ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ತರಗತಿ

ಪುತ್ತೂರು, ಆ 29 : ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ತರಗತಿಗಳು ನಡೆಯಲಿದೆ. ಪ್ರತಿ ಸೋಮವಾರ ಸಂಜೆ ಈ ತರಗತಿಗಳು ನಡೆಯಲಿದ್ದು, 15 ವರ್ಷದೊಳಗಿನ ಮಕ್ಕಳು ಈ ತರಗತಿಗಳಲ್ಲಿ ಭಾಗವಹಿಸಬಹುದಾಗಿದೆ.

ದೈನಂದಿನ ಆಚಾರ- ವಿಚಾರ, ಶ್ಲೋಕಗಳು, ಪುರಾಣ ಕತೆಗಳು, ನೀತಿಕತೆಗಳು, ಭಜನೆ ಇತ್ಯಾದಿಗಳನ್ನು ಈ ಯೋಜನೆಯು ಒಳಗೊಂಡಿರುತ್ತದೆ. ಕ್ರಿಯಾತ್ಮಕವಾಗಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಶಿಕ್ಷಣವು ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಹಾಗೂ ನೊಂದಾವಣೆಗೆ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು. 08251-230511, ವೀಣಾ ಬಿ ಕೆ 9481443214

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: