ರಾಜ್ಯದಲ್ಲಿ 6, 7 ಹಾಗೂ 8 ನೇ ತರಗತಿ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ

ರಾಜ್ಯದಲ್ಲಿ 6, 7 ಹಾಗೂ 8 ನೇ ತರಗತಿ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಸೋಮವಾರ ತಜ್ಞರ ಜತೆ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, ಕೋವಿಡ್ ಪಾಸಿಟಿವಿಟಿ ದರ 2 % ಕಡಿಕೆ ಇರುವ ತಾಲೂಕುಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸೆಪ್ಟೆಂಬರ್ 6 ರಿಂದ ಭೌತಿಕ ತರಗತಿಗಳ (6,7,8)ನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡುತ್ತಿದೆ ಎಂದರು.

50% (ಒಂದು ದಿನ ಗ್ಯಾಪ್ ) ಮಕ್ಕಳ ಹಾಜರಾತಿಯೊಂದಿಗೆ ತರಗತಿ ನಡೆಸಲಾಗುತ್ತದೆ. ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಶಾಲೆ ತೆರೆಯಲಿದೆ. ಶನಿವಾರ ಹಾಗೂ ಭಾನುವಾರ ಶಾಲೆ ಇರುವುದಿಲ್ಲ. ಈ ಎರಡು ದಿನ ಶಾಲೆಯನ್ನು ಸ್ಯಾನಿಟೈಸ್ ಹಾಗೂ ಸ್ಚಚ್ಛಗೊಳಿಸುವ ಕಾರ್ಯ ನಡೆಯಲಿದೆ ಎಂದರು.

ಕಳೆದ ವಾರ 9,10 ಹಾಗೂ ಪಿಯು ತರಗತಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಇದೀಗ 6 ರಿಂದ 8 ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.

Leave A Reply

Your email address will not be published.