ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ |ಶೂಟಿಂಗ್ ನಲ್ಲಿ ದೇಶಕ್ಕೆ ಸ್ವರ್ಣ ತಂದ ಅವನಿ ಲೇಖಾರ | ಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ಅವನಿ

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಇಂದು ಮೊದಲ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ . ಶೂಟಿಂಗ್ ನಲ್ಲಿ ಅವನಿ ಲೆಖಾರಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

ಅವನಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದೊರಕಿದೆ.

ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್‌ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಜಯಿಸಿದ ಮೊದಲ ಪ್ತಾರಾಥ್ಲೀಟ್‌ ಎನ್ನುವ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿ ಪಾಲಾಗಿದೆ.

ಇಂದು ಬೆಳಗ್ಗಿನ ಜಾವ 5 ಗಂಟೆಗೆ ಸರಿಯಾಗಿ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವರು ಒಟ್ಟು 249.6 ಅಂಕದೊಂದಿಗೆ ಗೆದ್ದು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಅವನಿ ಒಟ್ಟು 621.7 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ 7 ನೇ ಸ್ಥಾನ ಪಡೆದರು. ಪ್ರಾರಂಭದಲ್ಲಿ ನಿಧಾನವಾದ ಆರಂಭ ಪಡೆದರೂ ನಂತರ ಉತ್ತಮ ಚೇತರಿಕೆಯನ್ನು ಪ್ರದರ್ಶಿಸಿದರು.ಫೈನಲ್ ಪಂದ್ಯದ ವೇಳೆ ಮೂರನೆಯ ಮತ್ತು ನಾಲ್ಕನೇ ಪ್ರಯತ್ನದಲ್ಲಿ ಅವರು 104.9 ಮತ್ತು 104.8 ಅಂಕ ಗಳಿಸಿದರು. ಅರ್ಹತೆಯ ಅಂತಿಮ ಸುತ್ತಿನಲ್ಲಿ 104.1 ಅಂಕಗಳನ್ನು ಗಳಿಸಿ ದಾಖಲೆ ಬರೆದರು.

ಇಂದು ಒಂದೇ ದಿನ ಭಾರತ ನಾಲ್ಕು ಪದಕಗಳನ್ನು ಗೆದ್ದಿದೆ. ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಬೆಳ್ಳಿ ಪದಕ ಪಡೆದರೆ,ಸಂಜೆ ನಿಶದ್ ಕುಮಾರ್ ಅವರು ಪುರುಷರ ಹೈಜಂಪ್ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಬೆಳ್ಳಿ ಜಯಿಸಿದರು. ಮತ್ತು ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕ ಗಿಟ್ಟಿಸಿದರು.

ಇದೀಗ ನಾಲ್ಕನೇ ಪದಕ ಅವನಿ ಅವರ ಪಾಲಾಗುವ ಮೂಲಕ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 4ನೇ ಪದಕ ಜಯಿಸಿದಂತಾಗಿದೆ.

Leave A Reply

Your email address will not be published.