ಬೆಳ್ತಂಗಡಿ: ಮದುವೆ ಮಂಟಪ ದಲ್ಲಿ 50ಕ್ಕಿಂತ ಹೆಚ್ಚು ಜನ | ಸಭಾಂಗಣ ಮಾಲಕರಿಗೆ, ಮದುವೆ ಮನೆಯವರಿಗೆ ದಂಡ ವಿಧಿಸಿದ ತಹಶೀಲ್ದಾರ್

ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಸಭಾಭವನವೊಂದರಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಅನುಮತಿ ಪಡೆದುಕೊಂಡಿರುವುದಕ್ಕಿಂದ ಹೆಚ್ಚಿನ ಜನರು ಇರುವ ಮಾಹಿತಿ ತಿಳಿದ ತಹಶೀಲ್ದಾರ್ ಹಾಗೂ ತಂಡದವರು ಸ್ಥಳಕ್ಕೆ ಧಾಳಿ ನಡೆಸಿ ದಂಡ ವಿಧಿಸಿದ ಘಟನೆ ಆ.26 ರಂದು ನಡೆದಿದೆ.

ಈ ಮದುವೆಗೆ ಅಳದಂಗಡಿ ಗ್ರಾಮ ಪಂಚಾಯತ್ ನಿಂದ 50 ಜನರಿಗೆ ಅನುಮತಿ ಪಡೆದಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಮೀರಿ 50 ಕ್ಕಿಂತಲೂ ಅಧಿಕ ಜನರು ನೆರೆದಿರುವುದನ್ನು ಗಮನಿಸಿದ ತಹಶೀಲ್ದಾರರ ತಂಡ ಸಭಾಭವನದ ಮಾಲಕರಿಗೆ ರೂ. 7500 ಹಾಗೂ ಮದುವೆ ಮನೆಯವರಿಗೆ ರೂ5000 ಸೇರಿದಂತೆ ಒಟ್ಟು 12500/- ದಂಡ ವಿಧಿಸಿ, ಮುನ್ನೆಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪ್ರೊಬೆಷನರಿ ತಹಶಿಲ್ದಾರ್ ಮಹಮ್ಮದ್ ಅಲಿ ಅಕ್ರಂ ಷಾ, ಅಳದಂಗಡಿ ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಕರಣಿಕ ನಿತೇಶ್ ಜೈನ್, ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.