ಕೋವಿಡ್ ಪಾಸಿಟಿವ್ ಬಂದ ಸುಬ್ರಹ್ಮಣ್ಯದ ಡಾ.ಬಿ.ಕೆ.ಭಟ್ ನಿಧನ

ಸುಬ್ರಹ್ಮಣ್ಯ: ಹೆಸರಾಂತ ವೈದ್ಯ, ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಡಾ. ಬಿ ಕೆ ಭಟ್ ಶನಿವಾರ ತಡ ರಾತ್ರಿ ನಿಧನರಾದರು.

ನ್ಯೂಮೋನಿಯಾ ಇದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿತ್ತೆನ್ನಲಾಗಿದೆ.ಇವರಿಗೆ ಅಂದಾಜು 55 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಒರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿರುವುದಾಗಿ ತಿಳಿದು ಬಂದಿದೆ.

Leave A Reply

Your email address will not be published.