿರಿ Read More »

ಬೆಳ್ತಂಗಡಿ | ಲಾಯಿಲ ನಿವಾಸಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಮಾನಸಿಕ ಅಸ್ವಸ್ಥರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿದೆ. 33 ವರ್ಷದ ವಸಂತ ಎಂಬುವವರು ಮೃತ ಪಟ್ಟವರು ಎಂದು ತಿಳಿದುಬಂದಿದೆ. ಸುಮಾರು 6 ತಿಂಗಳಿನಿಂದ ಮಾನಸಿಕವಾಗಿ ವರ್ತಿಸುತ್ತಿದ್ದ ವಸಂತರವರು, ಆಗಸ್ಟ್ 30 ರಂದು ಹೆಂಡತಿ ಪೂರ್ಣಿಮಾ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮಧ್ಯಾಹ್ನ 3.00 ಗಂಟೆಗೆ ತಾನು ವಿಷ ಪದಾರ್ಥ ಸೇವಿಸಿರುವುದಾಗಿ ಕರೆ ಮೂಲಕ ಹೆಂಡತಿಗೆ ತಿಳಿಸಿದ್ದಾರೆ. ಕೂಡಲೇ ಮನೆಗೆ ಧಾವಿಸಿದ ಪೂರ್ಣಿಮಾರವರು ಗಂಡನನ್ನು ಬೆಳ್ತಂಗಡಿ …

ಬೆಳ್ತಂಗಡಿ | ಲಾಯಿಲ ನಿವಾಸಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆಗೆ ಶರಣು Read More »

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21ನೇ ಸಾಲಿನ ಚಿಗುರು ವಾರ್ಷಿಕ ಸಂಚಿಕೆ ಅನಾವರಣ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21 ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡುವ ವೇದಿಕೆಯಾದ ಚಿಗುರು ವಾರ್ಷಿಕ ಸಂಚಿಕೆ ಬಿಡುಗಡೆಯ ಸಮಾರಂಭವು ನಡೆಯಿತು. ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞಿ ಚಿಗುರು ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಿ, ಸಂಚಿಕೆಯು ಸುಂದರವಾಗಿ ಮೂಡಿಬರಲು ಕಾರಣಕರ್ತರಾದ ಚಿಗುರು ಸಮಿತಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಹಾಜರಿದ್ದರು. ಚಿಗುರು …

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21ನೇ ಸಾಲಿನ ಚಿಗುರು ವಾರ್ಷಿಕ ಸಂಚಿಕೆ ಅನಾವರಣ Read More »

NISER ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಚಂದನ ಶಂಕರ್‌ಗೆ 86.914% ಅಂಕ

ಪುತ್ತೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಮತ್ತುರಿಸರ್ಚ್ ಸೆಂಟರ್ (NISER)ಮೂಲ ವಿಜ್ಞಾನ ವಿಷಯಕ್ಕಾಗಿ ಅಗಸ್ಟ್ 14 ರಂದು ನಡೆಸಿದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಂದನ ಶಂಕರ್ 86.914% ಅಂಕ ಗಳಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದ್ದಾರೆ. ಈಕೆ ನೆಹರೂನಗರದ ಶಂಕರ್ ಎಸ್ ಮತ್ತು ಗೀತಾ ಎ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ …

NISER ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಚಂದನ ಶಂಕರ್‌ಗೆ 86.914% ಅಂಕ Read More »

ಪಬ್ಲಿಕ್ ನಲ್ಲಿ ಬಟ್ಟೆ ಜಾರಿ ಮುಜುಗರಕ್ಕೊಳಗಾದ ನಟಿ | ತನ್ನ ಕೈ ಹಾಗೂ ಕೂದಲಿನ ಸಹಾಯದಿಂದ ಮೈ ಮುಚ್ಚಿಕೊಂಡ ಮೌನಿ ರಾಯ್ !!

ಈಗಿನ ಹೀರೋಯಿನ್ ಗಳಂತೂ ತಾನು ಬೇರೆ ಯಾವುದೇ ಹೀರೋಯಿನ್ ಗಳಿಗೆ ಕಮ್ಮಿ ಇಲ್ಲ ಎಂಬಂತೆ ಉಡುಗೆ-ತೊಡುಗೆಗಳನ್ನು ತೊಟ್ಟು ಸಮಾರಂಭಗಳಿಗೆ ಬಂದು ಪೋಸ್ ನೀಡುತ್ತಾರೆ. ನಟ-ನಟಿಯರು ಹಾಕಿದಂತಹ ಫ್ಯಾನ್ಸಿ ಉಡುಪುಗಳ ಫೋಟೋವನ್ನು ತೆಗೆಯಲು ಛಾಯಾಗ್ರಾಹಕರ ದಂಡು ಯಾವಾಗಲೂ ನೆರೆದಿರುತ್ತದೆ. ನಟ ನಟಿಯರು ಇಂತಹ ಜಾಗಕ್ಕೆ ಬರುತ್ತಿದ್ದಾರೆ ಅಂತ ಗೊತ್ತಾದರೆ ಸಾಕು ಅವರಿಗಿಂತಲೂ ಮುಂಚಿತವಾಗಿ ಬಂದು ಈ ಛಾಯಾಗ್ರಾಹಕರು ನಿಂತಿರುತ್ತಾರೆ. ಎಲ್ಲಾ ಛಾಯಾಗ್ರಾಹಕರು ಸಿನಿ ನಟ ನಟಿಯರ ವಿಭಿನ್ನ ಬಗೆಯ ಫೋಟೋ ಸೆರೆಹಿಡಿಯಲು ಕಾಯುತ್ತಿರುತ್ತಾರೆ. ಬಾಲಿವುಡ್‌ನ ಕಿರುತೆರೆ ಹಾಗೂ ಹಿರಿತೆರೆಯಲ್ಲಿ …

ಪಬ್ಲಿಕ್ ನಲ್ಲಿ ಬಟ್ಟೆ ಜಾರಿ ಮುಜುಗರಕ್ಕೊಳಗಾದ ನಟಿ | ತನ್ನ ಕೈ ಹಾಗೂ ಕೂದಲಿನ ಸಹಾಯದಿಂದ ಮೈ ಮುಚ್ಚಿಕೊಂಡ ಮೌನಿ ರಾಯ್ !! Read More »

ಕುಡಿಪಾಡಿಯಲ್ಲಿ ‘ಆರೋಗ್ಯ ಮಿತ್ರ’ ಕೊರೊನ ಬಗ್ಗೆ ಜಾಗೃತಿ ಕಾರ್ಯಾಗಾರ

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ), ವಿವೇಕಾನಂದ ಆಯುರ್ವೇದ ಆಸ್ಪತ್ರೆ, ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ೯೦.೮ಎಫ್.ಎಮ್. ವಿವೇಕಾನಂದ ಮಹಾವಿದ್ಯಾಲಯ, ಗ್ರಾಮ ವಿಕಾಸ ಸಮಿತಿ, ಐಕ್ಯುಎಸಿ ಘಟಕ, ರಾಷ್ಟ್ರೀಯ ಸೇವಾಯೋಜನೆ, ರೋವರ್ಸ್& ರೇಂಜರ್ಸ್, ರೆಡ್‌ಕ್ರಾಸ್ ಮತ್ತು ದ.ಕ.ಜಿ.ಪಂ.ಉ.ಹಿ. ಪ್ರಾಥಮಿಕ ಶಾಲೆ ಕುಡಿಪಾಡಿಯ ಶಾಲಾಭಿವೃದ್ಧಿ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ‘ಆರೋಗ್ಯ ಮಿತ್ರ’ ಕೊರೊನ ಬಗ್ಗೆ ಜಾಗೃತಿ ಕಾರ್ಯಾಗಾರವು ದ.ಕ.ಜಿ.ಪಂ.ಉ.ಹಿ. ಪ್ರಾಥಮಿಕ ಶಾಲೆ ಕುಡಿಪಾಡಿಯಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಡಿಪಾಡಿ ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಸುಕುಮಾರ್ …

ಕುಡಿಪಾಡಿಯಲ್ಲಿ ‘ಆರೋಗ್ಯ ಮಿತ್ರ’ ಕೊರೊನ ಬಗ್ಗೆ ಜಾಗೃತಿ ಕಾರ್ಯಾಗಾರ Read More »

ಕೋವಿಡ್-19 ಸೋಂಕು ಮುಕ್ತಿಗೆ ದೊರಕಿದೆ ‘ಸರ್ಪ ಸಂಜೀವಿನಿ’ | ಈ ಹಾವಿನ ವಿಷ ಕೊರೋನಾಗೆ ಮದ್ದಂತೆ !?

ಕೋವಿಡ್ ಸೋಂಕು ಲಸಿಕೆ ಪಡೆದವರಿಗೂ ಹರಡುತಿದ್ದು,ಜಗತ್ತೆಲ್ಲೆಡೆ ಇದರ ಹಾವಳಿಯೇ ಅಧಿಕವಾಗಿ ಜನ ಮಂಕಾಗುವ ಹಾಗೆ ಮಾಡಿಬಿಟ್ಟಿದೆ.ಈ ಹಿನ್ನೆಲೆ ಕೋವಿಡ್ – 19 ವೈರಸ್‌ಗೆ ಬೇರೆ ಪರಿಹಾರಗಳನ್ನು ಸಂಶೋಧಕರು ಪತ್ತೆ ಹಚ್ಚುತ್ತಲೇ ಇದ್ದು,ಇದೀಗ ಬ್ರೆಜಿಲಿಯನ್ ಸಂಶೋಧಕರು ಬ್ರೆಜಿಲಿಯನ್ ವೈಪರ್ ಹೆಸರಿನ ಹಾವಿನ ವಿಷದಲ್ಲಿ ವಿಶೇಷ ಅಣುವೊಂದನ್ನ ಪತ್ತೆಹಚ್ಚಿದ್ದಾರೆ. ವೈಪರ್ ಹಾವಿನ ವಿಷ ಕೋವಿಡ್ -19ಗೆ ಕಾರಣವಾಗುವ ವೈರಸ್ ವಿರುದ್ಧ ಹೋರಾಡಲು ಔಷಧವಾಗಿದ್ದು, ಇದು ಮೊದಲ ಹೆಜ್ಜೆಯಾಗಿದೆ.ಹಾವಿನ ವಿಷದಲ್ಲಿರುವ ಅಣುವು ಕೋತಿಯ ಜೀವಕೋಶಗಳಲ್ಲಿ ಕೊರೊನಾ ವೈರಸ್ ಸಂತಾನೋತ್ಪತ್ತಿಯನ್ನ ತಡೆಯುತ್ತದೆ ಎನ್ನಲಾಗಿದೆ. …

ಕೋವಿಡ್-19 ಸೋಂಕು ಮುಕ್ತಿಗೆ ದೊರಕಿದೆ ‘ಸರ್ಪ ಸಂಜೀವಿನಿ’ | ಈ ಹಾವಿನ ವಿಷ ಕೊರೋನಾಗೆ ಮದ್ದಂತೆ !? Read More »

ಹಿಂದೆಂದೂ ಕಂಡರಿಯದ ಭೀಕರ ಪ್ರವಾಹಕ್ಕೆ ಒಳಗಾದ ವಿಶ್ವದ ದೊಡ್ಡಣ್ಣ | ‘ಐಡಾ’ ಚಂಡಮಾರುತಕ್ಕೆ ಅಮೆರಿಕ ಗಡಗಡ

ಎಂದೂ ಕಾಣದ ತುರ್ತುಪರಿಸ್ಥಿತಿಗೆ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕ ಒಳಗಾಗಿದೆ. ಅಮೆರಿಕದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅನೇಕ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ‘ಐಡಾ’ ಚಂಡಮಾರುತ ಇಲ್ಲಿಗೂ ಅಪ್ಪಳಿಸಿದ್ದು, ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಸಾವು-ನೋವಿನ ಪ್ರಮಾಣ ಏರುತ್ತಲೇ ಇದೆ. ಮೊದಲು ಕ್ಯೂಬಾ ದೇಶವನ್ನು ಆವರಿಸಿದ್ದ ಐಡಾ ಚಂಡಮಾರುತ, ನಂತರ ಅಮೆರಿಕಾದ ಲೂಸಿಯಾನ ರಾಜ್ಯಕ್ಕೂ ಅಪ್ಪಳಿಸಿದೆ. ಲೂಸಿಯಾನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನತೆ ಕತ್ತಲಲ್ಲಿ ವಾಸಿಸುತ್ತಿದ್ದಾರೆ. ಸಾವಿರಾರು ಮನೆಗಳ ಮೇಲ್ಛಾವಣಿ ಈಗಾಗಲೇ ಹಾರಿಹೋಗಿವೆ. ವಿದ್ಯುತ್ ಕಂಬಗಳು, …

ಹಿಂದೆಂದೂ ಕಂಡರಿಯದ ಭೀಕರ ಪ್ರವಾಹಕ್ಕೆ ಒಳಗಾದ ವಿಶ್ವದ ದೊಡ್ಡಣ್ಣ | ‘ಐಡಾ’ ಚಂಡಮಾರುತಕ್ಕೆ ಅಮೆರಿಕ ಗಡಗಡ Read More »

ಕಡಬ : ಕೆಮ್ಮಾರ ಹೊಳೆಯಲ್ಲಿ ನೀರುಪಾಲಾದ ಯುವಕನ ಶವ ಉಪ್ಪಿನಂಗಡಿಯಲ್ಲಿ ಪತ್ತೆ

ಕಡಬ ಸೆ 1 : ಕೆಮ್ಮಾರ ಹೊಳೆಯಲ್ಲಿ ನೀರುಪಾಲಾಗಿರುವ ಯುವಕನ ಶವ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಶಫೀಕ್(19) ನೀರುಪಾಲಾದ ಯುವಕ. ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ನೀರಿನಲ್ಲಿ ಕಣ್ಮರೆಯಾಗಿದ್ದನು.ಸತತ ಹುಡುಕಾಟದ ಬಳಿಕ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಕೆಳಗೆ ಗುರುವಾರ ಪತ್ತೆಯಾಯಿತು. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಸ್ಥಳೀಯ ಈಜುಗಾರರು, ಯುವಕರು ಶಫೀಕ್ ಗಾಗಿ ಹುಡುಕಾಟ ನಡೆಸಿದರು.

ಕೊರೋನಾಗೆ ಬಲಿಯಾದ ತಂದೆ, ಅವರ ಸಮಾಧಿಯ ಮುಂದೆಯೇ ತನ್ನ ಹುಟ್ಟುಹಬ್ಬ ಆಚರಿಸಿದ ಪುಟ್ಟ ಕಂದ !!?

ಕೊಪ್ಪಳ:ಅಪ್ಪ-ಮಗಳ ಬಾಂಧವ್ಯ ಬಹಳ ಅಪರೂಪವಾದದ್ದು. ತಾಯಿ ತುತ್ತು ನೀಡಿದರೆ ತಂದೆ ತನ್ನ ಜೀವವೇ ಬದಿಗಿಟ್ಟು ತನ್ನ ಮಗುವಿಗೆ ಆಶ್ರಯದಾತ ಆಗುವನು.ಇಂತಹುದೇ ಒಂದು ತಂದೆ-ಮಗಳ ಸಂಬಂಧದ ಕರಳು ಕಿತ್ತು ಬರುವ ದೃಶ್ಯ ಕೊಪ್ಪಳದಲ್ಲಿ ನಡೆದಿದೆ. ಹೌದು ಈ ಬಾಲಕಿಯ ತಂದೆ ಕ್ರೂರಿ ಕೊರೋನಗೆ ತನ್ನ ಜೀವ ತೆತ್ತಿದ್ದರು. ಆದರೆ ಮಗಳ ಪ್ರೀತಿ ಅವಳ ತಂದೆ ತನ್ನ ಬಳಿ ಇದ್ದಾರೆ ಎಂಬ ನಂಬಿಕೆ ಮೂಡಿಸಿದೆ.ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನಾ ತನ್ನ 8ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ತಂದೆಯ ಸಮಾಧಿ ಮುಂದೆಯೇ …

ಕೊರೋನಾಗೆ ಬಲಿಯಾದ ತಂದೆ, ಅವರ ಸಮಾಧಿಯ ಮುಂದೆಯೇ ತನ್ನ ಹುಟ್ಟುಹಬ್ಬ ಆಚರಿಸಿದ ಪುಟ್ಟ ಕಂದ !!? Read More »

error: Content is protected !!
Scroll to Top