ದೈಪಿಲ ಶ್ರೀ ಕ್ಷೇತ್ರದಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ದೈವದ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

ಕಾಣಿಯೂರು: ತುಳುನಾಡಿನ ಅತ್ಯಂತ ಪುರಾತನ ಸುಮಾರು ೮೦೦ ವರ್ಷದ ಇತಿಹಾಸವಿರುವ ಕಾರಣಿಕ ಕ್ಷೇತ್ರವಾಗಿರುವ ಚಾರ್ವಾಕ ಗ್ರಾಮದ ದೈಪಿಲ ಕ್ಷೇತ್ರದಲ್ಲಿ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೂತನ ದೈವಸ್ಥಾನದ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಶ್ರೀ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಆ 22ರಂದು ನಡೆಯಿತು. ಈ ಸಂದರ್ಭದಲ್ಲಿ ಅರುವಗುತ್ತಿನ ಯಜಮಾನರಾದ ಪ್ರದೀಪ್ ಆರ್ ಗೌಡ,
ಅರುವಗುತ್ತು ಚಂದ್ರಕಲಾ ಸಿ.ಜೆ,
ಪ್ರವೀಣ್ ಕುಂಟ್ಯಾನ, ಪರಮೇಶ್ವರ ಗೌಡ ಮೀಯೊಳ್ಪೆ, ಶೇಖರ ಗೌಡ ಅಂಬುಲ, ಕೃಷ್ಣಪ್ಪ ಗೌಡ ಕೆಳಗಿನಕೇರಿ, ಪ್ರಕಾಶ್ ಆರುವಾಗುತ್ತು, ನಾರಾಯಣ ಮಡಿವಾಳ ಹಾಗೂ ನಾಲ್ಕು ಪ್ರಮುಖ ಮನೆಯವರು, ೧೪ ವರ್ಗದವರು ಹಾಗೂ ಊರ ಕೂಡುಕಟ್ಟಿನವರು ಉಪಸ್ಥಿತರಿದ್ದರು.

Leave A Reply

Your email address will not be published.