ಮದುವೆ ಮಂಟಪದಲ್ಲಿ ಗುಟ್ಕಾ ಅಗೆಯುತ್ತಿದ್ದ ವರನನ್ನು ನೋಡಿ ಕೆರಳಿದ ವಧು | ಕೆನ್ನೆಗೆ ಬಾರಿಸಿ ಗುಟ್ಕಾ ಉಗಿಯಲು ಹೇಳಿದ ವಿಡಿಯೋ ವೈರಲ್ !

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳ ಮಹಾಪೂರವೇ ಹರಿದು ಬರುತ್ತಿವೆ. ಕೆಲವು ವಿಡಿಯೋಗಳು ಹೆಚ್ಚು ತಮಾಷೆಯಾಗಿರುತ್ತವೆ. ಅಂಥಹುದೆ ವಿಡಿಯೋ ಇದಾಗಿದ್ದು ಫುಲ್ ವೈರಲ್ ಆಗಿದೆ. ಮದುವೆ ಮಂಟಪದಲ್ಲಿಯೇ ವರನನ್ನು ನೋಡಿದ ವಧು ಕೆನ್ನೆಗೆ ಬಾರಿಸಿದ್ದಾಳೆ.

ವರ ಆಗಲೇ ಮದುವೆ ಮಂಟಪದಲ್ಲಿ ಬಂದಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಬಳಿಕ ವಧು ಮಂಟಪಕ್ಕೆ ಪ್ರವೇಶಿಸುತ್ತಾಳೆ. ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ವರನ ಕೆನ್ನೆಗೆ ಬಾರಿಸಿದ್ದಾಳೆ. ಅಷ್ಟಕ್ಕೂ ಆ ವರ ಮಹಾಶಯ ಮಾಡಿದ ಕೆಲಸವಾದರೂ ಏನು ಗೊತ್ತಾ ?!

ಆತನೋ ಅದು ಮದುವೆ ಮಂಟಪವೆಂದೂ ನೋಡದೆ ಬಾಯಲ್ಲಿ ಗುಟ್ಕಾ ಹಾಕಿಕೊಂಡು ನೆಮಲುತ್ತಿದ್ದ. ಅದೇನೋ ಕಾರಣಕ್ಕೆ ಮೊದಲೇ ಗರಮ್ಮಾಗಿದ್ದ ಭಾವೀ ಮನೆಯೊಡತಿ ವರನ ಬಾಯೊಳಗಿನ ಗುಟ್ಕಾ ಮತ್ತದರ ವಾಸನೆ ಕಂಡು ಕೆರಳಿದ್ದಳು. ಮಂಟಪದಲ್ಲಿ ಕುಳಿತಿದ್ದಂತೆಯೇ ಒಂದು ತಪರಾಕಿ ವರನಿಗೆ ಕೊಟ್ಟರು ನೋಡಿ, ಏಟು ಬೀಳುತ್ತಿದ್ದಂತೆಯೇ ವರ ಕಕ್ಕಾಬಿಕ್ಕಿಯಾಗಿ ಎದ್ದು ಹೋಗಿ ಗುಟ್ಕಾವನ್ನು ಉಗುಳಿ ಬರುವುದನ್ನು ದೃಶ್ಯದಲ್ಲಿ ನೋಡಬಹುದು. ಸುತ್ತಲಿರುವ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದ್ದು ಫುಲ್ ವೈರಲ್ ಆಗಿದೆ. ದೃಶ್ಯ ನಡೆದಿರುವ ಸ್ಥಳ ಎಲ್ಲಿ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದೀಗ ದೃಶ್ಯಕ್ಕೆ ಮ್ಯೂಸಿಕ್ ಹೊಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

Ad Widget
Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: