ಪಾಪಿ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ತುತ್ತು ಅನ್ನ, ಒಂದು ತೊಟ್ಟು ನೀರಿಗೂ ಪರದಾಟ !!ದುಬಾರಿ ಬೆಲೆಯಲ್ಲಿ ಕೊಳ್ಳಲು ಅಸಹಾಯಕರಾಗಿರುವ ಮಧ್ಯಮ ವರ್ಗ

ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿರುವುದರಿಂದ ಅಲ್ಲಿನ ಜನರು ಈಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶ ತೊರೆಯಲು ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿರುವ ಜನರಿಗೆ ಅಲ್ಲಿನ ನೀರು ಮತ್ತು ಆಹಾರಗಳ ಬೆಲೆ ಕಂಡು ದಿಗ್ಭ್ರಮೆಯುಂಟಾಗಿದೆ.

ಹೌದು, ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆಯೇ ಆರ್ಥಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಿದೆ. ದೇಶ ತೊರೆಯಲು ಮುಂದಾಗಿ ಕಾಬೂಲ್ ವಿಮಾನನಿಲ್ದಾಣ ತಲುಪಿರುವ ಜನರಿಗೆ ಮೂರು ಸಾವಿರ ರೂಪಾಯಿ ನೀಡಿ ಒಂದು ಬಾಟೆಲ್ ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಇತ್ತ ಒಂದು ಪ್ಲೇಟ್ ರೈಸ್‍ಗೆ 7,500 ರೂ. ನೀಡಲಾಗುತ್ತಿದೆ. ಹೇಗಾದ್ರೂ ಮಾಡಿ ಇಲ್ಲಿಂದ ಹೋದ್ರೆ ಸಾಕು ಅಂತಿರುವ ಜನರು ಅನಿವಾರ್ಯವಾಗಿ ಇಷ್ಟು ಹಣ ನೀಡಿ ಆಹಾರ ಖರೀದಿಸುತ್ತಿದ್ದಾರೆ. ಆದ್ರೆ ಮಧ್ಯಮ ವರ್ಗದ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತಾಗಿದೆ.

ಈ ರೀತಿಯ ಕಷ್ಟಗಳು ಎದುರಾದ್ರೂ ಜನ ಮತ್ತೆ ತಮ್ಮ ಮನೆಗಳಿಗೆ ಹಿಂದಿರುಗುವ ಬಗ್ಗೆ ಆಲೋಚನೆಯೂ ಮಾಡುತ್ತಿಲ್ಲ. ಮತ್ತೊಂದು ಕಡೆ ವಿಮಾನ ಏರುವ ತಮ್ಮ ಸರದಿಗಾಗಿ ಕಾಯುತ್ತಿರುವ ಜನರ ಸಹಾಯಕ್ಕೆ ಅಮೆರಿಕ ಸೈನಿಕರು ಮುಂದಾಗಿದ್ದು, ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನೀರು ಮತ್ತು ಆಹಾರ ಮಾರಾಟ ಮಾಡಲಾಗುತ್ತಿದೆ. ಆರ್ಥಿಕವಾಗಿ ಸಶಕ್ತರಾಗಿರುವವರು ಹಣ ನೀಡಿ ಖರೀದಿಸುತ್ತಿದ್ದಾರೆ.

ಇನ್ನು ಕೆಲ ಮಾರಾಟಗಾರರು ಡಾಲರ್ ನೀಡಿದ್ರೆ ಮಾತ್ರ ಆಹಾರ ನೀಡುತ್ತಿದ್ದಾರೆ. ಕೆಲವರು ಆಹಾರವಿಲ್ಲದೇ ಕುಳಿತಲ್ಲಿಯೇ ಕುಸಿದು ಬೀಳುತ್ತಿರುವ ಬಗ್ಗೆಯೂ ವರದಿಯಾಗಿವೆ.

ತಾಲಿಬಾನಿಗಳು ಕಾಬೂಲ್ ವಶಕ್ಕೆ ಪಡೆದ ನಂತರ ಸುಮಾರು 75,900 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಇದರಲ್ಲಿ ಅಮೆರಿಕ 70,700 ಜನರನ್ನು ರಕ್ಷಣೆ ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದತ್ತ ಬರುವ ಜನರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ. ಇನ್ನು ಸುಮಾರು 2 ಲಕ್ಷಕ್ಕೂ ಅಧಿಕ ಜನರು ಅಫ್ಘಾನಿಸ್ತಾನಕ್ಕೆ ಗುಡ್ ಬೈ ಹೇಳಲು ಸಿದ್ಧರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.