ಭಾರತದಲ್ಲಿ ದಾಖಲೆ ಬರೆದ ನಿನ್ನೆಯ ಲಸಿಕಾ ಅಭಿಯಾನ ಕಾರ್ಯಕ್ರಮ | ಒಂದೇ ದಿನದಲ್ಲಿ ಒಂದು ಕೋಟಿ ಲಸಿಕೆ ವಿತರಣೆ !

ಕೊರೋನಾದಿಂದ ದೂರವಿರಲು ಲಸಿಕೆ ಪಡೆಯುವುದು ಅತೀ ಮುಖ್ಯವಾಗಿದೆ. ಇದೀಗ ಲಸಿಕೆ ಅಭಿಯಾನದಲ್ಲಿ ಶುಕ್ರವಾರ ಒಂದೇ ದಿನ 1 ಕೋಟಿ ಲಸಿಕೆಯನ್ನು ಭಾರತ ವಿತರಣೆ ಮಾಡುವ ಮೂಲಕ ದಾಖಲೆ ಬರೆದಿದೆ.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಲಸಿಕೆ ಉತ್ಸವ ಆಯೋಜಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ.

ಕೊರೋನದಿಂದ ಮುಕ್ತಿ ಪಡೆಯಲು ನಮಗೆಲ್ಲರಿಗೂ ಅವಶ್ಯವಾಗಿ ಮತ್ತು ಅನಿವಾರ್ಯ ಆಗಿರುವುದು ಲಸಿಕೆ. ನಮ್ಮ ರಕ್ಷಣೆ ನಮ್ಮಿಂದ ಪ್ರಾರಂಭವಾದರೆ, ದೇಶವೇ ರಕ್ಷಣೆ ಆಗಬಹುದು.

ಒಂದೇ ದಿನದಲ್ಲಿ 1 ಕೋಟಿ ಲಸಿಕೆ ವಿತರಿಸುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಖಾತೆಯ ಸಚಿವ ಮನ್‍ಸುಖ್ ಮಾಂಡವ್ಯ ಹೇಳಿದ್ದಾರೆ.

ನರೇಂದ್ರ ಮೋದಿ ಟ್ವೀಟ್ ಮಾಡಿ, 1 ಕೋಟಿ ದಾಟುವುದು ಒಂದು ಮಹತ್ವದ ಸಾಧನೆ. ಲಸಿಕೆ ಹಾಕಿಸಿಕೊಂಡವರಿಗೆ ಮತ್ತು ಲಸಿಕೆ ಹಾಕುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.