ಕಾಬುಲ್ ನ ರಕ್ತರಾತ್ರಿ ಗೆ ಪ್ರತೀಕಾರ ತೀರಿಸಿಕೊಂಡಿತೇ ಅಮೇರಿಕಾ ?? | ದಾಳಿಯ ಹೊಣೆ ಹೊತ್ತಿದ್ದ ಐಎಸ್-ಕೆ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಯಿತು ಡ್ರೋನ್ ದಾಳಿ !!

ಅಫ್ಘಾನಿಸ್ತಾನ ರಾಜಧಾನಿ ಕಾಬುಲ್ ನ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರತೀಕಾರದ ಮಾತನಾಗಳನ್ನಾಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ಸೇನ ಪಡೆ ಕಾಬುಲ್ ಏರ್‌ಪೋರ್ಟ್‌ ದಾಳಿಯ ಹೊಣೆ ಹೊತ್ತಿದ್ದ ಐಎಸ್-ಕೆ ಉಗ್ರರನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಇದರಲ್ಲಿ ಕಾಬೂಲ್ ದಾಳಿ ಹಿಂದಿರುವ ಐಎಸ್-ಕೆ ಸದಸ್ಯ ಮೃತಪಟ್ಟಿದ್ದಾನೆ ಎಂಬ ವಿಷಯವೂ ಹೊರಬಿದ್ದಿದೆ.

ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಡ್ರೋನ್ ದಾಳಿ ನಡೆದಿದೆ. ತಾವು ಹಾಕಿಕೊಂಡಿದ್ದ ಗುರಿಯನ್ನು ಹೊಂದಿರುವ ಆರಂಭಿಕ ಸೂಚನೆ ಇದೆ ಎಂದು ಕೇಂದ್ರ ಕಮ್ಯಾಂಡ್ ಕ್ಯಾಪ್ಟನ್ ಬಿಲ್ ಅರ್ಬನ್ ತಿಳಿಸಿದ್ದಾರೆ. ಯಾವುದೇ ನಾಗರಿಕ ಸಾವು-ನೋವುಗಳು ಸಂಭವಿಸಿಲ್ಲ ಅಂತಲೂ ಹೇಳಿದ್ದಾರೆ. ಕಾಬುಲ್ ದಾಳಿ ಹಿಂದಿರುವ ಐಎಸ್-ಕೆ ಸದಸ್ಯ ದಾಳಿಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕಾಬುಲ್ ಏರ್ಪೋರ್ಟ್ ದಾಳಿಯ ಬೆನ್ನಲ್ಲೇ ನಿನ್ನೆ ವೈಟ್‌ಹೌಸ್‌ನಲ್ಲಿ ಮಾತನಾಡಿದ್ದ ಜೋ ಬೈಡೆನ್, ಈ ದಾಳಿಯನ್ನು ಮಾಡಿದವರಿಗೆ ಹಾಗೂ ಅಮೆರಿಕಕ್ಕೆ ಹಾನಿ ಬಯಸುವ ಯಾರಿಗಾದರೂ ಇದು ತಿಳಿದಿರಲಿ, ನಾವು ನಿಮ್ಮನ್ನು ಕ್ಷಮಿಸುವುದಿಲ್ಲ. ನಾವು ಎಂದಿಗೂ ಮರೆಯುವುದಿಲ್ಲ. ನಿಮ್ಮನ್ನು ಹುಡುಕಿ ಬೇಟೆಯಾಡುತ್ತೇವೆ. ನೀವು ಮಾಡಿದ ಕೃತ್ಯಕ್ಕೆ ನೀವು ಬೆಲೆತೆರೆಲೇಬೇಕು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಉಗ್ರರ ಮೇಲಿನ ದಾಳಿಗೆ ಯೋಜನೆ ರೂಪಿಸುವಂತೆ ತಮ್ಮ ಸೇನೆಗೆ ಆದೇಶವನ್ನು ನೀಡಿದ್ದರು.

ಗುರುವಾರ ರಾತ್ರಿ ಕಾಬುಲ್ ನಲ್ಲಿ ಐಎಸ್-ಕೆ ಸಂಘಟನೆ ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಮೆರಿಕ ಸೇನೆಯ 13 ಯೋಧರು ಮೃತಪಟ್ಟಿದ್ದರು. ಒಟ್ಟು ಸಾವಿನ ಸಂಖ್ಯೆ 170 ರ ಗಡಿ ದಾಟಿತ್ತು. ಹೀಗಿದ್ದರೂ ಸಾಕಷ್ಟು ಭದ್ರತೆಯೊಂದಿಗೆ ಅಮೆರಿಕ ಮತ್ತೆ ತನ್ನ ಸ್ಥಳಾಂತರ ಕಾರ್ಯವನ್ನು ಮುಂದುವರಿಸಿದೆ.

Leave A Reply

Your email address will not be published.