ತಾಲಿಬಾನಿಗಳ ಪೈಶಾಚಿಕ ರೂಪ ಮತ್ತೆ ಪ್ರತ್ಯಕ್ಷ | ಹೆಲಿಕಾಪ್ಟರ್ ಗೆ ನೇತು ಹಾಕಿದ ದೇಹದೊಂದಿಗೆ ಗಸ್ತು, ವಿಡಿಯೋ ವೈರಲ್!

ಕಾಬೂಲ್: ಕಾಬೂಲ್ ನಿಂದ ಅಮೆರಿಕಾ ಸೇನೆ ಜಾಗ ಖಾಲಿ ಮಾಡುತ್ತಿದ್ದಂತೆ ತಾಲಿಬಾನಿಗಳು ಮತ್ತಷ್ಟು ವ್ಯಗ್ರರಾಗಿದ್ದಾರೆ. ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವರು ಪೂರ್ತಿಯಾಗಿ ವಶಪಡಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಕಂದಹಾರ್ ನಲ್ಲಿ ಹೆಲಿಕಾಪ್ಟರ್ ಮೂಲಕ ತಾಲಿಬಾನಿಗಳು ಗಸ್ತು ತಿರುಗುತ್ತಿದ್ದಾರೆ. ಆದರೆ ವಿಡಿಯೋದಲ್ಲಿ ಹೆಲಿಕಾಪ್ಟರ್ ಗೆ ದೇಹವೊಂದನ್ನು ನೇತು ಹಾಕಿರುವುದು ಪತ್ತೆಯಾಗಿದೆ.

ಅಲ್ಲಿನ ಕೆಲ ಮಾಧ್ಯಮಗಳು ತಮ್ಮ ವಿರುದ್ಧ ಹಾಗೂ ಅಮೆರಿಕಾ ಸೇನೆ ಪರ ಕೆಲಸ ಮಾಡಿದ್ದವು. ಹಾಗೆ ಮಾಡಿದ್ದವರನ್ನು ಹುಡುಕಿ ಹುಡುಕಿ ಅವರಿಗೆ ಉಗ್ರ ಶಿಕ್ಷೆಗಳನ್ನು ನೀಡುತ್ತಿದೆ.

Ad Widget / / Ad Widget

ಇನ್ನು ಅಮೆರಿಕಾ ಸೇನೆ ತೆರಳುತ್ತಿದ್ದಂತೆ, ಅಮೆರಿಕಾ ಸೇನೆಗೆ ಭಾಷಾಂತರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆಗಸದಲ್ಲಿ ಹೆಲಿಕಾಫ್ಟರ್ ಗೆ ನೇಣು ಬಿಗಿದು ದುಷ್ಕೃತ್ಯ ಎಸಗಿದೆ ಎಂದು ವರದಿಯಾಗಿದೆ.
ಈ ಹಿಂದಿನ ತಾಲಿಬಾನಿಗಳಂತೆ ನಾವು ಕಠಿಣ ಕಾನೂನುಗಳನ್ನು ತರುವುದಿಲ್ಲ ಎಂದು ಹೇಳುತ್ತಲೇ ತಾಲಿಬಾನಿಗಳು ತಮ್ಮ ರಕ್ಕಸ ರೂಪವನ್ನು ಪ್ರದರ್ಶಿಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: