ಕಡಬ:ಅಕ್ರಮ ಕಸಾಯಿಖಾನೆಗೆ ಬೆಳ್ಳಂಬೆಳಗ್ಗೆ ಪೊಲೀಸರಿಂದ ದಾಳಿ: ಓರ್ವ ವಶಕ್ಕೆ, ಇಬ್ಬರು ಪರಾರಿ , ಕರುಗಳ ರಕ್ಷಣೆ

ಕಡಬ:ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದ್ದ ಸ್ಥಳಕ್ಕೆ ಕಡಬ ಠಾಣಾ ಉಪನಿರೀಕ್ಷಕ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರು ಆ.27ರಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಕಡಬ ಗ್ರಾಮದ ಕಳಾರ ಎಂಬಲ್ಲಿ ಮಹಮ್ಮದ್ ಇಸ್ಮಾಯಿಲ್ ರವರ ಹಳೆಯ ಮನೆಯ ಹಿಂಬದಿಯ ಶೆಡ್ ಒಂದರಲ್ಲಿ ಅಕ್ರಮವಾಗಿ ದನದ ಮಾಂಸ ಮಾಡುತ್ತಿರುವ ಕುರಿತು ಬಂದ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.

ಅಕ್ರಮವಾಗಿ ಮಾಂಸ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದು ಆರೋಪಿ ಅಬ್ದುಲ್ ರಹಿಮಾನ್ ಎಂಬಾತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ದನದ ಕರುವನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಪ್ಲಾಸ್ಟೀಕ್ ಟಾರ್ಪಾಲಿನಲ್ಲಿದ್ದ ಸುಮಾರು40 ಕೆ.ಜಿ ಯಷ್ಟು ದನದ ಮಾಂಸ, ದನದ ನಾಲ್ಕು ಕಾಲುಗಳು (ಕಳೆಬರಹ), ಎಲೆಕ್ಟ್ರಾನಿಕ್ ತೂಕಮಾಪನ-01, ಕಬ್ಬಿಣದ ಸತ್ತಾರ್ ಕತ್ತಿಗಳು-02,ಕಬ್ಬಿಣದ ಚೂರಿಗಳು-03, ಕಾಟು ಮರದ ತುಂಡು-01, ಶೆಡ್ ನ ಹೊರಗಡೆ ಕಟ್ಟಿ ಹಾಕಿದ್ದ ನಾಲ್ಕು ದನದ ಕರುಗಳನ್ನು ವಶಕ್ಕೆ ಪಡೆಯಲಾಗಿದೆ.

ಸ್ವಾಧೀನಪಡಿಸಿಕೊಂಡ ವಧೆ ಮಾಡಿದ ದನ ಕರುವಿನ ಮಾಂಸ ಹಾಗೂ ಜೀವಂತ ದನದ ಕರುಗಳ ಅಂದಾಜು ಮೌಲ್ಯ 19.500/- ಆಗಬಹುದು . ಆರೋಪಿತರಾದ ಮಹಮ್ಮದ್ ಶರೀಫ್ ಮತ್ತು ಮಹಮ್ಮದ್ ಮುಸ್ತಫ ಎಂಬವರು ಓಡಿ ಪರಾರಿಯಾಗಿದ್ದಾರೆ.

Leave A Reply

Your email address will not be published.