ಜಾಗತಿಕವಾಗಿ 2ನೇ ಆಕರ್ಷಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದ ಭಾರತ | ವಿಶ್ವದ ದೊಡ್ಡಣ್ಣ ಅಮೇರಿಕಾವನ್ನೇ ಹಿಂದಿಕ್ಕಿದ ನವ ಭಾರತ

ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಚಾರವೊಂದು ನಡೆದಿದ್ದು, ಉತ್ಪಾದಕರು ತಮ್ಮ ಆದ್ಯತೆಯಾಗಿ ಬಯಸುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ಮೂಲಕ ಭಾರತ ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಹಿಂದಿಕ್ಕಿದೆ.

ಈ ಹಿಂದಿನಿಂದಲೂ ಮೊದಲ ಸ್ಥಾನದಲ್ಲಿರುವ ಚೀನಾ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಎರಡನೇ ಸ್ಥಾನದಲ್ಲಿದ್ದ ಅಮೆರಿಕಾವನ್ನು ಭಾರತ ಹಿಂದಿಕ್ಕಿದೆ. ಉತ್ಪಾದಕರ ಪ್ರಕಾರ ಗುಣಮಟ್ಟ, ಖರ್ಚು, ಸ್ಪರ್ಧಾತ್ಮಕತೆ ಗಳನ್ನು ಪರಿಶೀಲಿಸಿದರೆ ಭಾರತ ಉತ್ಪಾದಕರಿಗೆ ಪ್ರಿಯವೆನಿಸಿಕೊಂಡಿದೆ.

ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ ‘ಕುಶ್‌ಮನ್ ಆ್ಯಂಡ್ ವೇಕ್‌ಫೀಲ್ಡ್’ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಯೂರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಏಷ್ಯಾ-ಫೆಸಿಫಿಕ್ ಪ್ರದೇಶದ 47 ದೇಶಗಳನ್ನು ಸಂಸ್ಥೆಯು ಪರಿಗಣಿಸಿದ್ದು, ಭಾರತವು ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

Ad Widget
Ad Widget

Ad Widget

Ad Widget

ಇನ್ನು ಅಮೆರಿಕಾ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೆನಡಾ, ಜೆಕ್ ಗಣರಾಜ್ಯ, ಇಂಡೊನೇಷ್ಯಾ, ಲಿಥುವೇನಿಯಾ, ಥೈಲ್ಯಾಂಡ್, ಮಲೇಷಿಯಾ, ಮತ್ತು ಪೋಲೆಂಡ್ ದೇಶಗಳು ಅಮೆರಿಕಾದ ನಂತರದ ಸ್ಥಾನಗಳಲ್ಲಿವೆ.

ಕುಶ್‌ಮನ್ ಮತ್ತು ವೇಕ್‌ಫೀಲ್ಡ್ 2021 ಜಾಗತಿಕ ಉತ್ಪಾದನಾ ಅಪಾಯದ ಸೂಚ್ಯಂಕವು ಚೀನಾದಿಂದ ಏಷ್ಯಾದ ಇತರ ಭಾಗಗಳಿಗೆ ಸ್ಥಳಾಂತರಗೊಳ್ಳುವ ಕಂಪನಿಗಳ ಪ್ರಯೋಜನವನ್ನು ಭಾರತ ಪಡೆಯಬಹುದು ಎಂದು ಹೇಳಿದೆ. ಏಕೆಂದರೆ ಇದು ಈಗಾಗಲೇ ಔಷಧೀಯ, ರಾಸಾಯನಿಕ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸ್ಥಾಪಿತವಾದ ನೆಲೆಯನ್ನು ಹೊಂದಿದೆ. ಯುಎಸ್ ಕೇಂದ್ರಬಿಂದುವಾಗಿದ್ದು, ಚೀನಾ ವ್ಯಾಪಾರ ಉದ್ವಿಗ್ನತೆ ಜೊತೆಗೆ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಭೂಮಿ ಮತ್ತು ಕಾರ್ಮಿಕ ಕಾನೂನುಗಳಲ್ಲಿನ ಸುಧಾರಣೆಗಳು ನಿರ್ಣಾಯಕ ಎಂದು ಅದು ಹೇಳಿದೆ.

ತಯಾರಿಕಾ ವಲಯದ ಉದ್ದಿಮೆಗಳು ಭಾರತದ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಸಂಸ್ಥೆಯು ಹೇಳಿದೆ. ಅಂತೆಯೇ ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಕೂಡ ಭಾರತಕ್ಕೆ ಲಾಭವಾಗಿ ಪರಿಣಮಿಸಿದೆ.

ಅಮೆರಿಕಾ ಈಗಲೂ ಅಪೇಕ್ಷಣೀಯ ಕೇಂದ್ರವಾಗಿದೆ. ಏಕೆಂದರೆ ಇದು ರಾಜ್ಯ ಮತ್ತು ಫೆಡರಲ್ ಮಟ್ಟದಲ್ಲಿ ದೊಡ್ಡ ಗ್ರಾಹಕ ಮಾರುಕಟ್ಟೆಯನ್ನು ಹಾಗೂ ಪ್ರೋತ್ಸಾಹವನ್ನು ನೀಡುತ್ತದೆ. ಆದರೆ ತಂತ್ರಜ್ಞಾನ ಮತ್ತು ನೀತಿಗಳ ತ್ವರಿತ ಅಳವಡಿಕೆಯು ಚೀನಾಕ್ಕೆ ಕಠಿಣ ಪ್ರತಿಸ್ಪರ್ಧಿಯಾಗಬಹುದು ಎಂದು ವರದಿ ಹೇಳಿದೆ.

ವೆಚ್ಚದ ವಿಚಾರಕ್ಕೆ ಬಂದಾಗ, ಭಾರತ ಮತ್ತು ವಿಯೆಟ್ನಾಂ ಅನ್ನು ಇಂಡೋನೇಷ್ಯಾ ಹಿಂದಿಕ್ಕಿದೆ. ಆದರೆ ಚೀನಾ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿತು. ಭಾರತ ಮೂರನೇ ಸ್ಥಾನಕ್ಕೆ ಕುಸಿದಿದ್ದರೆ, ಇಂಡೋನೇಷ್ಯಾ ಐದನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ.

ಕಳೆದ ವರ್ಷದ ಕುಶ್‌ಮನ್ ಆ್ಯಂಡ್ ವೇಕ್ ಫೀಲ್ಡ್ ಸೂಚ್ಯಂಕದಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಸದ್ಯ ಆಗಿರುವ ಈ ಬೆಳವಣಿಗೆ ನೋಡಿದರೆ, ಕೊರೋನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತ ಉದ್ಯಮಿಗಳ ಪ್ರೀತಿಯನ್ನು ಉಳಿಸಿಕೊಂಡಿದೆ ಮಾತ್ರವಲ್ಲ, ಹೆಚ್ಚಿಸಿಕೊಂಡಿದೆ ಎನ್ನಬಹುದು.

Leave a Reply

error: Content is protected !!
Scroll to Top
%d bloggers like this: