ಮೈಸೂರು :ಅತ್ಯಾಚಾರಿಗಳಿಂದ ಹೊರಬರುತ್ತಿದೆ ಒಂದೊಂದೇ ಮಾಹಿತಿ!!ಮೂವರು ಪ್ರೇಯಸಿಯರು ಮಾಡಿದ ಮೋಸಕ್ಕೆ ಆತ ವಿಕೃತನಾಗಿದ್ದ

ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ವಿಚಾರಣೆಯ ವೇಳೆ ಆರೋಪಿಗಳು ಇನ್ನೊಂದು ಮಾಹಿತಿಯನ್ನು ವಿವರಿಸಿದ್ದಾರೆ.

ಇಡೀ ರಾಜ್ಯವೇ ಒಂದುಕ್ಷಣ ಗಾಬರಿಯಿಂದ ಮೈಸೂರಿನತ್ತ ನೋಡುವಂತೆ ಮಾಡಿದ ಆ ಪ್ರಕರಣದ ಆರೋಪಿಗಳಲ್ಲಿ ಓರ್ವ ಸದಾ ಕಾಂಡೊಮ್ ನ್ನು ಜೇಬಿನಲ್ಲಿ ಇರಿಸಿಕೊಂಡು ತಿರುಗಾಡುತ್ತಿದ್ದ ಅದಲ್ಲದೇ,ತನಗೆ ಮೂವರು ಪ್ರೇಯಸಿಯರು ಮಾಡಿದ ಮೋಸಕ್ಕೆ ಈ ರೀತಿ ವಿಕೃತನಾಗಿದ್ದ ಎಂಬ ಮಾಹಿತಿ ಬಯಲಾಗಿದೆ.ಈ ಮಧ್ಯೆ ಇನ್ನಿಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಕಠಿಣವಾಗಿದೆ.

ಆರೋಪಿಗಳಲ್ಲಿ ಕೆಲವರು ಹಣಕ್ಕಾಗಿ ದರೋಡೆ ನಡೆಸುತ್ತಿದ್ದರೆ, ಉಳಿದವನೊಬ್ಬ ಹೆಣ್ಣಿಗಾಗಿ ಚಡಪಡಿಸುತ್ತಿದ್ದ ಎಂಬ ಮಾಹಿತಿ ತಿಳಿದ ಪೊಲೀಸರು ವಿಚಾರಣೆ ಮುಂದುವರಿಸಿದಾಗ ಇನ್ನೂ ಹೆಚ್ಚಿನ ಮಾಹಿತಿ ಬಯಲಾಗಿದ್ದು, ಈ ಅತ್ಯಾಚಾರಕ್ಕೂ ಮುನ್ನ ಆರೋಪಿ ಅನೇಕ ಮಹಿಳೆಯರನ್ನು ತನ್ನ ಕಾಮ ತೀರಿಸಿಕೊಳ್ಳಲು ಬಳಸಿಕೊಂಡಿರುವುದಾಗಿ, ಹಾಗೂ ನಿರ್ಜನ ಪ್ರದೇಶಕ್ಕೆ ಪುರುಷರೊಂದಿಗೆ ಬರುವ ಮಹಿಳೆಯರು, ಪ್ರೇಮಿಗಳು ಈತನ ಟಾರ್ಗೆಟ್ ಆಗಿದ್ದರು. ಈತನ ಉದ್ದೇಶವೇ ಅತ್ಯಾಚಾರ, ಕಾಮ ವಾಗಿತ್ತು ಎಂಬ ಮಾಹಿತಿ ಬಯಲಾಗಿದೆ.

Ad Widget
Ad Widget

Ad Widget

Ad Widget

ಅದಲ್ಲದೇ ಸ್ಥಳ ಮಹಜರು ವೇಳೆಯಲ್ಲಿ ಪತ್ತೆಯಾಗಿದ್ದ ಕಾಂಡೊಮ್ ಕೂಡಾ ಈತನದ್ದೇ ಎನ್ನುವ ವಿಚಾರವೂ ತಿಳಿದುಬಂದಿದ್ದು, ಈತ ಅವಕಾಶ ಸಿಕ್ಕಾಗಲೆಲ್ಲ ಯುವತಿಯರ ಮೇಲೇರಗುತ್ತಿರುವ ವಿಚಾರ ಈ ಮೊದಲೇ ತಿಳಿದಿದ್ದರೂ, ಯಾರೂ ಕೂಡಾ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.

Leave a Reply

error: Content is protected !!
Scroll to Top
%d bloggers like this: